ಮುದ್ದೇಬಿಹಾಳ: ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರ ಸಂಘದ ತಾಲೂಕಾ ಘಟಕದ ವತಿಯಿಂದ ಶಾಸಕ ಸಿ.ಎಸ್.ನಾಡಗೌಡ ಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಎನ್.ಪಿ.ಎಸ್ ನೌಕರರ ಸಂಘದ ಖಜಾಂಚಿ ಸಂಗಮೇಶ ನವಲಿ ಮಾತನಾಡಿ, ತಮ್ಮ ಸರಕಾರ ಚುನಾವಣೆಯ ಪ್ರಣಾಳಿಕೆಯಲ್ಲಿ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವ ಕುರಿತು ಹೆಳಿತ್ತು. ಅದರಂತೆ ರಾಜ್ಯದ ೨.೫ ಲಕ್ಷ ಸರಕಾರಿ ನೌಕರರು ಹಾಗೂ ೨.೫ ಲಕ್ಷ ನಿಗಮ ಮಂಡಳಿ ಅನುದಾನಿತ ಹಾಗೂ ಸ್ವಾಯತ್ತ ಸಂಸ್ಥೆಗಳ ನೌಕರರು ತಮ್ಮ ಕುಟುಂಬದೊಂದಿಗೆ ವೋಟ್ ಫಾರ್ ಓಪಿಎಸ್ ಕಾರ್ಯಕ್ರಮ (ಹಳೆ ಪಿಂಚಣಿ ನೀಡುವವರಿಗೆ ಮತ ನೀಡಿ) ಮಾಡುವುದರ ಮೂಲಕ ತಮ್ಮ ಸರಕಾರವನ್ನು ಬೆಂಬಲಿಸಿದೆ. ಈಗಾಗಲೇ ತಮ್ಮ ಸರಕಾರ ಐದು ಜನಪರ ಭರವಸೆಗಳನ್ನು ಅನುಷ್ಠಾನಗೊಳಿಸಿದೆ. ಆರನೇ ಭರವಸೆಯಾದ ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಡ ತರಬೇಕೆಂದು ವಿನಂತಿಸಿಕೊಂಡರು.
ಮನವಿಗೆ ಪ್ರತಿಕ್ರಿಸಿದ ಶಾಸಕರು ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಎಲ್ಲ ಇಲಾಖೆಗಳ ನೌಕರರಿಗೆ ಹಳೆ ಪಿಂಚಣಿ ಒದಗಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಮುದ್ನೂರ, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ವಿ.ಎಂ.ಪಾಟೀಲ, ಉಪಾಧ್ಯಕ್ಷ ರಾಜಶೇಖರ ಗೋನಾಳ, ಪ್ರಧಾನ ಕಾರ್ಯದರ್ಶಿ ವಿಠ್ಠಲ ಖಿಲಾರಟ್ಟಿ, ಆನಂದಗೌಡ ಬಿರಾದಾರ, ಮಹಮ್ಮದ್ ರಫೀಕ್ ಭಾಗವಾನ, ಚಿಕ್ಕ ಮಕ್ಕಳ ತಜ್ಞವೈದ್ಯ ಪರಶುರಾಮ ವಡ್ಡರ, ಮಹಾಂತೇಶ ಪೂಜಾರಿ, ಗಂಗಣ್ಣ ಗೌರೋಜಿ, ಲಕ್ಷ್ಮಣ ರಾಠೋಡ, ಶಿವಪುತ್ರ ಸಜ್ಜನ, ಗುಂಡು ಚೌವ್ಹಾಣ ಸೇರಿದಂತೆ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

