ವಿಜಯಪುರ: ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀ ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಠೆ ನಡೆಯಲಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಇರುವ ಎಲ್ಲಾ ದೇಗುಲ ಮತ್ತು ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಪ್ರಧಾನಿಶ್ರೀ ನರೇಂದ್ರ ಮೋದಿಜೀ ಅವರ ಕರೆ ಮೇರೆಗೆ ವಿಜಯಪುರ ನಗರದ ವಾರ್ಡ್ ನಂಬರ್ 1 ರ ಅದೃಷ್ಟಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು.
ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಕಾರಜೋಳ ಮಾತನಾಡಿ, ಪ್ರಭು ಶ್ರೀರಾಮನ ಮಂದಿರ ಲೋಕಾರ್ಪಣೆಯಾಗುತ್ತಿರುವುದು ಪ್ರತಿ ಭಾರತೀಯನ ಭಕ್ತಿಯ ಪ್ರತೀಕ, ರಾಮನ ಜನ್ಮಭೂಮಿಯಲ್ಲಿ ಭವ್ಯ ಮಂದಿರ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ, ಇದು ಪ್ರತಿಯೊಬ್ಬರು ಸಂತಸ ಪಡುವ ಸಂಗತಿ. ಮರ್ಯಾದಾ ಪುರಷೋತ್ತಮ ರಾಮ ಆದರ್ಶ ಆಡಳಿತದ ಪ್ರತಿರೂಪ ಕೂಡ ಹೌದು, ಹೀಗಾಗಿ ರಾಮ ಮಂದಿರ ಲೋಕಾರ್ಪಣೆಯನ್ನು ಜನಸೇವಾ ಕಾರ್ಯ, ಭಕ್ತಿ ಭಾವ ಮೂಡಿಸುವ ಮಂದಿರಗಳ ಸ್ವಚ್ಛ ತೆ ಕಾರ್ಯದ ಮೂಲಕ ಸೇವೆಯ ಮೂಲಕವೇ ಸಂಭ್ರಮಿಸಲಾಗುತ್ತಿದೆ, ಈ ಕಾರಣಕ್ಕೆ ಹೆಮ್ಮೆಯ ಪ್ರಧಾನಿ ಈ ಕರೆ ಕೊಟ್ಟಿದ್ದಾರೆ, ಎಲ್ಲರೂ ಸಹ ನಮ್ಮ ಭಕ್ತಿ ಕೇಂದ್ರಗಳ ಆವರಣಗಳಲ್ಲಿ ಸ್ವಚ್ಚತಾ ಕಾರ್ಯ ನಡೆಸಿ ಪುನೀತ ಭಾವ ಬೆಳೆಸಿಕೊಳ್ಳಬೇಕು ಎಂದರು.
ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಬಸವರಾಜ ಹೂಗಾರ, ಹಿರಿಯ ಧುರೀಣ ಮಹೇಶ್ ಒಡೆಯರ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಶಿಂದೆ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಬಿಜ್ಜರಗಿ ಯುವ ಮೋರ್ಚ ಪದಾಧಿಕಾರಿಗಳಾದ ಪರಶುರಾಮ್ ಹೊಸಪೇಟ, ದಶರಥ ಕಾಂಬಳೆ, ದಶರಥ ಕ್ಷೀರಸಾಗರ, ಪಕ್ಷದ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಸೇರಿದಂತೆ ಕಾರ್ಯಕರ್ತರು, ಭಕ್ತರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

