Author: editor.udayarashmi@gmail.com

ಮುದ್ದೇಬಿಹಾಳ: ಪ್ರತೀ ವರ್ಷ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಕೊಡಮಾಡುವ ರಾಜ್ಯ ಯುವ ಪ್ರಶಸ್ತಿಗೆ ಭಾಜನರಾದ ತಾಲೂಕಿನ ಯುವ ಕಾಂಗ್ರೆಸ್ ಅಧ್ಯಕ್ಷ ರಫೀಕ ಶಿರೋಳ ಅವರು ಸವಣೂರು ತಾಲೂಕಿನ ಕಡಬ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

Read More

ಸಿಂದಗಿ: ಪಟ್ಟಣದ ಬಸ್ ಡಿಪೋ ಹತ್ತಿರವಿರುವ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ೨೮ನೇ ಜಾತ್ರಾ ಮಹೋತ್ಸವದಲ್ಲಿ ಶ್ರೀ ಆದಿಶೇಷ ಪ್ರೊಡಕ್ಷನ್ಸ್ ಸಂಸ್ಥೆಯಡಿಯಲ್ಲಿ ನಿರ್ಮಾಣಗೊಂಡ ಲಿ.ಸಿದ್ದೇಶ್ವರ ಸ್ವಾಮೀಜಿಯವರ “ಸಾವಿರದ ಸಂತ” ಸಾಕ್ಷ್ಯ ಚಿತ್ರದ ಪೋಸ್ಟರ್ ಹಾಗೂ ಟೀಸರ್‌ನ್ನು ಬಾಳೆಹೊನ್ನೂರು ರಂಬಾಪೂರಿ ಪೀಠದ ಶ್ರೀಮದ್ರಂಬಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.ಈ ವೇಳೆ ಮಾತನಾಡಿದ ಅವರು, ರೇಣುಕಾಚಾರ್ಯರ, ಲಿಂ.ಸಿದ್ದಲಿಂಗ ಜಗದ್ಗುರುಗಳ ಹಾಗೂ ಜಗದ್ಗುರುಗಳಾದ ಗಂಗಾಧರ ಶ್ರೀಗಳ ಜೀವನ ಸಾಧನೆಯ ಸಾಕ್ಷ್ಯ ಚಿತ್ರವನ್ನು ಇದೇ ತಂಡವು ನಿರ್ಮಿಸುವಂತೆ ಹೇಳಿದರು. ಧರ್ಮ ಪೀಠಗಳ ಕಾರ್ಯ ಸಾಧನೆಗಳು ಜನಮಾನಸದಲ್ಲಿ ಅಜರಾಮರವಾಗುವಂತೆ ಈ ತಂಡ ಕಾರ್ಯ ನಿರ್ವಹಿಸಲಿ ಎಂದರು.ಸಾವಿರದ ಸಂತ ಸಾಕ್ಷ್ಯ ಚಿತ್ರವನ್ನು ಶ್ರೀ ಆದಿಶೇಷ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಲಾಗಿದೆ. ಪರ್ತಕರ್ತ ಹಾಗೂ ಸಾಹಿತಿ ಶಿವಾನಂದ ಹಿರೇಮಠ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನಟನೆಯ ಜತೆಗೆ ನಿರ್ಮಾಪಕರಾಗಿ ನಿಹಾನ್ ದೇಸಾಯಿ ಹಾಗೂ ಎಂ.ಗುರುರಾಜ ಕಾರ್ಯಕಾರಿ ನಿರ್ಮಾಪಕರಾಗಿ ಪೂಜಾ ವೀರಶೆಟ್ಟಿ ಕಾರ್ಯ ನಿರ್ವಹಣೆ…

Read More

ಸಿಂದಗಿ: ವ್ಯಕ್ತಿಯೊಬ್ಬರಿಗೆ ಕ್ಯೂಲೆಕ್ಸ್ ಎಂಬ ಸೊಳ್ಳೆ ಕಚ್ಚಿದರೆ ಏಕಾಏಕಿ ರೋಗ ಬರುವುದಿಲ್ಲ. ಸೊಳ್ಳೆ ಕಚ್ಚಿದ ೫-೬ವರ್ಷಗಳ ನಂತರ ಕಾಲು ಬಾವರೇಲೂ ಪ್ರಾರಂಭವಾಗುತ್ತದೆ. ಕೆಲವು ವರ್ಷಗಳಲ್ಲಿ ಕಾಲು ಊದಿಕೊಂಡು ಆನೆ ಕಾಲಿನಂತಾಗುತ್ತದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಹರಿ ಕುಲಕರ್ಣಿ ಮಾತನಾಡಿದರು.ಪಟ್ಟಣದ ಜಿ.ಪಿ.ಪೋರವಾಲ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಅಡಿಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪ್ರತಿ ವ್ಯಕ್ತಿಗೆ ಮೂರು ಡಿಇಸಿ ಮಾತ್ರೆ ನುಂಗಿಸಿ ರೋಗ ಬರದಂತೆ ಮುಂಜಾಗೃತೆ ವಹಿಸಲಾಗಿದೆ. ಆದರೆ ಪರಿಸರದಲ್ಲಿ ನೈರ್ಮಲ್ಯತೆ ಕಾಪಾಡದಿದ್ದರೆ ರೋಗ ಆವರಿಸುವ ಭೀತಿಯಂತೂ ದೂರವಿಲ್ಲ. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾತ್ರೆಗಳು ಲಭ್ಯವಿವೆ. ಈವರೆಗೆ ಮಾತ್ರೆ ಸೇವಿಸದವರು ಇಲ್ಲಿ ಮಾತ್ರೆಗಳನ್ನು ಪಡೆಯಬಹುದಾಗಿದೆ. ಆನೆಕಾಲು ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದರೆ ಮಾತ್ರೆಗಳನ್ನು ಸೇವಿಸಬೇಕು. ಜತೆಗೆ ತಮ್ಮ ಮನೆಗಳ ಸುತ್ತಲಿನ ಪರಿಸರದಲ್ಲಿ ಕ್ಯೂಲೆಕ್ಸ್ ಸೊಳ್ಳೆಗಳು ಪಸರಿಸದಂತೆ ಎಚ್ಚರಿಕೆ ವಹಿಸಬೇಕು. ಇದು ಸಾಂಕ್ರಾಮಿಕ ರೋಗವಾದ್ದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಪಸರಿಸುತ್ತದೆ…

Read More

ವಿಜಯಪುರ: ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಲ್ಲಿ ರಾಜ್ಯದ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಜಿಲ್ಲಾ ಆಸ್ಪತ್ರೆ ವಿಜಯಪುರ ಒಂದಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.ವಿಜಯಪುರ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ಆರೋಗ್ಯ ರಕ್ಷಾ ಸಮಿತಿ ಕಾರ್ಯಕಾರಿಣಿ ಸಭೆ, ಆಸ್ಪತ್ರೆಯ ನೂತನ ಕಣ್ಣಿನ ವಿಭಾಗದ ಉದ್ಘಾಟನೆ ಹಾಗೂ ಸಿಬ್ಬಂದಿಗಳಿಗೆ ಸನ್ಮಾನಿಸಿ ಅವರು ಮಾತನಾಡಿ, ವಿಜಯಪುರ ಸತತ ಎರಡು ಬಾರಿ ಕಾಯಕಲ್ಪ ಪ್ರಶಸ್ತಿ ಪಡೆದು ಎರಡು ಬಾರಿ ರನ್ನರ್ ಅಪ್ ಹಾಗೂ ನ್ಯಾಶನಲ್ ಕ್ವಾಲಿಟಿ ಅಸೂರೆನ್ಸ್ ಗುಣಮಟ್ಟದ ಪ್ರಶಸ್ತಿ ಪಡೆದಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿರುವ ಜಿಲ್ಲಾ ಆಸ್ಪತ್ರೆ ಸಾರ್ವಜನಿಕರಿಗೆ ಯಾವುದೇ ಕೊರತೆಯಾಗದಂತೆ ನಿರಂತರವಾಗಿ ಉತ್ತಮ ಸೇವೆ ಒದಗಿಸುವಂತೆ ಅವರು ತಿಳಿಸಿದರು.ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಆಸ್ಪತ್ರೆಯಲ್ಲಿನ ಸ್ವಚ್ಛತೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆ ಶಸ್ತç ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಆರ್.ಎಂ.ಓ ಡಾ.ಸಿ.ವಾಯ್.ರಾಠೋಡ…

Read More

ವಿಜಯಪುರ: ವಿಜಯಪುರ ಜಿಲ್ಲೆಯ ವಿದ್ಯುತ್ ಗ್ರಾಹಕರ ಕುಂದು ಕೊರತೆ ನಿವಾರಣಾ ವೇದಿಕೆ ಸಭೆಯನ್ನು ನಗರದ ಮನಗೂಳಿ ರಸ್ತೆಯಲ್ಲಿರುವ ಬಿಡಿಎ ಕಚೇರಿ ಹತ್ತಿರ ಅಧೀಕ್ಷಕ ಅಭಿಯಂತರರು ಕಾರ್ಯ ಮತ್ತು ಪಾಲನೆ ವೃತ್ತ ಕಚೇರಿ ಸಭಾಂಗಣದಲ್ಲಿ ಜನವರಿ ೩೧ ರಂದು ಬೆಳಿಗ್ಗೆ ೧೦-೩೦ಕ್ಕೆ ಆಯೋಜಿಸಲಾಗಿದೆ.ಜಿಲ್ಲೆಯ ವಿದ್ಯುತ್ ಗ್ರಾಹಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಕುಂದು-ಕೊರತೆಗಳನ್ನು ನಿವಾರಿಸಿಕೊಳ್ಳುವಂತೆ ಹೆಸ್ಕಾಂ ಅಧಿಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ವಿಜಯಪುರ: ಪಿಂಚಣಿದಾರರ ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡುವ ಕುರಿತ ಸಾಮಾಜಿಕ ಭದ್ರತಾ ಯೋಜನೆಯಡಿಯ ಜಿಲ್ಲೆಯ ೧೪ ಗ್ರಾಮಗಳಲ್ಲಿ ಫೆ.೦೩ ರಂದು ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.ಫೆ.೩ರ ಬೆಳಿಗ್ಗೆ ೧೧ ಗಂಟೆಗೆ ಬ.ಬಾಗೇವಾಡಿ ತಾಲೂಕಿನ ನಂದಿಹಾಳ ಪಿ.ಯು ಗ್ರಾಮದ ಛತ್ರಿಕಟ್ಟಿಯಲ್ಲಿ ವಿಜಯಪುರದ ಉಪ ವಿಭಾಗಾಧಿಕಾರಿಗಳು ಮತ್ತು ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ಗ್ರಾಮ ಪಂಚಾಯತಿಯ ಆವರಣದಲ್ಲಿ, ಇಂಡಿ ಉಪ ವಿಭಾಗಾಧಿಕಾರಿಗಳು ಪಿಂಚಣಿ ಅದಾಲತ್ ನಡೆಸಲಿದ್ದಾರೆ.ವಿಜಯಪುರ ಗ್ರೇಡ್-೨ ತಹಶೀಲ್ದಾರ ಅವರು ಕುಮಟಗಿ ಗ್ರಾಮದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ, ಬಬಲೇಶ್ವರ ತಹಶೀಲ್ದಾರ ಗ್ರೇಡ್-೨ ಅವರು, ಕುಮಠೆ ಗ್ರಾಮದ ಶ್ರೀ ಕರಿಸಿದ್ಧೇಶ್ವರ ದೇವಸ್ಥಾನದಲ್ಲಿ ಹಾಗೂ ತಿಕೋಟಾ ಗ್ರೇಡ್-೨ ತಹಶೀಲ್ದಾರ ಅವರು ತಾಜಪೂರ ಎಚ್ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.ಬಸವನ ಬಾಗೇವಾಡಿ ಗ್ರೇಡ್-೨ ತಹಶೀಲ್ದಾರ ಅವರು, ಅಗಸಬಾಳ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ ಹಾಗೂ ನಿಡಗುಂದಿ ಗ್ರೇಡ್-೨ ತಹಶೀಲ್ದಾರ ಅವರು ಕೊಡಗಾನೂರ…

Read More

ವಿಜಯಪುರ: ಅಲಮಟ್ಟಿಯ ಜವಾಹರ ನವೋದಯ ವಿದ್ಯಾಲಯಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಬುಧವಾರ ಭೇಟಿ ನೀಡಿ ಶೈಕ್ಷಣಿಕ ಗುಣಮಟ್ಟ, ಅಲ್ಲಿನ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು.ವಿದ್ಯಾಲಯದ ಸಲಹಾ ಸಮಿತಿ ಸಭೆ ನಡೆಸಿದ ಅವರು, ವಿದ್ಯಾಲಯದ ಬೋಧನಾ ಗುಣಮಟ್ಟವನ್ನು ಹೆಚ್ಚಿಸಿ ಫಲಿತಾಂಶ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ಬೆಳವಣಿಗೆ ದೃಷ್ಟಿಯಿಂದ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿ, ಮಕ್ಕಳ ಕೌಶಲ್ಯತೆಯನ್ನು ಹೆಚ್ಚಿಸಲು ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಸಾಮಾಜಿಕ ಸೇವೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಎನ್.ಸಿ.ಸಿ. ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳ ಮೂಲಕ ಪ್ರೇರೆಪಿಸಬೇಕು. ವಿದ್ಯಾಲಯಕ್ಕೆ ಅಗತ್ಯವಿರುವ ಜನರೇಟರ್, ಸೋಲಾರ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದ ಅವರು, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಗಾರ್ಡನ್ ಹಾಗೂ ಆಟದ ಮೈದಾನ ಅಭಿವೃದ್ದಿಪಡಿಸುವಂತೆ ಅವರು ಸೂಚನೆ ನೀಡಿದರು.ಈ ಸಂದರ್ಭದಲ್ಲಿ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ವಿ.ಶಾಂತಿ, ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು ಎತ್ತುಗಳನ್ನು ಸಂರಕ್ಷಿಸಲು ಆಧ್ಯಾತ್ಮಿಕ ಸ್ಥಳಗಳಿಗೆ ನಂದಿ ಯಾತ್ರೆ ಕೈಗೊಳ್ಳಬೇಕೆಂಬ ಆಶಯ ಹೊರ ಹಾಕಿದ್ದರು. ಎತ್ತು ಹಾಗೂ ಮಣ್ಣಿನ ಮಹತ್ವದ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಬಿಜ್ಜರಗಿಯ ಸಿದ್ಧೇಶ್ವರ ರೈತಮಿತ್ರ ಸ್ವಯಂ ಸೇವಕರ ಸಂಘದ ನೇತೃತ್ವದಲ್ಲಿ ಜೋಡೆತ್ತು ಬಂಡಿಗಳ ಮೂಲಕ ನಂದಿ ಯಾತ್ರೆ ಆರಂಭಿಸಲಾಗಿದೆ ಎಂದು ಹೇಳಿದರು.ಜಿಲ್ಲೆಯ ಪ್ರಮುಖ 40 ಆಧ್ಯಾತ್ಮಿಕ ಕೇಂದ್ರಗಳಲ್ಲಿ ಸಂಘಗಳನ್ನು ಸ್ಥಾಪಿಸಲಾಗುವುದು. ಬಸವನಬಾಗೇವಾಡಿ ಪಟ್ಟಣ ಸೇರಿದಂತೆ ತಾಲೂಕಿನ ಮನಗೂಳಿ, ಯರನಾಳ, ನಂದಿಹಾಳ ಪಿ.ಯು, ಇಂಗಳೇಶ್ವರ ಗ್ರಾಮಗಳಲ್ಲಿ ಸಂಘ ರಚನೆ ಮಾಡಲಾಗಿದೆ ಎಂದು ಹೇಳಿದರು.ಬಸವನಬಾಗೇವಾಡಿ: ಪಟ್ಟಣದಲ್ಲಿ ಎತ್ತುಗಳ ಹಾಗೂ ಮಣ್ಣಿನ ಮಹತ್ವ ಸಾರುವ ಉದ್ದೇಶದಿಂದ ಗುರುವಿಗಾಗಿ ನಡೆ ನಮನ ಸಂದೇಶದೊಂದಿಗೆ ಬಿಜ್ಜರಗಿಯಿಂದ ಆರಂಭವಾದ ಜೋಡೆತ್ತು ಬಂಡಿಗಳ ನಂದಿ ಯಾತ್ರೆಗೆ ಸೋಮವಾರ ಸ್ವಾಗತ ಕೋರಲಾಯಿತು.ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಪಟ್ಟಣದ ವಿರಕ್ತಮಠದಿಂದ ರೈತರು ಜೋಡೆತ್ತು ಬಂಡಿಗಳಲ್ಲಿ ಬಸವೇಶ್ವರ, ಶಿವಯೋಗಿ ಶಿವಲಿಂಗೇಶ್ವರರ ಮೂರ್ತಿ ಹಾಗೂ ಸಿದ್ಧೇಶ್ವರ ಸ್ವಾಮೀಜಿ ಅವರ ಭಾವಚಿತ್ರದ ಮೆರವಣಿಗೆ ಮೂಲಕ ವಿಜಯಪುರ ರಸ್ತೆಯಲ್ಲಿನ ಬಸವ ಭವನ ಮುಂಭಾಗಕ್ಕೆ ಆಗಮಿಸಿದರು.…

Read More

ಬಸವನಬಾಗೇವಾಡಿ: ತಾಲೂಕಿನ ಮಸಬಿನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ಚುನಾವಣೆ ಜರುಗಿತು. ಈ ಎರಡೂ ಸ್ಥಾನಗಳಿಗೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ಆಯಿತು. ಅಧ್ಯಕ್ಷರಾಗಿ ಈರನಗೌಡ .ಎಂ. ಪಾಟೀಲ , ಉಪಾಧ್ಯಕ್ಷರಾಗಿ ಬಾಬು. ವಿ. ನಾಯ್ಕೋಡಿ ವಿರೋಧವಾಗಿ ಆಯ್ಕೆಯಾದರು.ಸನ್ಮಾನ: ಚುನಾವಣೆ ನಂತರ ಸಿದ್ದರಾಮ ಸ್ವಾಮೀಜಿ ಸಾನಿಧ್ಯದಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ನೂತನ ನಿರ್ದೇಶಕರಾದ ರವಿ ಬೈಚಬಾಳ, ಸಂತೋಷಕುಮಾರ ಕಾರಜೋಳ, ರಾವುತಪ್ಪ ಡೋಣೂರ, ಶಾಂತಪ್ಪ ಗಾಡದ, ಬಂಡೆಪ್ಪ ನಾಟಿಕರ, ಅಶೋಕ ನಂದ್ಯಾಳ, ಅಶೋಕ ನನಿಕೇರಿ, ಸಿದ್ದಪ್ಪ ಗುತ್ತರ್ಗಿ, ಮಹಿಳಾ ನಿರ್ದೇಶಕರಾದ ಪ್ರಭಾವತಿ ಮಡಗೊಂಡ, ವಿಜಯಲಕ್ಷ್ಮಿ ಡೋಣೂರ, ಗ್ರಾಮದ ಹಿರಿಯರಾದ ದಾನಪ್ಪ ತೋಟದ, ಶೇಖಪ್ಪ ಬೈಚಬಾಳ, ಅಪ್ಪಸಾಹೇಬ ಮಡಗೊಂಡ, ಈರಣ್ಣ ಕೌಲಗಿ, ಶಿವಯ್ಯ ಹಿರೇಮಠ, ರವಿ ಕತ್ನಳ್ಳಿ , ಬಸಲಿಂಗಯ್ಯ ಕೂಡಗಿಮಠ, ಸೋಮಶೇಖರ ಕಾರಜೋಳ, ಪರಮಾನಂದ ತೋಟದ, ಮನಯ್ಯ ತೇರದಾಳ, ಸಮೀರ್ ಸೈಯದ್, ಚುನಾವಣೆ…

Read More

ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಗೋಷ್ಠಿಗಳಿಂದ ಸಮಾಜದ ಮೌಲ್ಯ ಹೆಚ್ಚಿಸುತ್ತವೆ.ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವಲ್ಲಿ ಸಾಹಿತ್ಯ ಪರಿಷತ್ತು ನಿರಂತರ ಶ್ರಮಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಸಹಕಾರಿ ಧುರೀಣ ರಮೇಶ ಬಿದನೂರ ಅಭಿಪ್ರಾಯ ವ್ಯಕ್ತಪಡಿಸಿದರು.ಬುಧವಾರ ಜಿಲ್ಲಾ , ತಾಲೂಕ ಹಾಗು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಸಂಯುಕ್ತ ಆಶ್ರಯದಲ್ಲಿ ಸಾಹಿತ್ಯ ಸಭಾಂಗಣದಲ್ಲಿ ಜರುಗಿದ ದಿ ಶಂಕರಾನಂದ ಕಾಳಪ್ಪ ಉತ್ಲಾಸರ ದತ್ತಿ ದಾನಿಗಳು ಶ್ರೀದೇವಿ ಉತ್ಲಾಸರ. ವಿಷಯ ನಾಣ್ಯ, ಸಂಗೀತ, ಮತ್ತು ಸಾಹಿತ್ಯ ಕುರಿತು .ಮತ್ತು ಶ್ರೀಮತಿ ನಿಂಗಮ್ಮ ಗುರಪ್ಪ ಯಾದವಾಡ (ಬೋಳಶೆಟ್ಟಿ)ದತ್ತು ದಾನಿಗಳು ಮಲ್ಲಪ್ಪ ಗುರಪ್ಪ ಯಾದವಾಡ (ಬೋಳಶೆಟ್ಟಿ )ವಿಷಯ: ಶ್ರೀ ರಾಘವೇಂದ್ರ ಶ್ರೀಗಳು ಹಾಗು ಅಲ್ಲಮಪ್ರಭು ದೇವರ ಕುರಿತು ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಅಥ೯ಪೂಣ೯ವಾದ ಕಾರ್ಯಕ್ರಮಗಳ ಮೂಲಕ ಪರಿಷತ್ತು ಉಪಯುಕ್ತವಾದ ಚಟುವಟಿಕೆಗಳನ್ನು ಆಯೋಜಿಸುತ್ತಿರುವದು ಹೆಮ್ಮೆಯ ಸಂಗತಿ ಎಂದರು.ಸಾಹಿತಿ ಡಾ: ಮಾಧವರಾವ ಗುಡಿ ಅವರು ಶ್ರೀ ರಾಘವೇಂದ್ರ ಶ್ರೀಗಳು ಹಾಗು ಅಲ್ಲಮಪ್ರಭು ದೇವರ ಕುರಿತು…

Read More