ಮುದ್ದೇಬಿಹಾಳ: ಅನಧಿಕೃತವಾಗಿ ಡಬ್ಬಾ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಸ್ಥರಿಗೆ ಗುರುವಾರ ಬೆಳ್ಳಂಬೆಳಿಗ್ಗೆ ತಾಲೂಕು ಆಡಳಿತ ಶಾಕ್ ನೀಡಿತು.
ಇಲ್ಲಿನ ತಹಶೀಲ್ದಾರ ಕಚೇರಿಯ ಬಳಿ ಮತ್ತು ಬಸವೇಶ್ವರ ವೃತ್ತದ ಬಳಿ ಸರ್ಕಾರಿ ಜಾಗೆಯಲ್ಲಿದ್ದ ಅಂಗಡಿ ಮುಂಗಟ್ಟುಗಳ ತೆರವು ಕಾರ್ಯಾಚರಣೆ ನಡೆಸಿ ಸಫಲವಾಯಿತು.
ಈ ಮೊದಲು ತೆರವುಗೊಳಿಸಿಕೊಳ್ಳುವಂತೆ ತಹಶೀಲ್ದಾರ ಬಲರಾಮ ಕಟ್ಟಿಮನಿ ಖಡಕ್ ಸೂಚನೆ ನೀಡಿದ್ದರು. ವ್ಯಾಪಾರಿಗಳು ತಮ್ಮ ಅಂಗಡಿಗಳನ್ನ ತೆರುವುಗೊಳಿಸಿಕೊಳ್ಳುವದಾಗಿ ಕೆಲ ದಿನಗಳ ಅವಕಾಶವನ್ನು ಬೇಡಿದ್ದರು. ಮಾನವೀಯತೆಯ ಆಧಾರದ ಮೇಲೆ ತಹಶೀಲ್ದಾರ ಜ.೨೪ ರವರೆಗೆ ಗಡುವು ನೀಡಿದ್ದರು. ಗಡುವಿನ ಅಂತಿಮ ದಿನದಂದು ಯಾವುದೇ ಅಂಗಡಿಕಾರರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ತೆರವುಗೊಳಿಸದ ಹಿನ್ನೆಲೆ ಅಟೋ ರಿಕ್ಷಾ ಮೂಲಕ ಬಹಿರಂಗವಾಗಿ ತೆರವುಗೊಳಿಸಿಕೊಳ್ಳುವಂತೆ ಪ್ರಕಟಣೆ ಹೊರಡಿಸಿದ್ದರು. ಇಷ್ಟಾದರೂ ವ್ಯಾಪಾರಸ್ಥರು ಮಾತ್ರ ತೆರುವಿಗೆ ಮುಂದಾಗದೇ ನ್ಯಾಯಾಲಯದ ಮೊರೆ ಹೋಗಿದ್ದರು.
ಗುರುವಾರ ಬೆಳ್ಳಂಬೆಳಿಗ್ಗೆ ೬ ಗಂಟೆಗೆ ತಹಶೀಲ್ದಾರ ಬಲರಾಮ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಪಿಎಸ್‌ಐ ಸಂಜೀವ ತಿಪರೆಡ್ಡಿ, ತಾಳಿಕೋಟೆ ಪಿಎಸ್‌ಐ ರಾಮನಗೌಡ ಸಂಕನಾಳ ಸೇರಿದಂತೆ ೬೦ ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳೊಂದಿಗೆ ಗುರುವಾರ ಕಾರ್ಯಾಚರಣೆಗೆ ಇಳಿದು ಎಲ್ಲ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.
ಅನಧಿಕೃತವಾಗಿ ರಸ್ತೆ, ಜಾಗೆಗಳನ್ನ ಅತಿಕ್ರಮಿಸಿಕೊಂಡವರ ತೆರವು ಕಾರ್ಯಾಚರಣೆಯಲ್ಲಿ ಟೊಂಕ ಕಟ್ಟಿ ನಿಂತ ತಹಶೀಲ್ದಾರ ಕಾರ್ಯಕ್ಕೆ ಪಟ್ಟಣದ ಸೌಂದರ್ಯ, ಪಾರ್ಕಿಂಗ್ ಮತ್ತು ಸ್ವಚ್ಛತೆ ಬಯಸುವವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

