ತಿಕೋಟಾ: ಭಾರತವು ಉನ್ನತ ಆದರ್ಶವಾದವನ್ನು ಹೊಂದಿತ್ತು, ಅದನ್ನು ಸ್ವಾಮೀಜಿ ಪಾಲಿಸಬೇಕೆಂದು ಬಯಸಿದ್ದರು, ಆದರೆ ಲಕ್ಷಾಂತರ ಜನರು ಹಸಿವಿನಿಂದ ಬಳಲುತ್ತಿರುವ ಆದರ್ಶವಾದವು ಅರ್ಥಹೀನವಾಗಿತ್ತು. ಹೀಗಾಗಿ, ಮನೆಗೆ ಹಿಂತಿರುಗಿ, ಅವರು ಉನ್ನತ ತತ್ವಶಾಸ್ತ್ರಕ್ಕಿಂತ ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೆಚ್ಚು ಮಾತನಾಡಿದರು ಎಂದು ತೆಲಸಂಗದ ವಿರೇಶ್ವರ ದೇವರು ಮಾತನಾಡಿದರು.
ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಯುವಕರ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಹೋರಾಟ ದೊಡ್ಡದಾದಷ್ಟೂ ಗೆಲುವು ಅಮೋಘ. ಒಂದು ಸಮಯದಲ್ಲಿ ಒಂದು ಕೆಲಸವನ್ನು ಮಾಡಿ, ಮತ್ತು ಹಾಗೆ ಮಾಡುವಾಗ ನಿಮ್ಮ ಸಂಪೂರ್ಣ ಆತ್ಮವನ್ನು ಅದರಲ್ಲಿ ಇರಿಸಿ ಎಂದು ಅಧ್ಯಕ್ಷತೆ ವಹಿಸಿದ ಎಸ್ ಜಿ ಲಕ್ಕುಂಡಿಮಠ ಹೇಳಿದರು.
ಅಧ್ಯಯನಕ್ಕೆ ಏಕಾಗ್ರತೆ ಅಗತ್ಯ, ಏಕಾಗ್ರತೆಗೆ ಧ್ಯಾನ ಅಗತ್ಯ ಎಂದ ಸ್ವಾಮಿಯವರು ಧಾರ್ಮಿಕ ಬೆಳವಣಿಗೆಯನ್ನು ಶಿಕ್ಷಣದ ಮುಖ್ಯ ಗುರಿಯಾಗಿ ಪರಿಗಣಿಸಿದ್ದರು ಎಂದು ರೇ ಸಿ ಪಾಟೀಲ ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಆಯ್ಕೆಯಾದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬಾಲ ಪ್ರತಿಭಾ ಪುರಸ್ಕೃತರಾದ ಕು.ಅದ್ವಿತಾ ಬಡಿಗೇರ, ಚಂದ್ರಶೇಖರ ಕೊಣ್ಣೂರ, ಎಸ್ ಕೆ ಕುಂಬಾರ, ನವೀನ್ ಹತ್ತಿಕಾಳ, ಗಣೇಶ ಗುಗ್ಗರಿ ಸೇರಿದಂತೆ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

