Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬ್ರಹ್ಮದೇವನಮಡು: ನಾನು ಒಬ್ಬ ಸಹಕಾರಿಯಾಗಿ ಗುಬ್ಬೇವಾಡ ಪಿಕೆಪಿಎಸ್ ಬ್ಶಾಂಕ್ ಕಟ್ಟಡ ನಿಮಾ೯ಣಕ್ಕೆ ಹತ್ತು ಲಕ್ಷ ರೂ.ಅನುದಾನ ನೀಡುವುದಾಗಿ ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ತಾಲೂಕಿನ ಗುಬ್ಬೇವಾಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ನಿಮಾ೯ಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಗುಬ್ಬೇವಾಡ ಪಿಕೆಪಿಎಸ್ ಬ್ಶಾಂಕ್ ಕೆಲವೇ ದಿನಗಳಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದ್ದು,ನನಗೆ ಸಂತಸವಾಗಿದೆ ಎಂದರು.ಗ್ರಾಮದ ಅಡಿವೇಶ್ವರ ಮಠದ ಅಡಿವೇಶ್ವರ ಸ್ವಾಮೀಜಿ, ಅಮೋಘಸಿದ್ದೇಶ್ವರ ಮಠದ ಕನ್ನಯ್ಶ ಮಹಾರಾಜರು ಸಾನ್ನಿಧ್ಶ ವಹಿಸಿದ್ದರು. ಬ್ಶಾಂಕ್ ಅಧ್ಶಕ್ಷ ಎಸ್.ವಾಯ್.ಕೊಂಡಗೂಳಿ ಅಧ್ಶಕ್ಷತೆ ವಹಿಸಿದ್ದರು. ಉಪಾಧ್ಶಕ್ಷ ನಿಂಗಪ್ಪ ನಾಯ್ಕೋಡಿ,ಗ್ರಾಪಂ ಅಧ್ಶಕ್ಷರ ಪ್ರತಿನಿಧಿ ನಿತ್ಶಾನಂದ ಕಟ್ಟಿಮನಿ, ಉಪಾಧ್ಶಕ್ಷ ಮಹಾಂತೇಶ ಮಳ್ಳಿ, ವಿಡಿಸಿಸಿ ತಾಲೂಕು ನೋಡಲ್ ಅಧಿಕಾರಿ ಎನ್.ಜಿ.ಜನಿವಾರ, ಸಿಂದಗಿ ವಿಡಿಸಿಸಿ ಬ್ಶಾಂಕ್ ವ್ಶವಸ್ಥಾಪಕ ಎ.ಎಸ್.ಕಲಶೆಟ್ಟಿ, ವಿಡಿಸಿಸಿ ಕ್ಷೇತ್ರಾಧಿಕಾರಿ ಎಸ್.ವಾಯ್.ಎಂಟಮಾನ ಸೇರಿದಂತೆ ಯೋಗೇಶ ಕನಾ೯ಳ ಮತ್ತಿತ್ತರಿದ್ದರು. ಬ್ಶಾಂಕ್ ಸಿಇಒ ರಮೇಶ ಇಜೇರಿ ಪ್ರಾಸ್ತಾವಿಕ ಮಾತನಾಡಿದರು. ಮುತ್ತು ಪಾಟೀಲ ಸ್ವಾಗತಿಸಿದರು. ದೇವಿಂದ್ರ ಬಡಿಗೇರ ನಿರೂಪಿಸಿದರು. ಕಾಂಗ್ರೆಸ್ ಯುವ…
ಆಲಮಟ್ಟಿಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಸಂವಾದದಲ್ಲಿ ಡಿಡಿಪಿಐ ನಾಗೂರ ಅಭಿಮತ ಆಲಮಟ್ಟಿ: ಪಠ್ಯ ಪುಸ್ತಕದ ಸಾಂಗತ್ಯದಲ್ಲಿ ಮಕ್ಕಳು ಪ್ರೀತಿ ಅದರದಿಂದ ಬೆರೆತರೆ ಖಂಡಿತ ಭವಿಷ್ಯತ್ತಿನ ಜೀವನದಲ್ಲಿ ಜೀವನೋಲ್ಲಾಸ ಕಾಣಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ ಅಭಿಪ್ರಾಯಿಸಿದರು. ಸ್ಥಳೀಯ ಎಸ್.ವಿ.ವಿ.ಸಂಸ್ಥೆಯ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಶಾಲೆಗೆ ಗುರುವಾರ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು. ಪರೀಕ್ಷೆಗಳು ಸಮೀಪಿಸುತ್ತಿವೆ. ಮಕ್ಕಳು ಓದು,ಬರಹದೆಡೆಗೆ ಹೆಚ್ಚು ಗಮನ ಹರಿಸಬೇಕು. ಕಲಿಕೆಯಲ್ಲಿ ಪರಿಪೂರ್ಣತೆ ಇಲ್ಲದಿದ್ದರೆ ಅಥವಾ ಪ್ರಶ್ನೋತ್ತರ ಕೊರತೆಯ ಕಾಡುತ್ತಿದ್ದರೆ ಅದನ್ನು ಶ್ರಮಪಟ್ಟು ಸರಿದೂಗಿಸಿಕೊಳ್ಳಬೇಕು. ಅನ್ಯ ಸಂಗತಿಗಳಿಗೆ ತಲೆ ಕೆಡಿಸಿಕೊಳ್ಳದೇ ಅದ್ಯಯನಾಸಕ್ತಿ ಬೆಳೆಸಿಕೊಳ್ಳಬೇಕು. ಪುಸ್ತಕ ಪ್ರೇಮ, ಬರಹದ ಒಡನಾಟ ತಮ್ಮನ್ನು ಉನ್ನತಿಯಡೆಗೆ ಕೊಂಡೊಯ್ಯುತ್ತದೆ. ನಾಗರಿಕ ಸಮಾಜದಲ್ಲಿ ತಮ್ಮ ಪ್ರತಿಬಿಂಬದ ಛಾಯೆ ಸೊಗಸಾಗಿ ತೋರ್ಪಡಿಸುತ್ತದೆ ಎಂದರು. ಕಲಿಕೆಯಲ್ಲಿ ಏರುಪೇರು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಪ್ರಶ್ನೋತ್ತರ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಯಾವ ಪಠ್ಯ…
ಮುದ್ದೇಬಿಹಾಳ: ಅನಧಿಕೃತವಾಗಿ ಡಬ್ಬಾ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಸ್ಥರಿಗೆ ಗುರುವಾರ ಬೆಳ್ಳಂಬೆಳಿಗ್ಗೆ ತಾಲೂಕು ಆಡಳಿತ ಶಾಕ್ ನೀಡಿತು.ಇಲ್ಲಿನ ತಹಶೀಲ್ದಾರ ಕಚೇರಿಯ ಬಳಿ ಮತ್ತು ಬಸವೇಶ್ವರ ವೃತ್ತದ ಬಳಿ ಸರ್ಕಾರಿ ಜಾಗೆಯಲ್ಲಿದ್ದ ಅಂಗಡಿ ಮುಂಗಟ್ಟುಗಳ ತೆರವು ಕಾರ್ಯಾಚರಣೆ ನಡೆಸಿ ಸಫಲವಾಯಿತು.ಈ ಮೊದಲು ತೆರವುಗೊಳಿಸಿಕೊಳ್ಳುವಂತೆ ತಹಶೀಲ್ದಾರ ಬಲರಾಮ ಕಟ್ಟಿಮನಿ ಖಡಕ್ ಸೂಚನೆ ನೀಡಿದ್ದರು. ವ್ಯಾಪಾರಿಗಳು ತಮ್ಮ ಅಂಗಡಿಗಳನ್ನ ತೆರುವುಗೊಳಿಸಿಕೊಳ್ಳುವದಾಗಿ ಕೆಲ ದಿನಗಳ ಅವಕಾಶವನ್ನು ಬೇಡಿದ್ದರು. ಮಾನವೀಯತೆಯ ಆಧಾರದ ಮೇಲೆ ತಹಶೀಲ್ದಾರ ಜ.೨೪ ರವರೆಗೆ ಗಡುವು ನೀಡಿದ್ದರು. ಗಡುವಿನ ಅಂತಿಮ ದಿನದಂದು ಯಾವುದೇ ಅಂಗಡಿಕಾರರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ತೆರವುಗೊಳಿಸದ ಹಿನ್ನೆಲೆ ಅಟೋ ರಿಕ್ಷಾ ಮೂಲಕ ಬಹಿರಂಗವಾಗಿ ತೆರವುಗೊಳಿಸಿಕೊಳ್ಳುವಂತೆ ಪ್ರಕಟಣೆ ಹೊರಡಿಸಿದ್ದರು. ಇಷ್ಟಾದರೂ ವ್ಯಾಪಾರಸ್ಥರು ಮಾತ್ರ ತೆರುವಿಗೆ ಮುಂದಾಗದೇ ನ್ಯಾಯಾಲಯದ ಮೊರೆ ಹೋಗಿದ್ದರು.ಗುರುವಾರ ಬೆಳ್ಳಂಬೆಳಿಗ್ಗೆ ೬ ಗಂಟೆಗೆ ತಹಶೀಲ್ದಾರ ಬಲರಾಮ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಪಿಎಸ್‌ಐ ಸಂಜೀವ ತಿಪರೆಡ್ಡಿ, ತಾಳಿಕೋಟೆ ಪಿಎಸ್‌ಐ ರಾಮನಗೌಡ ಸಂಕನಾಳ ಸೇರಿದಂತೆ ೬೦ ಕ್ಕೂ ಹೆಚ್ಚು…
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಸಂಸ್ಥಾನ ಹಿರೇಮಠದಲ್ಲಿ ಫೆ.2 ರಿಂದ 4 ರವರೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಬುಧವಾರ ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದರು.ಫೆ.3 ರಂದು ಹಮ್ಮಿಕೊಂಡಿರುವ ಶ್ರೀಮಠದ ಶತಾಯುಷಿ ಸಂಗನಬಸವ ಕಲ್ಯಾಣ ಮಂಟಪ ಲೋಕಾರ್ಪಣೆ, ಉಭಯ ಶ್ರಿಗಳ ಧ್ವನಿ ಸುರುಳಿ ಬಿಡುಗಡೆ ಮತ್ತು ಸಂಗನಬಸವಶ್ರೀ ರಾಜ್ಯಮಟ್ಟದ ಪ್ರದಾನ ಸಮಾರಂಭಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಬುಧವಾರ ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಅವರು ಆಹ್ವಾನ ಪತ್ರಿಕೆ ನೀಡುವ ಸಮಾರಂಭಕ್ಕೆ ಆಹ್ವಾನ ನೀಡಿದರು.ನಂತರ ಇದೇ ಸಮಾರಂಭಕ್ಕೆ ಸಚಿವರಾದ ಎಚ್. ಕೆ. ಪಾಟೀಲ, ಶಿವಾನಂದ ಪಾಟೀಲ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಣಣ ಸವದಿ ಅವರಿಗೂ ಆಹ್ವಾನ ಪತ್ರಿಕೆ ನೀಡಿ ಆಹ್ವಾನ ನೀಡಿದರು.ಫೆ,4 ರಂದು ಹಮ್ಮಿಕೊಂಡಿರುವ ಡಾ.ಮಹಾಂತ ಶಿವಾಚಾರ್ಯರ 11 ನೇ ಪುಣ್ಯಾರಾಧನೆ, ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಅವರ ಪಟ್ಟಾಧಿಕಾರದ ದಶಮಾನೋತ್ಸವ, ಉಚಿತ ಸಾಮೂಹಿಕ ವಿವಾಹ ಮತ್ತು ನೂತನ ರಥೋತ್ಸವ ಲೋಕಾರ್ಪಣೆ…
ಬಸವನಬಾಗೇವಾಡಿ: ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಪಕ್ಷದ ಸಂಘಟಕರಾಗಿ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಉತ್ತರ ಕರ್ನಾಟಕದ ವಿಶೇಷ ರಾಜಕಾರಣಿಯಾಗಿರುವ ಜಮಖಂಡಿಯ ನಜೀರ ಕೊಂಗನಳ್ಳಿ ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನವನ್ನು ನೀಡಬೇಕೆಂದು ನಜೀರ ಕೊಂಗನಳ್ಳಿ ಅಭಿಮಾನಿ ಬಳಗದ ಸದಸ್ಯರಾದ ಪಯಾಜಅಹ್ಮದ ತಂಬದ, ಲಾಲಾಸಾಬ ಚಳ್ಳಿಗಿಡದ, ಅಲಿ ಹುಬ್ಬಳ್ಳಿ, ಅಬ್ದುಲ್ ಬಾಗವಾನ ಶೇಖ್ ಚಳ್ಳಿಗಿಡದ ಅವರು ಕಾಂಗ್ರೆಸ್ ವರಿಷ್ಠರಿಗೆ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಜೀರ ಕೊಂಗನಳ್ಳಿ ಅವರು ಈಗಾಗಲೇ ಕರ್ನಾಟಕ ರಾಜ್ಯ ಜವಳಿ ಮತ್ತು ಮೂಲಭೂತ ಸೌಕರ್ಯದ ಉಪಾಧ್ಯಕ್ಷರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಇವರೊಬ್ಬ ಸಜ್ಜನ ರಾಜಕಾರಣಿಯಾಗಿದ್ದಾರೆ. ಇವರ ಸೇವೆಯನ್ನು ಗುರುತಿಸಿ ನಿಗಮ ಮಂಡಳಿಯ ರಚನೆಯಲ್ಲಿ ಇವರಿಗೆ ಸ್ಥಾನಮಾನ ನೀಡುವಂತೆ ಕಾಂಗ್ರೆಸ್ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದಾರೆ.
ಬಸವನಬಾಗೇವಾಡಿ: ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಅವರು ಮತದಾನದ ಮಹತ್ವದ ಕುರಿತು ಮಾತನಾಡಿದರು. ಮಹಾವಿದ್ಯಾಲಯದ ಐಕ್ಯೂಎಸಿ ವಿಭಾಗದ ಸಂಯೋಜಕ, ರಾಜ್ಯಶಾಸ್ತ್ರದ ಪ್ರಾಧ್ಯಾಪಕ ದೀಲಿಪಕುಮಾರ ಕೆ. ಅವರು ಮತದಾನಕ್ಕಿಂತ ಇನ್ನೊಂದಿಲ್ಲ. ನಾನು ಖಚಿತವಾಗಿ ಮತದಾನ ಮಾಡುವ ಎಂಬ ಧ್ಯೇಯ ವಾಕ್ಯ ಹೇಳುವದರೊಂದಿಗೆ ನಾನು ಯಾವುದೇ ಸಂದರ್ಭದಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೇ ಪ್ರಾಮಾಣಿಕವಾಗಿ ಮತದಾನವನ್ನು ಮಾಡುವುದಾಗಿ ಎಂಬ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ರವೀಂದ್ರಗೌಡ ಕೆ., ಡಾ.ವೈ.ಬಿ.ನಾಯಕ, ಪ್ರೊ.ಡಿ.ಎಸ್.ಲಗಳಿ, ಪ್ರೊ.ಸಿ.ಪಿ.ದಡೇಕರ ಇತರರು ಇದ್ದರು.
ಮುದ್ದೇಬಿಹಾಳ: ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರ ಸಂಘದ ತಾಲೂಕಾ ಘಟಕದ ವತಿಯಿಂದ ಶಾಸಕ ಸಿ.ಎಸ್.ನಾಡಗೌಡ ಗೆ ಮನವಿ ಪತ್ರ ಸಲ್ಲಿಸಲಾಯಿತು.ಈ ವೇಳೆ ಎನ್.ಪಿ.ಎಸ್ ನೌಕರರ ಸಂಘದ ಖಜಾಂಚಿ ಸಂಗಮೇಶ ನವಲಿ ಮಾತನಾಡಿ, ತಮ್ಮ ಸರಕಾರ ಚುನಾವಣೆಯ ಪ್ರಣಾಳಿಕೆಯಲ್ಲಿ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವ ಕುರಿತು ಹೆಳಿತ್ತು. ಅದರಂತೆ ರಾಜ್ಯದ ೨.೫ ಲಕ್ಷ ಸರಕಾರಿ ನೌಕರರು ಹಾಗೂ ೨.೫ ಲಕ್ಷ ನಿಗಮ ಮಂಡಳಿ ಅನುದಾನಿತ ಹಾಗೂ ಸ್ವಾಯತ್ತ ಸಂಸ್ಥೆಗಳ ನೌಕರರು ತಮ್ಮ ಕುಟುಂಬದೊಂದಿಗೆ ವೋಟ್ ಫಾರ್ ಓಪಿಎಸ್ ಕಾರ್ಯಕ್ರಮ (ಹಳೆ ಪಿಂಚಣಿ ನೀಡುವವರಿಗೆ ಮತ ನೀಡಿ) ಮಾಡುವುದರ ಮೂಲಕ ತಮ್ಮ ಸರಕಾರವನ್ನು ಬೆಂಬಲಿಸಿದೆ. ಈಗಾಗಲೇ ತಮ್ಮ ಸರಕಾರ ಐದು ಜನಪರ ಭರವಸೆಗಳನ್ನು ಅನುಷ್ಠಾನಗೊಳಿಸಿದೆ. ಆರನೇ ಭರವಸೆಯಾದ ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಡ ತರಬೇಕೆಂದು ವಿನಂತಿಸಿಕೊಂಡರು.ಮನವಿಗೆ ಪ್ರತಿಕ್ರಿಸಿದ ಶಾಸಕರು…
ಮುದ್ದೇಬಿಹಾಳ: ತಾಲೂಕಿನ ಕೊಳೂರ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ೧೧೦/೧೧ಕೆವಿ ಉಪಕೇಂದ್ರಕ್ಕೆ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಹಿರೇಮುರಾಳ ೧೧೦ಕೆವಿ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಹೊಂದುವ ಎಲ್ಲ ಪಂಪಸೆಟ್ ಹಾಗೂ ನಿರಂತರ ಜ್ಯೋತಿ ಮಾರ್ಗಗಳಿಗೆ ಜ.೨೯ ರಂದು ಬೆಳಿಗ್ಗೆ ೭ಗಂಟೆಯಿಂದ ೧೦ರವರೆಗೆ ವಿದ್ಯತ್ ಪೂರೈಕೆ ಇರುವದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು: ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್ ನಿಯೋಗ ರಾಷ್ಟ್ರೀಯ ಶಿಕ್ಷಣ ನೀತಿ (NEP)-2020 ನ್ನು ಕರ್ನಾಟಕದಲ್ಲಿ ಮುಂದುವರೆಸುವಂತೆ ರಾಜ್ಯದಾಂತ ಸಹಿ ಸಂಗ್ರಹ ಅಭಿಯಾನ ನಡೆದಿದ್ದು, ಈ ಜನಾಭಿಪ್ರಾಯದ ವರದಿಯನ್ನು ಜ.24 ಬುಧವಾರ ರಾಜಭವನ ಬೆಂಗಳೂರಿನಲ್ಲಿ ಗೌರವಾನ್ವಿತ ರಾಜ್ಯಪಾಲರನ್ನು ಬೇಟಿಯಾಗಿ ಚರ್ಚಿಸಲಾಯಿತು.ಕರ್ನಾಟಕದ 34 ಶೈಕ್ಷಣಿಕ ಜಿಲ್ಲೆಗಳ 168 ತಾಲ್ಲೂಕುಗಳಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳಿಂದ NEP ಪರವಾಗಿ ಒಟ್ಟು 10,16,080 ಸಹಿ ಆಗಿದ್ದು, ಇದರ ವಿಸ್ತೃತ ವರದಿಯನ್ನು ಘನವೆತ್ತ ರಾಜ್ಯಪಾಲರಿಗೆ ಸಲ್ಲಿಸಲಾಯಿತು.ಈ ನಿಯೋಗದಲ್ಲಿ ಶಿಕ್ಷಣ ತಜ್ಞ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ, ಪ್ರೊ. ರವೀಂದ್ರ ರೇಶ್ಮಿ, ಮಾಜಿ ಸಚಿವ ಬಿ ಸಿ ನಾಗೇಶ, ಮಾಜಿ ಎಂಎಲ್ಸಿ ಅರುಣ ಶಹಾಪುರ, ಪ್ರೊ.ನಂದಿನಿ ಲಕ್ಷ್ಮೀಕಾಂತ, ಪ್ರೊ.ವೀರೇಶ ಬಾಳಿಕಾಯಿ, ಸಂದೀಪ ಬೂದಿಹಾಳ, ಡಾ ಗಿರೀಶ ತೆಗ್ಗಿನಮಠ ಭಾಗವಹಿಸಿದ್ದರು.
ಆಲಮೇಲ: ಪಟ್ಟಣದ ಶ್ರೀ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು , ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಪುತ್ರ ಕಿರನಳ್ಳಿ ರವರಿಗೆ 2024 ನೇ ಸಾಲಿನ ಜ್ಯೋತಿಬಾ ಫುಲೆ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಇತ್ತೀಚೆಗೆ ವಿಜಯಪುರದ ಕಂದಗಲ್ ಹನಮಂತ್ರಾಯ ರಂಗಮಂದಿರದಲ್ಲಿ ನಡೆದ ಮಾತೆ ಸಾವಿತ್ರಿಬಾಯಿ ಫುಲೆ ರವರ ಜಯಂತ್ಯೋತ್ಸವ ಸಮಾರಂಭದಲ್ಲಿ ವಿಜಯಪುರ ಮಹಾನಗರ ಪಾಲಿಕೆ ಮಹಾಪೌರ ರಾದ ಮಹೇಜಬಿನ್ ಹೋರ್ತಿ ಪ್ರಶಸ್ತಿ ನೀಡಿ ಗೌರವಿಸಿದರು.
