ಬ್ರಹ್ಮದೇವನಮಡು: ನಾನು ಒಬ್ಬ ಸಹಕಾರಿಯಾಗಿ ಗುಬ್ಬೇವಾಡ ಪಿಕೆಪಿಎಸ್ ಬ್ಶಾಂಕ್ ಕಟ್ಟಡ ನಿಮಾ೯ಣಕ್ಕೆ ಹತ್ತು ಲಕ್ಷ ರೂ.ಅನುದಾನ ನೀಡುವುದಾಗಿ ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ತಾಲೂಕಿನ ಗುಬ್ಬೇವಾಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ನಿಮಾ೯ಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗುಬ್ಬೇವಾಡ ಪಿಕೆಪಿಎಸ್ ಬ್ಶಾಂಕ್ ಕೆಲವೇ ದಿನಗಳಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದ್ದು,ನನಗೆ ಸಂತಸವಾಗಿದೆ ಎಂದರು.
ಗ್ರಾಮದ ಅಡಿವೇಶ್ವರ ಮಠದ ಅಡಿವೇಶ್ವರ ಸ್ವಾಮೀಜಿ, ಅಮೋಘಸಿದ್ದೇಶ್ವರ ಮಠದ ಕನ್ನಯ್ಶ ಮಹಾರಾಜರು ಸಾನ್ನಿಧ್ಶ ವಹಿಸಿದ್ದರು. ಬ್ಶಾಂಕ್ ಅಧ್ಶಕ್ಷ ಎಸ್.ವಾಯ್.ಕೊಂಡಗೂಳಿ ಅಧ್ಶಕ್ಷತೆ ವಹಿಸಿದ್ದರು. ಉಪಾಧ್ಶಕ್ಷ ನಿಂಗಪ್ಪ ನಾಯ್ಕೋಡಿ,ಗ್ರಾಪಂ ಅಧ್ಶಕ್ಷರ ಪ್ರತಿನಿಧಿ ನಿತ್ಶಾನಂದ ಕಟ್ಟಿಮನಿ, ಉಪಾಧ್ಶಕ್ಷ ಮಹಾಂತೇಶ ಮಳ್ಳಿ, ವಿಡಿಸಿಸಿ ತಾಲೂಕು ನೋಡಲ್ ಅಧಿಕಾರಿ ಎನ್.ಜಿ.ಜನಿವಾರ, ಸಿಂದಗಿ ವಿಡಿಸಿಸಿ ಬ್ಶಾಂಕ್ ವ್ಶವಸ್ಥಾಪಕ ಎ.ಎಸ್.ಕಲಶೆಟ್ಟಿ, ವಿಡಿಸಿಸಿ ಕ್ಷೇತ್ರಾಧಿಕಾರಿ ಎಸ್.ವಾಯ್.ಎಂಟಮಾನ ಸೇರಿದಂತೆ ಯೋಗೇಶ ಕನಾ೯ಳ ಮತ್ತಿತ್ತರಿದ್ದರು. ಬ್ಶಾಂಕ್ ಸಿಇಒ ರಮೇಶ ಇಜೇರಿ ಪ್ರಾಸ್ತಾವಿಕ ಮಾತನಾಡಿದರು. ಮುತ್ತು ಪಾಟೀಲ ಸ್ವಾಗತಿಸಿದರು. ದೇವಿಂದ್ರ ಬಡಿಗೇರ ನಿರೂಪಿಸಿದರು. ಕಾಂಗ್ರೆಸ್ ಯುವ ಮುಖಂಡ ಸದ್ದಾಮಪಟೇಲ ಬಿರಾದಾರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

