ಬಸವನಬಾಗೇವಾಡಿ: ತಾಲೂಕಿನ ಮಸಬಿನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ಚುನಾವಣೆ ಜರುಗಿತು. ಈ ಎರಡೂ ಸ್ಥಾನಗಳಿಗೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ಆಯಿತು. ಅಧ್ಯಕ್ಷರಾಗಿ ಈರನಗೌಡ .ಎಂ. ಪಾಟೀಲ , ಉಪಾಧ್ಯಕ್ಷರಾಗಿ ಬಾಬು. ವಿ. ನಾಯ್ಕೋಡಿ ವಿರೋಧವಾಗಿ ಆಯ್ಕೆಯಾದರು.
ಸನ್ಮಾನ: ಚುನಾವಣೆ ನಂತರ ಸಿದ್ದರಾಮ ಸ್ವಾಮೀಜಿ ಸಾನಿಧ್ಯದಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ನೂತನ ನಿರ್ದೇಶಕರಾದ ರವಿ ಬೈಚಬಾಳ, ಸಂತೋಷಕುಮಾರ ಕಾರಜೋಳ, ರಾವುತಪ್ಪ ಡೋಣೂರ, ಶಾಂತಪ್ಪ ಗಾಡದ, ಬಂಡೆಪ್ಪ ನಾಟಿಕರ, ಅಶೋಕ ನಂದ್ಯಾಳ, ಅಶೋಕ ನನಿಕೇರಿ, ಸಿದ್ದಪ್ಪ ಗುತ್ತರ್ಗಿ, ಮಹಿಳಾ ನಿರ್ದೇಶಕರಾದ ಪ್ರಭಾವತಿ ಮಡಗೊಂಡ, ವಿಜಯಲಕ್ಷ್ಮಿ ಡೋಣೂರ, ಗ್ರಾಮದ ಹಿರಿಯರಾದ ದಾನಪ್ಪ ತೋಟದ, ಶೇಖಪ್ಪ ಬೈಚಬಾಳ, ಅಪ್ಪಸಾಹೇಬ ಮಡಗೊಂಡ, ಈರಣ್ಣ ಕೌಲಗಿ, ಶಿವಯ್ಯ ಹಿರೇಮಠ, ರವಿ ಕತ್ನಳ್ಳಿ , ಬಸಲಿಂಗಯ್ಯ ಕೂಡಗಿಮಠ, ಸೋಮಶೇಖರ ಕಾರಜೋಳ, ಪರಮಾನಂದ ತೋಟದ, ಮನಯ್ಯ ತೇರದಾಳ, ಸಮೀರ್ ಸೈಯದ್, ಚುನಾವಣೆ ಅಧಿಕಾರಿ ಎನ್. ಎಂ. ಅವಟಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

