ವಿಜಯಪುರ: ಈ ದೇಶದ ಮೊದಲ ಚಳುವಳಿಗಾರ ಜ್ಯೋತಿಬಾಪುಲೆ ಅವರಿಗೂ ಅಸ್ಪೃಶ್ಯತೆಯ ಅಪಮಾನ ಅಂಟಿತ್ತು. ಇದಕ್ಕೆಲ್ಲ ಶಿಕ್ಷಣವೇ ಪರಿಹಾರ ಎಂದು ಪ್ರಪ್ರಥಮ ಬಾರಿಗೆ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ದೇಶದಲ್ಲಿ ತೆಗೆದವರು ಮಹಾತ್ಮ ಜ್ಯೋತಿಬಾ ಫುಲೆ ಎಂದು ಬಿಎಸ್ ಪಿ ರಾಜ್ಯ ವಕ್ತಾರ ಸಿಕೆ ತೂರವಿ ಅವರು ಹೇಳಿದರು.
ವಿಜಯಪುರ ನಗರದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ವೃತ್ತದ ಸಮೀಪದ ಮೊದಲ ಐಬಿಯಲ್ಲಿ ಇತ್ತೀಚೆಗೆ ದಲಿತ ಸಮರ ಸೇನೆ-ಕರ್ನಾಟಕ ಜಿಲ್ಲಾ ಶಾಖೆ ವಿಜಯಪುರ ವತಿಯಿಂದ ಹಮ್ಮಿಕೊಂಡಿದ್ದ ದಲಿತ ಚಳುವಳಿಯ ಐವತ್ತು ವರ್ಷಗಳು ಹಾಗೂ ಜಿಲ್ಲಾ ಸಂಚಾಲನ ಸಭೆಯ ಉದ್ದೇಶಿಸಿ ಅವರು ಮಾತನಾಡಿದರು.
1974ರಲ್ಲಿ ಪ್ರೊಫೆಸರ್ ಬಿ ಕೃಷ್ಣಪ್ಪ, ದೇವನೂರು ಮಹಾದೇವ, ಡಾಕ್ಟರ್ ಸಿದ್ದಲಿಂಗಯ್ಯ, ಮಂಗಳೂರು ವಿಜಯ, ಇನ್ನು ಮುಂತಾದ ಮಹನೀಯರಿಂದ ಸಂಘಟನೆಗೊಂಡ ಡಿಎಸ್ಎಸ್ ಹಕ್ಕು ವಂಚಿತರಿಗೆ, ನ್ಯಾಯ ವಂಚಿತರಿಗೆ, ಅಸಹಾಯಕರಿಗೆ, ಭೂ ರಹಿತರಿಗೆ ರಕ್ಷಾ ಕವಚವಾಗಿ ಕೆಲಸ ಮಾಡಿದ್ದು ಮಾನನೀಯ ಎಂದು ಹೇಳಿದರು.
ಸಾಹಿತಿ ಪತ್ರಕರ್ತ ಅನಿಲ್ ಹೊಸಮನಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಕೀಲರಾದ ಉತ್ತಮ್, ಆನಂದ್, ಸಮಿತಿಯ ಜಿಲ್ಲಾಧ್ಯಕ್ಷ ಗೌಡಪ್ಪ ಬಸಪ್ಪ, ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯ ಮಂಡಿಸಿದರು.
ತಮ್ಮ ಬೇಡಿಕೆಗಳಿಗೆ ಜಿಲ್ಲಾಡಳಿತ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸಮಿತಿಯ ಸಂಚಾಲಕ ಅಮೃತ ರವರು ಸಮಿತಿಯ ಕಾರ್ಯ ಸಾಧನೆಗಳು ಹಾಗೂ ಸುಸಂಘಟನಾತ್ಮಕ ಹೋರಾಟಗಳ ಕುರಿತು ಮಾತನಾಡಿದರು.
ಸಭೆಯಲ್ಲಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ಮುಖಂಡರುಗಳಾದ ಯಾಸಿನ್, ಸಂಗಮೇಶ್, ಸಾಗರ್, ಪರಶುರಾಮ್, ಉದಯ್, ಕಿರಣ ಮುಂತಾದವರು ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment