Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಹೊನವಾಡ: ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶನಿವಾರ ಆಚರಿಸಲಾಯಿತು.ರಾವಸಾಬ ಶೇಡ್ಯಾಳ ಶಿಕ್ಷಕರು ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ವ್ಹಿ ವ್ಹಿ ಎಸ್ ಪದವಿ ಪೂರ್ವ ಕಾಲೇಜನಲ್ಲಿ ನಡೆದ ಕಾರ್ಯಕ್ರಮದಲ್ಲಿಪ್ರಾಧ್ಯಪಕರಾದ ಎಂ ಜಿ ಕುಲಕರ್ಣಿ ಮಾತನಾಡಿ, ಮಹನೀಯರುಗಳ ಜೀವನ ಸಾಧನೆ ಹಾಗೂ ಆದರ್ಶಗಳು ಪ್ರೇರಣೆ ನೀಡುತ್ತವೆ. ಅವುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿರುತ್ತದೆ. ದೃಢ ನಿರ್ಧಾರ ಹಾಗೂ ನಿರಂತರ ಪ್ರಯತ್ನದಿಂದ ನಮ್ಮಲ್ಲಿರುವ ದುರ್ಗುಣಗಳನ್ನು ಮೆಟ್ಟಿ ಸದ್ಗುಣಗಳನ್ನು ಬೆಳಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಬದಲಾವಣೆ ಹೊಂದಲು ಸಾಧ್ಯ ಎಂಬುದನ್ನು ರತ್ನಾಕರ ಎಂಬ ಒಬ್ಬ ಸಾಮಾನ್ಯ ಬೇಟೆಗಾರ ವೃತ್ತಿಯ ವ್ಯಕ್ತಿ ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನೆ ಹೊಂದಿರುವುದೇ ಉತ್ತಮ ನಿದರ್ಶನ. ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಗ್ರಂಥವು ಇಡೀ ಜಗತ್ತಿಗೆ ಆದರ್ಶ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಸುವ ಶ್ರೇಷ್ಠ ಮಹಾ ಕಾವ್ಯವಾಗಿದೆ. ಮಹರ್ಷಿ ವಾಲ್ಮೀಕಿಯ ಜೀವನ ಸಂದೇಶಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.ಪ್ರಾಚಾರ್ಯರಾದ ಎಂ ಎ ಹಿರೇಮಠ, ಮಮತಾ ಹಿರೇಮಠ, ಮಂಜುನಾಥ್…
ಸಿಂದಗಿ: ವಿಶ್ವಕ್ಕೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರು ಮಾನವ ಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಾಗೆಯೇ ಮಾನವೀಯತೆಯೇ ಧರ್ಮ ಎಂಬುದನ್ನು ಪ್ರತಿಪಾದಿಸಿದ್ದರು ಎಂದು ಪ್ರಾಚಾರ್ಯ ವಿಮಲಕಾಂತ ಪಾಟೀಲ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಪ.ಪೂ.ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡ ವಾಲ್ಮೀಕಿ ಜಯಂತಿ ಅಂಗವಾಗಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.ವಾಲ್ಮೀಕಿ ಮಹರ್ಷಿ ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ. ಇಡೀ ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರದ್ದಾಗಿದ್ದು, ರಾಮಾಯಣ ಮಹಾಕಾವ್ಯ ಬರೆಯುವ ಮೂಲಕ ಸತತ ಪರಿಶ್ರಮವಿದ್ದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.ಉಪ ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಪಿ.ವ್ಹಿ.ಮಹಲಿನಮಠ, ಎನ್.ಬಿ.ಪೂಜಾರಿ, ಎಸ್.ಜಿ.ಮಾರ್ಸನಳ್ಳಿ, ಎಸ್.ಎಚ್.ಜಾಧವ, ಬಿ.ಬಿ.ಜಮಾದಾರ, ರಾಹುಲ ನಾರಾಯಣಕರ್, ಎನ್.ಎಂ.ಶೆಳ್ಳಗಿ, ವ್ಹಿ.ಕೆ.ಹಿರೇಮಠ, ಐ.ಎಸ್.ಶಿವಸಿಂಪಿಗೇರ್, ವ್ಹಿ.ಪಿ.ನಂದಿಕೋಲ, ಸುಭಾಸ ಹೊಸಮನಿ, ಆರ್.ಎಂ.ಕೊಳ್ಳೂರೆ, ನೀಲಕಂಠ ಮೇತ್ರಿ, ಅಡಿವೆಪ್ಪ ದಸ್ಮಾ, ಎ.ಬಿ.ಬಮ್ಮಣ್ಣಿ, ಭಾಗಮ್ಮ ಕೋರಿ, ಶರಣು ಹೂಗಾರ, ಗವಿಸಿದ್ದಪ್ಪ ಆನೆಗುಂದಿ, ಮೇಘಾ…
ಇಂಡಿ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ವೇಳೆ ಆಹಾರ ನಿರೀಕ್ಷಿಕ ಪರಮಾನಂದ ಹೂಗಾರ ಹಾಗೂ ಗ್ರಾಮೀಣ ಪೋಲಿಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಸೋಮೇಶ ಗೆಜ್ಜೆ ಹಾಗೂ ಪೊಲೀಸರು ದಾಳಿಗೈದು ಅಕ್ಕಿ ಹಾಗೂ ವಾಹನ ಜಪ್ತಿ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬರಗುಡಿ ಅಹಿರಸಂಗ ರಸ್ತೆಯಲ್ಲಿ ನಡೆದಿದೆ.ಸೂರ್ಯಕಾಂತ ಗೌಡಗಾಂವ ಬಂಧಿತ ಆರೋಪಿ. ಹಾಗೂ ಈತನಿಗೆ ಸೋಲಾಪುರದ ಸೋಹೇಲ್ ಕಲಬುರಗಿ ಅಕ್ಕಿ ತರಲು ಹೇಳಿದ್ದ ಎನ್ನಲಾಗಿದೆ.ಆರೋಪಿ ಟಾಟಾ ಎಸಿ ವಾಹನದಲ್ಲಿ 450 ಕೆಜಿ ಅಕ್ಕಿ ಸಾಗಾಟ ಮಾಡುವಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು ಅಕ್ಕಿ, ವಾಹನ ಜಪ್ತಿಗೈದಿದ್ದಾರೆ.ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂಡಿ: ವಿದ್ಯಾರ್ಥಿ ವೇತನಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ.ಪಟ್ಟಣದ ತಾಲೂಕು ಅಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟಿಸಿದ ನಂತರ ಕಂದಾಯ ಇಲಾಖೆ ಶಿರಸ್ತೆದಾರ ಎಸ್ ಆರ್ ಮುಜಗೊಂಡ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.ತದನಂತರ ನಗರ ಕಾರ್ಯದರ್ಶಿ ಸಚಿನ ಧಾನಗೊಂಡ ಮಾತನಾಡಿ,ರಾಜ್ಯದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ 2022-23 ನೇ ಸಾಲಿನ ವಿದ್ಯಾರ್ಥಿ ವೇತನವನ್ನು ರಾಜ್ಯ ಸರ್ಕಾರ ತಡೆ ಹಿಡಿದಿದೆ. ಅದಲ್ಲದೇ UK ತಂತ್ರಾಂಶದಲ್ಲಿ ವಿದ್ಯಾರ್ಥಿವೇತನ ಮಂಜೂರಾಗಿರುವುದಾಗಿ ಕಂಡುಬರುತ್ತದೆ. ಆದರೆ ವಿದ್ಯಾರ್ಥಿಗಳ ಖಾತೆಗೆ ಹಣ ಮಾತ್ರ ಜಮೆಗೊಂಡಿರುವುದಿಲ್ಲ. ಇನ್ನೂ ಈ ಹಿಂದಿನ ಸಾಲಿನ ಹಣ ಜಮಾವ ಆಗುವ ಮೊದಲೇ ಬರುವ ಶೈಕ್ಷಣಿಕ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿರುವುದು, ವಿದ್ಯಾರ್ಥಿಗಳಿಗೆ ಗೊಂದಲವನ್ನು ಉಂಟು ಮಾಡಿದೆ ಎಂದರು.ಆದರೆ ರಾಜ್ಯ ಸರ್ಕಾರ ಈ ಕೂಡಲೇ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು. ಅದಲ್ಲದೇ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿವುದನ್ನು…
ತಾಳಿಕೋಟಿ. ಪಟ್ಟಣದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ತಾಲೂಕಾ ಆಡಳಿತ ತಾಲೂಕ ಪಂಚಾಯತ ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ತಾಳಿಕೋಟಿ ಮತ್ತು ವಾಲ್ಮೀಕಿ ಸಮಾಜದ ವತಿಯಿಂದ ಸಡಗರದಿಂದ ಆಚರಿಸಲಾಯಿತು.ಶನಿವಾರ ಪಟ್ಟಣದ ದೇವರ ಹಿಪ್ಪರಗಿ ರಸ್ತೆಯಲ್ಲಿರುವ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಸಮಾಜ ದಲಿತ ಪರ ಸಂಘಟನೆಗಳ ಸಹಯೋಗ ತಾಲೂಕ ಆಡಳಿತ ತಾಲೂಕ ಪಂಚಾಯತ್ ಸಮಾಜ ಕಲ್ಯಾಣ ಇಲಾಖೆ ಮುದ್ದೇಬಿಹಾಳ ಹಾಗೂ ಪುರಸಭೆ ತಾಳಿಕೋಟಿ ಇವರ ಸಂಯುಕ್ತ ಆಶ್ರಯದಲ್ಲಿ ಜಯಂತೋತ್ಸವವನ್ನು ಏರ್ಪಡಿಸಲಾಗಿತ್ತು. ನಂತರ ತಹಸಿಲ್ದಾರ್ ಕಾರ್ಯಾಲಯ ಸಭಾಂಗಣದಲ್ಲಿ ತಹಸಿಲ್ದಾರ್ ಕೀರ್ತಿ ಚಾಲಕ್ ಅವರು ಮಹರ್ಷಿ ವಾಲ್ಮೀಕಿ ಇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಪ್ರೇಮನಗೌಡ ಪಾಟೀಲ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಬೇಡ ಜನಾಂಗದಲ್ಲಿ ಜನಸಿದರೂ ಇಡೀ ವಿಶ್ವಕ್ಕೆ ಸಮಾಜಮುಖಿ ಚಿಂತನೆಯನ್ನು ನೀಡಿದ್ದಾರೆ. ಮಹಾನ್ ಗ್ರಂಥ ರಾಮಾಯಣ ರಚಿಸುವುದರ ಮೂಲಕ ದಾರ್ಶನಿಕ ಎನಿಸಿಕೊಂಡರು. ಅವರೊಬ್ಬ ಮಹಾ ತಪಸ್ವಿ.…
ದೇವರಹಿಪ್ಪರಗಿಯ ಐತಿಹಾಸಿಕ ರಾವುತರಾಯ ಮಲ್ಲಯ್ಯ ಜಾತ್ರಾಮಹೋತ್ಸವ ದೇವರಹಿಪ್ಪರಗಿ: ಐತಿಹಾಸಿಕ ರಾವುತರಾಯ ಮಲ್ಲಯ್ಯ ಜಾತ್ರಾ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯು ಅನ್ನದಾಸೋಹ ಏರ್ಪಡಿಸುವುದರ ಮೂಲಕ ಪಟ್ಟಣದ ವಿವಿಧ ಗೆಳೆಯರ ಬಳಗಗಳು ಭಕ್ತರ ಪ್ರಸಾದ ಸೇವೆಯಲ್ಲಿ ನಿರತವಾಗಿವೆ.ಪಟ್ಟಣದ ರಾವುತರಾಯ ಮಲ್ಲಯ್ಯ ಜಾತ್ರೆಯ ೪ನೇ ದಿನದ ಸಕ್ಕರೆ ಲೋಬಾನ ಕಾರ್ಯಕ್ರಮದ ಅಂಗವಾಗಿ ಪ್ರತಿ ವರ್ಷ ನೆರೆಯ ಮಹಾರಾಷ್ಟ್ರ, ಗೋವಾ, ತೆಲಂಗಾಣ ರಾಜ್ಯಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅವರಿಗೆ ಊಟ ಹಾಗೂ ಉಪಹಾರದ ಅನುಕೂಲತೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರತಿವರ್ಷ ವಿವಿಧ ಗೆಳೆಯರ ಬಳಗಗಳು ಅನ್ನದಾಸೋಹದ ವ್ಯವಸ್ಥೆ ಕಲ್ಪಿಸಿ ತಮ್ಮದೇಯಾದ ಸೇವೆಯಲ್ಲಿ ನಿರತವಾಗಿವೆ.ಗೆಳೆಯರ ಬಳಗ ಕಳೆದ ೧೦ ವರ್ಷಗಳಿಂದ ಆರಂಭಿಸಿದ ದಾಸೋಹ ವ್ಯವಸ್ಥೆಯಲ್ಲಿ ಪಟ್ಟಣದ ವ್ಯಾಪಾರಸ್ಥರು, ವೈದ್ಯರು, ರೈತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಎಲ್ಲ ಸಮುದಾಯಗಳಿಗೆ ಸೇರಿದ ಯುವಕರು ಪಾಲ್ಗೊಳ್ಳುವುದು ವಿಶೇಷವಾಗಿದೆ. ಬೆಳಿಗ್ಗೆ ಬೇಗ ಪ್ರಸಾದವನ್ನು ತಯಾರಿಸಿ ದೇವರಿಗೆ ನೈವಿಧ್ಯ ಅರ್ಪಿಸಿ ನಂತರ ದಾಸೋಹ ಸೇವೆ ಪ್ರಾರಂಭಿಸಲಾಗುತ್ತದೆ. ಒಂದು ಕಡೆ…
ದೇವರಹಿಪ್ಪರಗಿ: ಮಹರ್ಷಿ ವಾಲ್ಮೀಕಿ ರಾಮಾಯಣ ಎಂಬ ಸುಂದರ ಮಹಾಕಾವ್ಯವನ್ನು ರಚಿಸುವುದರ ಮೂಲಕ ಕವಿಗಳ ಕವಿ ಎಂದು ಇತಿಹಾಸದಲ್ಲಿ ಹೆಸರಾಗಿದ್ದಾನೆ ಎಂದು ಕಾಂಗ್ರೆಸ್ ಧುರೀಣ ಸಾಯಿಕುಮಾರ ಬಿಸನಾಳ ಹೇಳಿದರು.ತಾಲ್ಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಶನಿವಾರ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು. ಜಗತ್ತಿನಲ್ಲಿ ಸತ್ವ ಮತ್ತು ಮೌಲ್ಯಯುತ ಸಾಹಿತ್ಯ ಸೃಷ್ಟಿಗೆ ಅಡಿಪಾಯವಾದ ರಾಮಾಯಣವನ್ನು ರಚಿಸುವುದರ ಮೂಲಕ ಮಹರ್ಷಿ ವಾಲ್ಮೀಕಿಯವರು ಮಮತೆ, ಭಾತೃತ್ವ, ತ್ಯಾಗ, ಮಮಕಾರ, ದೇಶಪ್ರೇಮ, ಅಳಿಲು ಸೇವೆ, ಪಿತೃ-ಮಾತೃ-ಭಾತೃ ವಾಕ್ಯ ಪರಿಪಾಲನೆಯಂತಹ ಮಾನವೀಯ ಮೌಲ್ಯಗಳನ್ನು ಇಡೀ ಮಾನವಕುಲಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇಂಥ ಕವಿಯನ್ನು ಮಹಾಕವಿ ಕಾಳಿದಾಸ ‘ಕವಿಗಳಕವಿ’ ಎಂದು ಗೌರವಿಸಿ ಶ್ಲಾಘಿಸಿದ್ದಾನೆ ಎಂದರು.ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಮಳಸಿದ್ದಯ್ಯ ಹಿರೇಮಠ ಪೂಜೆ ಸಲ್ಲಿಸಿದರು. ನಂತರ ಪ್ರಸಾದ ವಿತರಿಸಲಾಯಿತು.ಶಿವಪ್ಪ ಪೂಜಾರಿ, ವಿಠ್ಠಲ ದೇಗಿನಾಳ, ವಿದ್ಯಾಧರ ಸಂಗೋಗಿ, ಶರಣಬಸು ದೇಗಿನಾಳ, ಶಿವಪದ್ಮ ಹಳ್ಳಿ, ಅಪ್ಪಣ್ಣ ಗಣಜಲಿ, ರಾಜು ದೇಗಿನಾಳ, ಬಸವರಾಜ ಗಣಜಲಿ, ಅಂಬಾದಾಸ ಮಾನೆ, ಗೋವಿಂದ ದಳವಾಯಿ, ಸದಾಶಿವ ಜಂಬಗಿ,…
ದೇವರಹಿಪ್ಪರಗಿ: ಕನ್ನಡಪರ ಸೇರಿದಂತೆ ಪಟ್ಟಣದ ಎಲ್ಲ ಪ್ರಗತಿಪರ ಸಂಘಟನೆಗಳ ಸಹಕಾರದಿಂದ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸೋಣ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಶುಕ್ರವಾರ ಜರುಗಿದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ, ಶರಣ ಸಾಹಿತ್ಯ, ಚುಟುಕು ಸಾಹಿತ್ಯ ಪರಿಷತ್‌ಗಳು, ದಲಿತಪರ ಸಂಘಟನೆಗಳ ಸಲಹೆ ಸೂಚನೆಗಳನ್ನು ಪಾಲಿಸುವ ಮೂಲಕ ಕನ್ನಡ ನಾಡು, ನುಡಿಗೆ ಸೇವೆ ಸಲ್ಲಿಸಿದ ಪ್ರಮುಖರು ಹಾಗೂ ವಿವಿಧ ರಂಗಗಳ ಸಾಧಕರು ಸೇರಿದಂತೆ ಕನ್ನಡ ಭಾಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಜರುಗಲಿದೆ. ಜೊತೆಗೆ ಮುಖ್ಯವಾಗಿ ಕರ್ನಾಟಕಕ್ಕೆ ೫೦ರ ಸಂಭ್ರಮದ ಅಂಗವಾಗಿ ಅವಿಸ್ಮರಣೀಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶಿಷ್ಟವಾಗಿ ಆಚರಿಸೋಣ ಎಂದರು.ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಆರ್.ಕೊಕಟನೂರ, ಸಿಆರ್‌ಪಿ ವಿಜಯಲಕ್ಷ್ಮಿ ನವಲಿ, ತಾಲ್ಲೂಕು ಶಿಕ್ಷಕರ ಸಂಘದ ಸಂಘದ ಕಾರ್ಯದರ್ಶಿ ಜಿ.ಪಿ.ಬಿರಾದಾರ, ಕನ್ನಡಪರ ಸಂಘಟನೆಗಳ ಪ್ರಕಾಶ ಡೋಣೂರಮಠ, ರಹಿಮಾನ ಕಣಕಾಲ, ಚಂದ್ರಶೇಖರ…
ಮುದ್ದೇಬಿಹಾಳ: ೨೪ಸಾವಿರ ಶ್ಲೋಕಗಳನ್ನು ಒಳಗೊಂಡ ಮಹಾ ಕಾವ್ಯವನ್ನು ರಚಿಸಿ ಮಹರ್ಷಿ ವಾಲ್ಮೀಕಿ ಅವರು ನಮಗೆ ಕೊಟ್ಟಿದ್ದಾರೆ. ಕಾರ್ಟೂನ್‌ಗಳಲ್ಲಿ ತೋರಿಸುವ ಚಿತ್ರಗಳನ್ನು ನೋಡಿ ನಾವು ಇದು ರಾಮಾಯಣ ಅಂದುಕೊಂಡಿದ್ದೇವೆ. ಆದರೆ ಮಹರ್ಷಿ ವಾಲ್ಮೀಕಿ ನಮಗೆ ಕೊಟ್ಟಿರುವ ರಾಮಾಯಣದ ಮೌಲ್ಯಗಳೇ ಬೇರೆ ಎಂದು ಬಾಗೇವಾಡಿಯ ಶಿಕ್ಷಕ, ವಾಗ್ಮಿ ಅಶೋಕ ಹಂಚಲಿ ಹೇಳಿದರು.ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.ಕೌಟುಂಬಿಕ ಜೀವನದ ಮಹಾ ಮೌಲ್ಯಗಳನ್ನು ತೋರಿಸುವ ರಾಜ, ತಂದೆ-ತಾಯಿಗಳು ಹೇಗಿರಬೇಕು, ಹೆಂಡತಿಯ ಆದರ್ಶಗಳು ಏನಾಗಿರಬೇಕು, ಸಹೋದರರ ಭಾತೃತ್ವದ ಬಾಂಧವ್ಯ ಹೇಗಿರಬೇಕು ಎನ್ನುವ ವಿಚಾರಧಾರೆಗಳನ್ನಿಟ್ಟುಕೊಂಡು ಬರೆದ ಮಹಾಕಾವ್ಯ ರಾಮಾಯಣವಾಗಿದೆ. ಅದಕ್ಕೆ ಇಂದಿಗೂ ಕೂಡ ರಾಮಾಯಣ ಜನಮಾನಸದಲ್ಲಿ ಉಳಿದು ಜನರ ದಾರಿ ತೋರುವ ಮಹಾ ದೀಪವಾಗಿ ಬೆಳಗುತ್ತಿದೆ ಎಂದರು.ಡಿಎಸ್‌ಎಸ್ ಮುಖಂಡ ಹರೀಶ ನಾಟೇಕಾರ ಮಾತನಾಡಿದರು.ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ.ಮುದೂರ ಮಾತನಾಡಿ, ರಾಮಾಯಣ,…
ವಿಜಯಪುರ: ಅಪಘಾತದಿಂದಾಗಿ ಸಂಕಷ್ಟಕ್ಕೆ ಸಿಲುಕುವ ಚಾಲಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ನೆರವು ನೀಡಲು ಸರ್ಕಾರದಿಂದ ಕರ್ನಾಟಕ ರಾಜ್ಯ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯಡಿ ನೊಂದಾಯಿಸಿಕೊಳ್ಳಲು ಆಹ್ವಾನಿಸಲಾಗಿದೆ.ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆಯನ್ನು ನಿರ್ವಾಹಕರು ಮತ್ತು ಕ್ಲೀನ್‌ರಗಳಿಗೂ ಅನ್ವಯಿಸುವಂತೆ ಜಾರಿಗೊಳಿಸಿದ್ದು, ಜಿಲ್ಲೆಯ ಖಾಸಗಿ ಸಾರಿಗೆ ವಾಹನಗಳ ನಿವಾಹಕರು, ಕ್ಲೀನರ್‌ಗಳು ನೊಂದಾಯಿಸಿ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ.ಈ ಯೋಜನೆಯಡಿ ನೋಂದಾಯಿಸಿದ ಕಾರ್ಮಿಕರಿಗೆ ಅಪಘಾತದಿಮದ ಚಾಲಕರು, ನಿವಾಹಕರು ಹಾಗೂ ಕ್ಲೀನರ್‌ಗಳು ಮರಣ ಹೊಂದಿದ್ದಲ್ಲಿ ಅವರ ನಾಮನಿರ್ದೇಶಿತರಿಗೆ ೫ ಲಕ್ಷ ರೂ. ಪರಿಹಾರ, ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದ ಫಲಾನುಭವಿಗೆ ದುರ್ಬಲತೆಯ ಪ್ರಮಾಣಕ್ಕನುಗುಣವಾಗಿ ೨ ಲಕ್ಷದವರೆಗೆ ಪರಿಹಾರ ಒದಗಿಸಲಾಗುತ್ತದೆ. ಅಪಘಾತದಿಂದ ತಾತ್ಕಾಲಿಕ ದುರ್ಬಲತೆ ಹೊಂದಿದ ಫಲಾನುಭವಿಗೆ ಆಸ್ಪತ್ರೆ ವೆಚ್ಚದ ಮರುಪಾವತಿ, ಅಪಘಾತಕ್ಕೊಳಗಾಗಿ ೧೫ ದಿನಗಳಿಗಿಂತ ಕಡಿಮೆ ಅವದಿಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ ಗರಿಷ್ಠ ೫೦ ಸಾವಿರ ರೂ.ವರೆಗೆ ಅಥವಾ ನಿಖರ ಆಸ್ಪತ್ರೆ…
