ವಿಜಯಪುರ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಠಾನದಿಂದ ಫೆ.೧೨ರಂದು ಬನ್ಸಿಲಾಲ ವಿಠ್ಠಲದಾಸ ದರಬಾರ ಪದವಿ ಮಹಾವಿದ್ಯಾಲಯದಲ್ಲಿ ಬೆಳಗ್ಗೆ ೧೦ ಗಂಟೆಗೆ ಡಾ. ಸಿಂಪಿ ಲಿಂಗಣ್ಣನವರ ೧೧೯ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಪುರ ವಿದ್ಯಾವರ್ಧಕ ಸಂಘದ ಸಮನ್ವಯ ಅಧಿಕಾರಿ ಡಾ. ವ್ಹಿ.ಬಿ. ಗ್ರಾಮಪುರೊಹೀತ ಅವರು ವಹಿಸುವರು. ವಿಶೇಷ ಅತಿಥಿಗಳಾಗಿ ಚಡಚಣದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎಸ್.ಎನ್. ಬೋರಗಿ ಭಾಗವಹಿಸಲಿದ್ದು, ಬಿ.ವಿ.ದರಬಾರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಸ್. ಮಣೂರ ಉಪಸ್ಥಿತರಿರುವರು. ಹಲಸಂಗಿ ಗೆಳೆಯರ ಪ್ರತಿಷ್ಠಾನದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಟಿ.ಭೂಬಾಲನ್, ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯ ಸಂಚಾಲಕರಾದ ಪ್ರೋ. ದೊಡ್ಡಣ್ಣ ಬ. ಬಜಂತ್ರಿ ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ಅವರು ಭಾಗವಹಿಸುವರು.
ಮಂಜುನಾಥ ಜುನಗೊಂಡ ಡಾ. ಸಿಂಪಿ ಲಿಂಗಣ್ಣನವರ ಜೀವನ ಹಾಗೂ ಸಾಧನೆಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಶ್ರೀಮಂತ ಮಾದರ ಜಾನಪದ ಸಂಗೀತವನ್ನು ಪ್ರಸ್ತುತಪಡಿಲಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment