ಚಿಮ್ಮಡ: ವಿದ್ಯುತ್ ಉಪಯೋಗದ ಹಾಗೂ ಅದರಿಂದಾಗುವ ಅನಾಹುತಗಳ ಕುರಿತ ಸಂಪೂರ್ಣ ಮಾಹಿತಿ ಪ್ರತಿಯೊಬ್ಬರಿಗೆ ತಿಳಿದಿರಬೇಕಾದ ಅವಶ್ಯಕತೆ ಇದೆ ಎಂದು ಹೆಸ್ಕಾಂ ರಬಕವಿ ವಿಭಾಗೀಯ ಅಧಿಕಾರಿ ಸುನೀಲ ಮುಧೋಳ ಹೇಳಿದರು.
ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೋಳ್ಳಲಾಗಿದ್ದ ವಿದ್ಯುತ್ ಸುರಕ್ಷತಾ ಮಾಶಾಚರಣೆ ಹಾಗೂ ಅಭಿಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯುತ್ ಪ್ರಸರಣದಿಂದ ಪ್ರತಿಯೊಬ್ಬರು ಸುರಕ್ಷತೆಯ ಅಂತರ ಕಾಯ್ದುಕೊಳ್ಳಬೇಕು, ವಿದ್ಯುತ್ ಉಳಿತಾಯಕ್ಕಾಗಿ ಐಎಸ್‌ಐ ಮಾರ್ಕ ಹೊಂದಿರುವ ಗುಣಮಟ್ಟದ ಸುರಕ್ಷತೆ ಹೊಂದಿರುವ ವಿದ್ಯುತ್ ಸಲಕರಣೆಗಳನ್ನು ಮಾತ್ರ ಖರೀದಿಸಬೇಕು. ಅನವಶ್ಯಕ ವಿದ್ಯುತ್ ಬಳಕೆ ನಿಲ್ಲಿಸಬೇಕು, ವಿದ್ಯುತ್ ಕಂಬ, ತಂತಿಗಳ ಮೇಲೆ ಬಟ್ಟೆ ಒನಹಾಕುವುದು, ಅದಕ್ಕೆ ದನ ಕರುಗಳನ್ನು ಕಟ್ಟುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಇದರಿಂದ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು, ಮಕ್ಕಳು ವಿದ್ಯುತ್ ಪ್ರಸರಣವಿರುವ ಸ್ಥಳಗಳಲ್ಲಿ ಗಾಳಿಪಟ ಹಾರಿಸುವುದು ಅದರ ಹತ್ತಿರ ಆಟ ಆಡಬಾರದು ಎಂದರು.
ಶಾಲೆಯ ಮುಖ್ಯ ಗುರು ಬಿ.ಎಸ್.ಹಲಗಿ ಮಾತನಾಡಿ, ವಿದ್ಯುತ್ ಇಲಾಖೆಯ ಪ್ರತಿಯೊಬ್ಬ ಸಿಬ್ಬಂದಿ ಬೆಳಕು ಕೊಡುವ ದೇವರಿದ್ದಂತೆ ಅವರನ್ನು ಪ್ರತಿಯೊಬ್ಬರು ಗೌರವದಿಂದ ಕಾಣಬೇಕೆಂದರು.
ಕಾರ್ಯಕ್ರಮದಲ್ಲಿ ವಿದ್ಯುತ್ ಸಹಾಯಕ ಕೆ.ಜಿ. ಮಕಾನದಾರ, ಎಫ್.ಎಚ್. ಪಲ್ಟನ್, ಮಲ್ಲೇಶ ಸನದಿ, ಕಿರಣ ಕಲ್ಲೋಳಿ, ಮಹಾಲಿಂಗ ಕಂಟೆಪ್ಪಗೋಳ, ಮುದಕಪ್ಪಾ ಜಟ್ಟರಕಿ, ಶಿವು ನಾಯಿಕವಾಡಿ, ಸೈಯದ ನದಾಫ, ಶ್ರೀನಿವಾಸ ಮಲ್ಲಾರಿ, ಸರಕಾರಿ ಉರ್ದು ಶಾಲೆಯ ಮುಖ್ಯ ಗುರು ಝಾಕಿರಹುಸೇನ ಇಂಡಿಕರ ಸೇರಿದಂತೆ ಹಲವರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

