ಸಿಂದಗಿ: ವ್ಯಕ್ತಿಯೊಬ್ಬರಿಗೆ ಕ್ಯೂಲೆಕ್ಸ್ ಎಂಬ ಸೊಳ್ಳೆ ಕಚ್ಚಿದರೆ ಏಕಾಏಕಿ ರೋಗ ಬರುವುದಿಲ್ಲ. ಸೊಳ್ಳೆ ಕಚ್ಚಿದ ೫-೬ವರ್ಷಗಳ ನಂತರ ಕಾಲು ಬಾವರೇಲೂ ಪ್ರಾರಂಭವಾಗುತ್ತದೆ. ಕೆಲವು ವರ್ಷಗಳಲ್ಲಿ ಕಾಲು ಊದಿಕೊಂಡು ಆನೆ ಕಾಲಿನಂತಾಗುತ್ತದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಹರಿ ಕುಲಕರ್ಣಿ ಮಾತನಾಡಿದರು.
ಪಟ್ಟಣದ ಜಿ.ಪಿ.ಪೋರವಾಲ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಅಡಿಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪ್ರತಿ ವ್ಯಕ್ತಿಗೆ ಮೂರು ಡಿಇಸಿ ಮಾತ್ರೆ ನುಂಗಿಸಿ ರೋಗ ಬರದಂತೆ ಮುಂಜಾಗೃತೆ ವಹಿಸಲಾಗಿದೆ. ಆದರೆ ಪರಿಸರದಲ್ಲಿ ನೈರ್ಮಲ್ಯತೆ ಕಾಪಾಡದಿದ್ದರೆ ರೋಗ ಆವರಿಸುವ ಭೀತಿಯಂತೂ ದೂರವಿಲ್ಲ. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾತ್ರೆಗಳು ಲಭ್ಯವಿವೆ. ಈವರೆಗೆ ಮಾತ್ರೆ ಸೇವಿಸದವರು ಇಲ್ಲಿ ಮಾತ್ರೆಗಳನ್ನು ಪಡೆಯಬಹುದಾಗಿದೆ. ಆನೆಕಾಲು ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದರೆ ಮಾತ್ರೆಗಳನ್ನು ಸೇವಿಸಬೇಕು. ಜತೆಗೆ ತಮ್ಮ ಮನೆಗಳ ಸುತ್ತಲಿನ ಪರಿಸರದಲ್ಲಿ ಕ್ಯೂಲೆಕ್ಸ್ ಸೊಳ್ಳೆಗಳು ಪಸರಿಸದಂತೆ ಎಚ್ಚರಿಕೆ ವಹಿಸಬೇಕು. ಇದು ಸಾಂಕ್ರಾಮಿಕ ರೋಗವಾದ್ದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಪಸರಿಸುತ್ತದೆ ಎಂದರು.
ಈ ವೇಳೆ ಪ್ರಾಚಾರ್ಯ ಡಿ.ಎಂ.ಪಾಟೀಲ, ಡಾ. ರವಿ ಲಮಾಣಿ, ವೀರೇಂದ್ರ ಪವಾಡೆ, ಸಂಜೀವ ಪಾಟೀಲ, ಪ್ರಕಾಶ್ ರಾಠೋಡ, ಡಾ.ಶ್ರೀಕಾಂತ್ ಪಾಟೀಲ, ಬಸವರಾಜ ಮಹಾಜನಶೆಟ್ಟಿ, ದೈಹಿಕ ನಿರ್ದೇಶಕ ರವಿ ಗೋಲಾ, ಪ್ರಭು ಜಂಗಿನಮಠ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

