Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂಡಿ: ಪಟ್ಟಣದ ಸೇರಿದಂತೆ ತಾಲೂಕಿನ ಆರಾಧ್ಯದೇವಿ ಅಂಬಾ ಭವಾನಿ ತುಳಜಾಪುರದಲ್ಲಿ ಸಹಸ್ರ ಸಹಸ್ರ ಭಕ್ತ ಸಾಗರದ ಪಾದಯಾತ್ರೆಯ ಮೂಲಕ ತೆರಳುತ್ತಿದ್ದು ರಸ್ತೆಯ ಮೇಲೆ ಎಲ್ಲಿ ನೋಡಿದರೂ ಭಕ್ತರ ಜನಸಾಗರ ಕಾಣುತ್ತೇವೆ. ಸೀಗೆ ಹುಣ್ಣಿಮೆ ಬಂದರೆ ಸಾಕು ಅಂಬಾ ಭವಾನಿ ಭಕ್ತರಿಗೆ ಸಂಭ್ರಮಮೋ ಸಂಭ್ರಮ. ವರದಾನಿ ಅಂಬಾ ಭವಾನಿ ದರ್ಶನಕ್ಕೆ ತಂಡೋಪ ತಂಡವಾಗಿ ಭಕ್ತರು ತುಳಜಾಪುರದತ್ತ ಪಾದಯಾತ್ರೆ ಮೂಲಕ ಹೆಜ್ಜೆ ಹಾಕುತ್ತಾರೆ.ಇಂಡಿ ಪಟ್ಟಣದ ಸೇರಿದಂತೆ ತಾಲೂಕಿನ ತಾಂಬಾ, ಹೋರ್ತಿ, ಝಳಕಿ, ಸೇರಿದಂತೆ ವಿಜಯಪುರ ಪಟ್ಟಣ ಮತ್ತು ತಾಲೂಕಿನ, ಸಿಂದಗಿ, ಆಲಮೇಲ ಹಾಗೂ ದೇವರ ಹಿಪ್ಪರಗಿ ತಾಲೂಕಿನ ಎಲ್ಲ ಗ್ರಾಮಗಳಿಂದ ಇಂಡಿ ತಾಲೂಕಿನ ಮೂಲಕ ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಜನ ಪಾದಯಾತ್ರೆಯ ಮೂಲಕ ತೆರಳುತ್ತಿದ್ದಾರೆ.ಝಳಕಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಹೋಗಲು ಎರಡು ಬರಲು ನಾಲ್ಕು ರಸ್ತೆಗಳಿದ್ದು ಅದರಲ್ಲಿ ಒಂದು ಕಡೆಯ ಎರಡು ರಸ್ತೆ ಬಂದ್ ಮಾಡಿ ಪಾದಯಾತ್ರೆಗಳಿಗೆ ತೊಂದರೆಯಾಗದಂತೆ ಸರಕಾರ ಸಹಕರಿಸುತ್ತದೆ.ಮಾಜಿ ಶಾಸಕ ದೇವಾನಂದ ಚವ್ಹಾಣ, ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ ಸೇರಿದಂತೆ…
ಜಿಲ್ಲೆಯ ಎಂಟು ವಿಧಾನಸಭಾ ಮತಕ್ಷೇತ್ರಗಳಲ್ಲಿ ೧೮,೯೯,೨೪೮ ಮತದಾರರು ವಿಜಯಪುರ: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅರ್ಹತಾ ದಿನಾಂಕ : ೦೧-೦೧-೨೦೨೪ಕ್ಕೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಜಿಲ್ಲೆಯ ೮ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ೯,೬೮,೧೩೩ ಪುರುಷ ಮತದಾರರು, ೯,೩೦,೮೯೮ ಮಹಿಳಾ ಮತದಾರರು ಹಾಗೂ ೨೧೭ ಇತರೆ ಮತದಾರರು ಸೇರಿದಂತೆ ಒಟ್ಟು ೧೮,೯೯,೨೪೮ ಮತದಾರರಿದ್ದು, ದಿನಾಂಕ : ೦೫-೦೧-೨೦೨೪ ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿನಾಂಕ : ೨೫-೦೯-೨೦೨೩ರನ್ವಯ ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅರ್ಹತಾ ದಿನಾಂಕ : ೦೧-೦೧-೨೦೨೪ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕುರಿತು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ವೇಳಾಪಟ್ಟಿಯಂತೆ ದಿನಾಂಕ : ೨೭-೧೦-೨೦೨೩ ರಂದು ಕರಡು…
ಬಸವನಬಾಗೇವಾಡಿ: ಮಳೆಗಾಲದಲ್ಲಿ ಮಳೆ ನೀರು ಹಳ್ಳಕೊಳ್ಳದ ಮುಖಾಂತರ ವ್ಯರ್ಥ ಹರಿದು ಹೋಗುವದನ್ನು ತಡೆಯಲು ಈ ಮೂಲಕ ರೈತ ಬಾಂಧವರಿಗೆ, ಜಾನುವಾರುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರವು ಬಾಂದಾರಗಳನ್ನು ನಿರ್ಮಾಣ ಮಾಡುತ್ತದೆ. ನಿರ್ಮಾಣವಾದ ಬಾಂದಾರ ಸಂರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಕೈಮಗ್ಗ ಮತ್ತು ಜವಳಿ, ಸಕ್ಕರೆ ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ತಾಲೂಕಿನ ಮುತ್ತಗಿ ಗ್ರಾಮದ ಹಳ್ಳಕ್ಕೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ೨೦೨೨-೨೩ ನೇ ಸಾಲಿನ ನಬಾರ್ಡ್ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಅಂದಾಜು ರೂ.೧ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಬಾಂದಾರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬಾಂದಾರ ನಿರ್ಮಾಣದಿಂದ ಜಲಸಂಪನ್ಮೂಲ ಹೆಚ್ಚಿಸಬಹುದು. ಇದರಿಂದಾಗಿ ಅಂತರ್ಜಲ ಮಟ್ಟವೂ ಹೆಚ್ಚಾಗುತ್ತದೆ. ಈಚೆಗೆ ಮಳೆ ಪ್ರಮಾಣವು ಕಡಿಮೆಯಾಗುತ್ತಿದೆ. ಇದರಿಂದಾಗಿ ಜಲ ಸಂಪನ್ಮೂಲವನ್ನು ಕಾಪಾಡುವುದು ತುಂಬಾ ಅಗತ್ಯವಿದೆ. ಜಲವಿದ್ದರೆ ಮಾತ್ರ ಎಲ್ಲ ಜೀವಿಗಳು ಜೀವಿಸಲು ಸಾಧ್ಯ ಎಂಬುವದನ್ನು ನಾವೆಲ್ಲರೂ ಅರಿತುಕೊಂಡು ಜಲ ಸಂಪನ್ಮೂಲದ ಸಂರಕ್ಷಣೆ ಮಾಡುವ…
ವಿಜಯಪುರ: ನಗರ ಮಹಾನಗರ ಪಾಲಿಕೆ ಮಹಾಪೌರ ಹಾಗೂ ಉಪಮಹಾಪೌರ ಆಯ್ಕೆಗೆ ಅಕ್ಟೋಬರ್ ೩೦ರಂದು ನಿಗದಿಗೊಳಿಸಲಾದ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ವಿಜಯಪುರ ಮಹಾನಗರ ಪಾಲಿಕೆ ಅಧ್ಯಕ್ಷಾಧಿಕಾರಿಗಳಾದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟೆಣವರ ತಿಳಿಸಿದ್ದಾರೆ.ವಿಜಯಪುರ ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪ ಮಹಾಪೌರ ಸ್ಥಾನಗಳ ಮೀಸಲಾತಿಯನ್ನು ಪ್ರಶ್ನಿಸಿ ಕಲಬುರಗಿ ಉಚ್ಛ ನ್ಯಾಯಾಲಯದಲ್ಲಿ ದಾಖಲಾದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ದಿನಾಂಕ : ೨೭-೧೦-೨೦೨೩ ರಂದು ಪ್ರಕರಣದ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ದಿನಾಂಕ : ೩೦-೧೦-೨೦೨೩ ರಂದು ಮುಂದೂಡಿದ ಹಿನ್ನಲೆಯಲ್ಲಿ ಪ್ರಕರಣ ಇತ್ಯರ್ಥವಾಗುವರೆಗೆ ಚುನಾವಣೆ ನಡೆಸಲು ಯಾವುದೇ ಕ್ರಮ ತೆಗೆದುಕೊಳ್ಳದಂತೆ ಕಲುಬುರಗಿ ಪೀಠದ ಹೆಚ್ಚುವರಿ ಅಡ್ವೋಕೆಟ್ ಜನರಲ್ ಇವರು ತಿಳಿಸಿರುವುದರಿಂದ ಮಹಾನಗರ ಪಾಲಿಕೆ ಚುನಾವಣೆ ಮುಂದೂಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
೪ ಪಾಳೆಗಳಲ್ಲಿ ೫೧೫ ಕೃಷಿ ಪಂಪಸೆಟ್ ಫೀಡರಗಳಿಗೆ ತ್ರಿಫೇಸ್ ವಿದ್ಯುತ್ ಪೂರೈಕೆ ವಿಜಯಪುರ: ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ರೈತರ ಕೃಷಿ ಪಂಪಸೆಟ್‌ಗಳಿಗೆ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ಜಿಲ್ಲೆಯ ಒಟ್ಟು ೫೧೫ ಕೃಷಿ ಪಂಸೆಟ್ ಪೀಡರ್‌ಗಳಿಗೆ ೪ ಪಾಳೆಗಳಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದರು.ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ನಾಲ್ಕು ೨೨೦ ಕೆವ್ಹಿ ಸ್ವೀಕರಣಾ ಕೇಂದ್ರಗಳು, ೧೧೦ಕೆವ್ಹಿ ೪೪ ಕೇಂದ್ರಗಳು ಹಾಗೂ ೩೩ಕೆವ್ಹಿ ೩೧ ವಿತರಣಾ ಕೇಂದ್ರಗಳಿದ್ದು, ಈ ಕೇಂದ್ರಗಳಿಂದ ೪ ಪಾಳೆಗಳಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ೨೫ ವಿದ್ಯುತ್ ವಿತರಣಾ ಕೇಂದ್ರಗಳಿಂದ ಸತತವಾಗಿ ೬ ಗಂಟೆ ೩ ಫೇಸ್ ವಿದ್ಯುತ್, ೨೧ ವಿತರಣಾ ಕೇಂದ್ರಗಳಿಂದ ಹಗಲು ೪ ಗಂಟೆ ಮತ್ತು ರಾತ್ರಿ ೨ ಗಂಟೆ ೩ ಫೇಸ್ ವಿದ್ಯುತ್, ೧೬ ವಿದ್ಯುತ್ ವಿತರಣಾ ಕೇಂದ್ರಗಳಿಂದ ಹಗಲು ೩ ಗಂಟೆ ಮತ್ತು ರಾತ್ರಿ ೩ ಗಂಟೆ ೩ ಫೇಸ್ ವಿದ್ಯುತ್, ೩…
ವಿಜಯಪುರ: ಹೃದಯಾಘಾತ ಮತ್ತು ಪ್ರಥಮ ಚಿಕಿತ್ಸೆ ಕುರಿತ ಕಾರ್ಯಾಗಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಸಂಗನಬಸವ ಮಹಾಸ್ವಾಮೀಜಿ ಫಾರ್ಮಸಿ ಕಾಲೇಜಿನಲ್ಲಿ ಗುರುವಾರ ನಡೆಯಿತು.ಪಾರ್ಮಸಿ ಕಾಲೇಜು ಮತ್ತು ರಾಘವೇಂದ್ರ ಕಾರ್ಡಿಯೊ ಕೇರ್ ಸಂಯುಕ್ತಾಶ್ರಯದಲ್ಲಿ ನಡೆದ ಈ ಕಾರ್ಯಾಗಾರವನ್ನು ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಡಾ. ಸಿ. ಸಿ. ಪಾಟೀಲ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಹೃದಯ ರೋಗ ಖ್ಯಾತ ವೈದ್ಯರಾದ ಡಾ. ಕಿರಣ ಚುಳಕಿ ಮತ್ತು ಡಾ. ದೀಪಕ ಕಡೇಲಿ ಅವರು ಹೃದಯಾಘಾತ ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರವಾಗಿ ಪ್ರಾತ್ಯಕ್ಷಿಕೆ ಮೂಲಕ ಮನದಟ್ಟು ಮಾಡಿದರು. ಅಲ್ಲದೇ, ಹೃದಯದಲ್ಲಿರುವ ನಾನಾ ಅಂಗಾಂಗಳು, ರಕ್ತಸಂಚಾರ ನಾಳಗಳು, ಅವುಗಳ ಕಾರ್ಯಗಳ ಕುರಿತು ವಿವರಿಸಿದರು. ಇದೇ ವೇಳೆ, ಹೃದಯಾಘಾತ ಸಂಭವಿಸಿದಾಗ ಮತ್ತು ಚಿಕಿತ್ಸೆ ಸಂದರ್ಭದಲ್ಲಿ ನೀಡಬೇಕಾದ ಔಷಧಿಗಳ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ಫಾರ್ಮಸಿ ಪ್ರಾಕ್ಟೀಸ್ ವಿಭಾಗದ ಮುಖ್ಯಸ್ಥ ಡಾ. ಎಸ್. ಝಡ್ ಇನಾಮದಾರ, ಡಾ. ಸುಶೀಲ್ಲ ಪಿ. ಎಲ್, ಡಾ.…
Udayarashmi kannada daily newspaper
ಭಾವರಶ್ಮಿ ಗೌತಮ ಮುನಿಗಳು ಕಾಡಿನಲ್ಲಿ ವಾಸವಾಗಿದ್ದು ತಮ್ಮ ಕಾರ್ಯಗಳನ್ನು ಮಾಡಿಕೊಂಡು ಪತ್ನಿ ಅಹಲ್ಯಯೊಂದಿಗೆ ಸುಖವಾಗಿ ವಾಸಿಸುತ್ತಿದ್ದರು. ಅಂದು ದಿನ ಹೀಗೆ ಅವರ ಜೀವನ ಸಾಗುತ್ತಿರುವಾಗ ಅವರ ಸುಂದರವಾದ ಬದುಕಿನಲ್ಲಿ ಸಿಡಿಲಿನಂತೆ ಇಂದ್ರನ ಆಗಮನವಾಗುತ್ತೆ.ಅಹಲ್ಯೆಯ ಸೌಂದರ್ಯಕ್ಕೆ ಮರುಳಾದ ಇಂದ್ರ ಹೇಗಾದರೂ ಅಹಲ್ಯೆಯನ್ನು ವಶ ಪಡಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಮಹಾ ಪತಿವ್ರತೆಯಾದ ಅಹಲ್ಯೆಯ ಮುಂದೆ ಇವನ ಆಟ ನಡಿಯೊದಿಲ್ಲಾ ಎಂದು ತಿಳಿದಾಗ ಇಂದ್ರ ಅಡ್ಡ ದಾರಿಯಲ್ಲಿ ಹೋಗಲು ನಿರ್ದರಿಸುತ್ತಾನೆ. ಬೆಳಗಿನ ಜಾವ ಸೂರ್ಯೋದಯಕ್ಕೆ ಬಹಳ ಮುಂಚೆ ಗೌತಮ ಮುನಿಗಳ ಆಶ್ರಮದ ಬಳಿ ಹೋಗಿ ಕೋಳಿ ಕೂಗಿದ ಹಾಗೆ ಕೂಗುತ್ತಾನೆ. ಇದೇನು ಇನ್ನೂ ಇಷ್ಟೊಂದು ಕತ್ತಲಿದೆ, ಆಗಲೇ ಬೆಳಗಾಗಿ ಬಿಟ್ಟಿತಾ? ಎಂದು ಗೌತಮ ಮುನಿಗಳಿಗೆ ಅನುಮಾನ ಬರುತ್ತೆ. ಆದರೆ ಕೋಳಿ ಕೂಗಿತಲ್ಲ ಬೆಳಗಾಗಿರಬೇಕು ಅಂತ ನಿದ್ರೆಯಿಂದ ಎದ್ದು ತಮ್ಮ ಪ್ರಾತಃ ಕಾಲದ ಕೆಲಸಗಳನ್ನು ಪ್ರಾರಂಬಿಸಲು ನದಿ ಕಡೆ ಹೊರಡುತ್ತಾರೆ.ಅವರು ಆ ಕಡೆ ಹೊರಡುತ್ತಿದ್ದ ಹಾಗೆ ಇಂದ್ರ ಗೌತಮರ ರೂಪದರಿಸಿ ಗೌತಮರ ಆಶ್ರಮದ ಒಳಗೆ ಹೋಗಿ ಅಹಲ್ಲೆಯನ್ನು…
ಕಾವ್ಯ ರಶ್ಮಿ ನಿನ್ನೊಲವ ತುಂಬಿದ ಹೃದಯದ ಗೂಡುಒಲವಿಂದ ಬಂದು ನೀನೊಮ್ಮೆ ನೋಡು ನೀನಗಾಗಿಯೇ ಮಿಡಿಯುತಿದೆ ಈ ಹೃದಯಎದೆಯ ಬಡಿತ ಕೇಳಿಸದೆಯಾ? ನನ್ನೀನಿಯ ನೀನ್ಹೆಸರೆ ನನ್ನುಸಿರಾಗಿದೆ, ನೀನೆ ನನ್ನ ಜೀವಶಬರಿಯಂತೆ ನಾ ಕಾಯುವೆ ನೀನೆ ನನ್ನ ದೈವ ನೀ ಕೇಳುವೆಯಾ ನನ್ನ ಮನದ ಮೊರೆಯಬಾಳಿಗೆ ಬೆಳಕಾಗಿ ಬರುವೆಯಾ ನನ ಗೆಳೆಯ
ಪ್ರಶಸ್ತಿ ಆಯ್ಕೆ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸೂಚನೆ ಎಲ್ಲ ಜಾತಿ, ಧರ್ಮ, ಲಿಂಗಗಳಿಗೂ ಪ್ರಾತಿನಿಧ್ಯ | ಸಂಘ ಸಂಸ್ಥೆಗಳಿಗೆ 10 ಪ್ರಶಸ್ತಿ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ( ಅಕ್ಟೋಬರ್ 26) ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಉನ್ನತ ಮಟ್ಟದ ಸಭೆ ಜರುಗಿತು.ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಅರ್ಹರಿಗೆ ಪ್ರಶಸ್ತಿ ನೀಡಬೇಕು. ಪ್ರಾದೇಶಿಕ ನ್ಯಾಯ ಕಡ್ಡಾಯವಾಗಿ ಪಾಲಿಸಬೇಕು. ಎಲ್ಲಾ ಜಾತಿ, ಧರ್ಮ, ಲಿಂಗಗಳಿಗೂ ಪ್ರಾತಿನಿಧ್ಯ ದೊರಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಕನ್ನಡದ ಪರವಾಗಿ ಕಾರ್ಯನಿರ್ವಹಿಸಿರುವ ಸಂಘ ಸಂಸ್ಥೆಗಳಿಗೆ ಒಟ್ಟಾರೆ 10 ಪ್ರಶಸ್ತಿಗಳನ್ನು ನೀಡಬೇಕು ಎಂದು ಆಯ್ಕೆ ಸಮಿತಿ ಸದಸ್ಯರು ಸಭೆಯಲ್ಲಿ ತಿಳಿಸಿದರು.ಈ ಬಾರಿ 68 ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಬೇಕಿದ್ದು, ಕರ್ನಾಟಕ ಸಂಭ್ರಮದ ಪ್ರಯುಕ್ತ ಸಂಘ ಸಂಸ್ಥೆಗಳಿಗೆ 10 ಪ್ರಶಸ್ತಿಗಳನ್ನು ನೀಡಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಅರ್ಜಿ ಕೊಡುವವವರು ಹೆಚ್ಚಿದ್ದ ಕಾರಣ, ಅದಕ್ಕೆ ಕಡಿವಾಣ…
