ಇಂಡಿ: ಏಡ್ಸ್ ಜಾಗೃತಿ ಜಾಥಾ ಮಾಡುವ ಉದ್ದೇಶ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ತಡೆಗಟ್ಟುವುದಾಗಿದೆ. ಪ್ರಸ್ತುತ ಹೆಚ್.ಐ.ವ್ಹಿ ಸೊಂಕನ್ನು ಗುಣಪಡಿಸಲಾಗದು, ಆದರೆ ರೋಗದ ಬಗ್ಗೆ ಉತ್ತಮ ಗುಣಮಟ್ಟದ ಶಿಕ್ಷಣದಿಂದ ಅದನ್ನು ನಿಯಂತ್ರಿಸಬಹುದು. ಅಸುರಕ್ಷಿತ ಲೈಂಗಿಕತೆಯಿಂದಾಗಿ ಹೆಚ್.ಐ.ವ್ಹಿ ಸೊಂಕಿತರ ಪಟ್ಟಿಯಲ್ಲಿ ಯುವಕರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಯುವಕ-ಯುವತಿಯರು ಹೆಚ್.ಐ.ವ್ಹಿ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು. ಮನುಷ್ಯನ ಜೀವಿತಾವಧಿಯಲ್ಲಿ ಯಮನಂತೆ ಕಾಡುವ ಈ ರೋಗವನ್ನು ಹೋಗಲಾಡಿಸಲು ಮುಖ್ಯವಾಗಿ ಬೇಕಾಗಿರುವುದು ಅರಿವು. ಅದಕ್ಕಾಗಿ ಜನರಲ್ಲಿ ಹೆಚ್ಚೆಚ್ಚು ಜಾಗೃತಿ ಮೂಡಿಸಬೇಕು ಎಂದು ಪ್ರಾಚಾರ್ಯ ಎಸ್.ಬಿ.ಜಾಧವ ಹೇಳಿದರು.
ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ರೆಡ್ ರಿಬನ್ ಕ್ಲಬ್, ಎನ್ನೆಸ್ಸೆಸ ಮತ್ತು ರೆಡ್ ಕ್ರಾಸ್ ಅಡಿಯಲ್ಲಿ ವಿಶ್ವ ಏಡ್ಸ್ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿನಿ ಭಾಗ್ಯಶ್ರೀ ನೆದಲಗಿ, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಡಾ.ಪಿ.ಕೆ.ರಾಠೋಡ, ಸಹಾಯಕ ಪ್ರಾಧ್ಯಾಪಕ ಡಾ.ಸುರೇಂದ್ರ ಕೆ ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕ ಡಾ.ಆನಂದ ನಡವಿನಮನಿ, ಶ್ರೀಶೈಲ, ಡಾ.ಸಿ.ಎಸ್.ಬಿರಾದಾರ, ಡಾ.ಶ್ರೀಕಾಂತ ರಾಠೋಡ, ಮಲ್ಲಿಕಾರ್ಜುನ ಕೋಣದೆ, ಆರ್.ಪಿ.ಇಂಗನಾಳ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment