ಕೆಂಭಾವಿ: ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಮೂಡಿಸಿದಾಗ ಏಡ್ಸ್ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದು ಡಾ. ಗಿರೀಶ್ ಕುಲಕರ್ಣಿ ಹೇಳಿದರು.
ರೆಡ್ ರಿಬ್ಬಿನ ಕ್ಲಬ್ ಸಹಯೋಗದೊಂದಿಗೆ ‘ಏಡ್ಸ್ ಜಾಗೃತಿ ‘ ಕುರಿತು ಬಾಪುಗೌಡ ಪದವಿ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಡತನ, ನಿರುದ್ಯೋಗ, ಅಸಮಾನತೆ ಮಧ್ಯೆ ಆರೋಗ್ಯದ ಸಮಸ್ಯೆಯು ಕೂಡ ಇಂದು ಮಾನವ ಸಂಕುಲವನ್ನು ಹಲವು ರೀತಿಯಲ್ಲಿ ಚಿಂತೆಗೀಡು ಮಾಡಿದೆ. ಅಂತಹವುಗಳಲ್ಲಿ ಏಡ್ಸ್ ಕೂಡ ಒಂದು. ಇದು ಕಣ್ಣಿಗೆ ಕಾಣದೇ, ಒಳಗೊಳಗೆ ಮನುಷ್ಯನ ನೆಮ್ಮದಿ ಹಾಗೂ ಸಂತೋಷವನ್ನು ಕಿತ್ತುಕೊಂಡು ಜೀವ ಹಿಂಡಿ, ಮುಂದೊಂದು ದಿನ ಜೀವವನ್ನೇ ಬಲಿ ತೆಗೆದುಕೊಳ್ಳುವ ಸಾಧ್ಯತೆ ಕೂಡ ಇರುತ್ತದೆ. ಅದರ ಸಲುವಾಗಿ ವಿದ್ಯಾರ್ಥಿಗಳು ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಜಾಗೃತರಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರು ಪಾರ್ವತಿ, ವಿಶ್ವನಾಥ ರೆಡ್ಡಿ, ಸುನೀಲ್ ಹುಲ್ಯಳ್, ಸ್ವಾತಿಕಾ ಬಿ ಆರ್, ಲಕ್ಷ್ಮೀ, ರಾಮಣ್ಣ ಹಾಲಾಳ್ ಹಾಗೂ ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment