ಸಿಂದಗಿ: ಪಟ್ಟಣದ ಬಸ್ ಡಿಪೋ ಹತ್ತಿರವಿರುವ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ೨೮ನೇ ಜಾತ್ರಾ ಮಹೋತ್ಸವದಲ್ಲಿ ಶ್ರೀ ಆದಿಶೇಷ ಪ್ರೊಡಕ್ಷನ್ಸ್ ಸಂಸ್ಥೆಯಡಿಯಲ್ಲಿ ನಿರ್ಮಾಣಗೊಂಡ ಲಿ.ಸಿದ್ದೇಶ್ವರ ಸ್ವಾಮೀಜಿಯವರ “ಸಾವಿರದ ಸಂತ” ಸಾಕ್ಷ್ಯ ಚಿತ್ರದ ಪೋಸ್ಟರ್ ಹಾಗೂ ಟೀಸರ್‌ನ್ನು ಬಾಳೆಹೊನ್ನೂರು ರಂಬಾಪೂರಿ ಪೀಠದ ಶ್ರೀಮದ್ರಂಬಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಅವರು, ರೇಣುಕಾಚಾರ್ಯರ, ಲಿಂ.ಸಿದ್ದಲಿಂಗ ಜಗದ್ಗುರುಗಳ ಹಾಗೂ ಜಗದ್ಗುರುಗಳಾದ ಗಂಗಾಧರ ಶ್ರೀಗಳ ಜೀವನ ಸಾಧನೆಯ ಸಾಕ್ಷ್ಯ ಚಿತ್ರವನ್ನು ಇದೇ ತಂಡವು ನಿರ್ಮಿಸುವಂತೆ ಹೇಳಿದರು. ಧರ್ಮ ಪೀಠಗಳ ಕಾರ್ಯ ಸಾಧನೆಗಳು ಜನಮಾನಸದಲ್ಲಿ ಅಜರಾಮರವಾಗುವಂತೆ ಈ ತಂಡ ಕಾರ್ಯ ನಿರ್ವಹಿಸಲಿ ಎಂದರು.
ಸಾವಿರದ ಸಂತ ಸಾಕ್ಷ್ಯ ಚಿತ್ರವನ್ನು ಶ್ರೀ ಆದಿಶೇಷ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಲಾಗಿದೆ. ಪರ್ತಕರ್ತ ಹಾಗೂ ಸಾಹಿತಿ ಶಿವಾನಂದ ಹಿರೇಮಠ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನಟನೆಯ ಜತೆಗೆ ನಿರ್ಮಾಪಕರಾಗಿ ನಿಹಾನ್ ದೇಸಾಯಿ ಹಾಗೂ ಎಂ.ಗುರುರಾಜ ಕಾರ್ಯಕಾರಿ ನಿರ್ಮಾಪಕರಾಗಿ ಪೂಜಾ ವೀರಶೆಟ್ಟಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಚಿತ್ರದ ಸಂಕಲನವನ್ನು ಶ್ರೀಜಯ್ ಬಿರಾದಾರ, ಸಹ ನಿರ್ದೇಶಕರಾಗಿ ಪವನ ಬೂದಿಹಾಳ, ಛಾಯಾಗ್ರಹಣವನ್ನು ಚಂದ್ರಸೇನ ಮಾಡಿದ್ದಾರೆ.
ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಬಾಲಕ ನಿಂಗನಗೌಡ ಪಾಟೀಲ, ನವೀನಕುಮಾರ, ಪೂಜಾ ವೀರಶೆಟ್ಟಿ ಸೇರಿದಂತೆ ಹಲವಾರು ನುರಿತ ಉತ್ತರ ಕರ್ನಾಟಕದ ಕಲಾವಿದರು ನಟನೆ ಮಾಡಿದ್ದಾರೆ. ಎರಡನೇ ಹಂತದ ಚಿತ್ರೀಕರಣ ಪ್ರಾರಂಭಗೊಂಡಿದ್ದು ಶೀಘ್ರದಲ್ಲಿ ಚಿತ್ರವು ಬಿಡುಗಡೆಗೊಳ್ಳಲಿದೆ ಎಂದು ನಿರ್ಮಾಪಕ ನಿಹಾನ್ ದೇಸಾಯಿ ಹೇಳಿದರು.
ಚಿತ್ರದ ಕುರಿತಂತೆ ಸಹ ನಿರ್ಮಾಪಕ ಎಂ.ಗುರುರಾಜ ಮಾತನಾಡಿದರು.
ಈ ವೇಳೆ ನಿರ್ಮಾಪಕರಾದ ನಿಹಾನ್ ದೇಸಾಯಿ, ಸಹ ನಿರ್ಮಾಪಕ ಎಂ.ಗುರುರಾಜ್ ಸಂಕಲನಕಾರ ಶ್ರೀಜಯ್ ಬಿರಾದಾರ, ಶಾಸಕ ಅಶೋಕ ಮನಗೂಳಿ, ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ, ಅಶೋಕ ವಾರದ, ವಿರಾಜೇಂದ್ರ ಶ್ರೀಗಳು, ಡಾ.ಚಂದ್ರಶೇಖರ ಶ್ರೀಗಳು, ಮಳಲಿಮಠದ ಶ್ರೀಗಳು, ಆಲೂರು ಶ್ರೀಗಳು, ಸಾರಂಗಮಠದ ಶ್ರೀಗಳು, ಮಾಜಿ ಜಿ.ಪಂ.ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ ಹೂವಿನಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

