ವಿಜಯಪುರ: ದೇಹ ಮತ್ತು ಮನುಸುಗಳನ್ನು ಒಂದುಗೂಡಿಸಿ ವಿದ್ಯಾರ್ಥಿಗಳನ್ನು ಕ್ರೀಡಾ ಸಾಧನೆಯ ಮಾರ್ಗದಲ್ಲಿ ಕೈ ಹಿಡಿದು ನಡೆಸುವ ಶಕ್ತಿ ಇರುವುದು ದೈಹಿಕ ಶಿಕ್ಷಣ ಶಿಕ್ಷಕರಲ್ಲಿ ಮಾತ್ರ ಎಂದು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಕುಲಸಚಿವರು ಮೌಲ್ಯ ಮಾಪನ ಪ್ರೊ. ಎಚ್.ಎಂ. ಚಂದ್ರಶೇಖರ ಹೇಳಿದರು.
ಇಲ್ಲಿನ ಮಹಿಳಾ ವಿವಿ ಆವರಣದಲ್ಲಿ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕರುಗಳ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಘವು ದೈಹಿಕ ಶಿಕ್ಷಣದ ಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ತರಬೇತಿ ನೀಡಿ, ಅವರ ಜೀವನನ್ನು ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗಬೇಕು. ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರುಗಳ ಪಾತ್ರ ಮಹತ್ವದಾಗಿದೆ ಎಂದರು.
ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಶಿಕ್ಷಣ ನಿಕಾಯದ ಡೀನ್, ಸಿಂಡಿಕೇಟ್ ಸದಸ್ಯ ಪ್ರೊ. ರಾಜಕುಮಾರ ಮಾಲಿಪಾಟೀಲ, ಮಾನವ ಸಂಘ ಜೀವಿ, ಸಮಾಜ ಜೀವಿಯಾಗಿರುವುದರಿಂದ ಕ್ರೀಡೆಗಳು ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿ ಬದುಕಲು ಕಲಿಸುತ್ತವೆ. ಕ್ರೀಡೆಗಳು ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕ್ರೀಡೆಯಲ್ಲಿ ಸೋಲು, ಗೆಲವು ಸಹಜವಾದರೂ ನಿರಂತರ ಸಾಧನೆಯಿಂದ ಐತಿಹಾಸಿಕ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಿವಪ್ರಸಾದ ಎಸ್. ಎಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಡಾ. ರಾಜಶೇಖರ ಬೆನಕನಹಳ್ಳಿ, ಡಾ. ಹನುಮಂತಯ್ಯ ಪೂಜಾರ, ಪ್ರೊ. ವಿಷ್ಣು ಶಿಂದೆ, ಅಶ್ವಿನಿ ಕೆ.ಎನ್., ಮಹಾಂತೇಶ ಲಾಯದಗುಂದಿ, ಶಂಕುತಲಾ ಬಿರಾದಾರ, ಮಹೇಶ್ವರಿ ಉದಗಟ್ಟಿ, ಮಲ್ಲವ್ವ ಬಾಜಪ್ಪನವರ, ಸುನೀಲ ನಡಕಟ್ಟಿ, ಮಂಚಪ್ಪ ಸಣ್ಣಬಸಪ್ಪನವರ, ಡಾ. ಮಲ್ಲಸಿದ್ದಪ್ಪ ಇದ್ದರು.
ವಿಜಯಕುಮಾರ ಬಿಕ್ಕಣ್ಣವರ ಸ್ವಾಗತಿಸಿದರು. ಡಾ. ಸವಿತಾ ಅಣ್ಣೆಪ್ಪನವರ ನಿರೂಪಿಸಿದರು. ಮಲ್ಲಿಕಾರ್ಜುನ ಡೋಣ್ಣೂರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment