Author: editor.udayarashmi@gmail.com

ವಿಜಯಪುರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಲ್ಲ ಇಲಾಖೆಗಳು ಸಮನ್ವಯತೆಯೊಂದಿಗೆ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಜೂನ್ ೧೨ರಂದು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.ಇತ್ತೀಚಿಗೆ ನಡೆದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವ ಬಾಲಕಾರ್ಮಿಕರ ಪದ್ಧತಿ ವಿರೋಧಿ ದಿನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಎಡಿಸಿ ಡಾ.ಔದ್ರಾಮ ಅವರು ಮಾತನಾಡಿದರು. ನಿರ್ದೇಶಾನುಸಾರ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.ಗ್ರಾಮ ಪಂಚಾಯಿತಿ, ಪುರಸಭೆ ಹಾಗೂ ನಗರ ಸಭೆ ವತಿಯಿಂದ ಕಸ ವಿಲೇವಾರಿ ವಾಹನಗಳಲ್ಲಿ ಉಚಿತವಾಗಿ ಬಾಲಕಾರ್ಮಿಕ ಪದ್ಧತಿ ವಿರೋಧಿ ಕುರಿತು ಘೋಷಣೆ ಹಾಗೂ ಪಂಚಾಯಿತಿಗಳಲ್ಲಿ ಡಂಗುರ ಸಾರಿಸಬೇಕು ಎಂದು ಸೂಚಿಸಿದರು. ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ನಡೆಯಲಿರುವ ಜಾಥಾ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದ ಅವರು,ಬಾಲಕಾರ್ಮಿಕ ಮುಕ್ತ ಗ್ರಾಮಕ್ಕೆ ಬಹುಮಾನ ನೀಡಬೇಕು ಎಂದು ತಿಳಿಸಿದರು.ಜಿಲ್ಲೆಯ ಎಲ್ಲಾ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವುದೇ ನಮ್ಮ ಗುರಿ ಎಂದು ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ತುಬಚಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಆವರಣದಲ್ಲಿ ನಡೆದ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪೂಜ್ಯರು, ಸಮಾಜದಿಂದ ಮದ್ಯಪಾನ, ಧೂಮಪಾನ ಸೇರಿದಂತೆ ವಿವಿಧ ವ್ಯಸನಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ, ಆರೋಗ್ಯಕರ ಮತ್ತು ಆದರ್ಶ ಸಮಾಜವನ್ನು ನಿರ್ಮಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.ಜಮಖಂಡಿಯ ಓಲೆ ಮಠದ ಆನಂದ ದೇವರು ಮಾತನಾಡಿ,ವ್ಯಸನಗಳು ವ್ಯಕ್ತಿಯ ಜೀವನವನ್ನು ಮಾತ್ರವಲ್ಲದೆ, ಇಡೀ ಕುಟುಂಬವನ್ನೆ ಬೀದಿಪಾಲು ಮಾಡುತ್ತವೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಇಂತಹ ಪಿಡುಗುಗಳನ್ನು ಬುಡಸಮೇತ ಕಿತ್ತೊಗೆಯಬೇಕಿದೆ. ಆಧ್ಯಾತ್ಮಿಕ ಚಿಂತನೆ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ವ್ಯಸನಮುಕ್ತ ಸಮಾಜವನ್ನು ನಿರ್ಮಿಸಲು ನಾವೆಲ್ಲರೂ ಸಂಕಲ್ಪ ಮಾಡಬೇಕು ಎಂದು ಮಾತನಾಡಿದರು.ಇದೇ ಸಂದರ್ಭದಲ್ಲಿ ಬಸವರಾಜೇಂದ್ರ ಶರಣರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಹಿರಿಯರಾದ ಬಸಯ್ಯ ಮಠದ, ಸಂಗಯ್ಯ ಮಠಪತಿ, ಸುರೇಶಗೌಡ ಪಾಟೀಲ, ಅಣ್ಣಪ್ಪ ತೊನಶ್ಯಾಳ,…

Read More

ಸಂಕೋನಟ್ಟಿಯಲ್ಲಿ ರೂ.21.52 ಕೋಟಿ ವೆಚ್ಚದ ನೂತನ ವಿದ್ಯುತ್ ಉಪಕೇಂದ್ರಕ್ಕೆ ಶಾಸಕ ಸವದಿ ಚಾಲನೆ ಅಥಣಿ: ಸಂಕೋನಟ್ಟಿ ಗ್ರಾಮ ವ್ಯಾಪ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (ಕೆಪಿಟಿಸಿಎಲ್) ವತಿಯಿಂದ ನಿರ್ಮಿಸಲಾಗುತ್ತಿರುವ 110/11 ಕೆ.ವಿ. ನೂತನ ವಿದ್ಯುತ್ ಉಪಕೇಂದ್ರದ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಅವರು ಭೂಮಿ ಪೂಜೆ ಸಲ್ಲಿಸಿದರು.ಈ ಯೋಜನೆಯು ಈ ಭಾಗದ ರೈತರಿಗೆ ಮತ್ತು ಗ್ರಾಮೀಣ ಜನತೆಗೆ ವರದಾನವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಪ್ರಸ್ತುತ ಸಂಕೋನಟ್ಟಿ 33/11 ಕೆ.ವಿ. ಉಪಕೇಂದ್ರದ ಮೇಲೆ ಹೆಚ್ಚಿನ ಒತ್ತಡವಿದ್ದ ಕಾರಣ, ಸುತ್ತಮುತ್ತಲ ಗ್ರಾಮಗಳಲ್ಲಿ ಕಡಿಮೆ ವೋಲ್ಟೇಜ್ ಮತ್ತು ಪದೇ ಪದೇ ವಿದ್ಯುತ್ ವ್ಯತ್ಯಯದ ಸಮಸ್ಯೆ ಉಂಟಾಗುತ್ತಿತ್ತು. ನೂತನ ಉಪಕೇಂದ್ರದಿಂದ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ವಿಶೇಷವಾಗಿ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆಯಲ್ಲಿ 7 ಗಂಟೆಗಳ ಕಾಲ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ ಎಂದು ಶಾಸಕರು ತಿಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅವರು, “ಗ್ರಾಮೀಣಾಭಿವೃದ್ಧಿಗೆ ವಿದ್ಯುತ್ ಮೂಲಸೌಕರ್ಯ ಅತಿ…

Read More

ಟಾಟಾ ಪವರ್ ಕಂಪನಿಗೆ ನೀಡಿದರೆ ರೈತಸಂಘದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ಅಥಣಿ: ಇಂಧನ ಮತ್ತು ಗ್ಯಾಸ್ ಬೆಲೆಯನ್ನು ಹೆಚ್ಚಿಸುವ ಮೂಲಕ ರೈತರ ಮತ್ತು ಜನಸಾಮಾನ್ಯರ ಜೊತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿವೆ, ರೈತರಿಗೆ ಮತ್ತು ಜನಸಾಮಾನ್ಯರಿಗೆ ಅಗತ್ಯವಾಗಿರುವ ವಿದ್ಯುತ್ ಶಕ್ತಿಯನ್ನು ಖಾಸಗಿಕರಣ ಮಾಡುತ್ತಿರುವುದು ವಿಷಾದನೀಯ, ಇದರಿಂದ ರೈತರ ಮತ್ತು ಅನೇಕ ಕಾರ್ಮಿಕರ ಬದುಕು ಅತಂತ್ರವಾಗುತ್ತದೆ, ಯಾವುದೇ ಕಾರಣಕ್ಕೂ ಇದನ್ನ ಖಾಸಗಿಕರಣಗೊಳಿಸಬಾರದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಮಹಾದೇವ ಮಡಿವಾಳ ರಾಜ್ಯ ಸರ್ಕಾರವನ್ನ ಆಗ್ರಹಿಸಿದರು.ಅವರು ಶನಿವಾರ ಇಲ್ಲಿನ ಮಿನಿ ವಿಧಾನಸೌಧ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ಜೊತೆ ಚೆಲ್ಲಾಟವಾಡುತ್ತಿದ್ದು, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡದೆ ಮೋಸ ಮಾಡುತ್ತೇವೆ. ಈಗಾಗಲೇ ನಮ್ಮ ರೈತರ ಬದುಕು ಸ್ವತಂತ್ರವಾಗಿದ್ದು,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ವಕೀಲ ಸೈಯದ್ ಆಸೀಫ್ ಉಲ್ಲಾ ಸೈಯದ್ ಖಾದರ್ ಭಾಷಾ ಖಾದ್ರಿ ಮೇಲೆ ಕೇಸ್ ದಾಖಲಿಸಿ, ಬಂಧಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಬೆಂಬಲಿಗರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಔದ್ರಾಮ್ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.ವಿಜಯಪುರದ ವಕೀಲ ಸೈಯದ್ ಆಸೀಫ್ ಉಲ್ಲಾ ಸೈಯದ್ ಖಾದರ್ ಭಾಷಾ ಖಾದ್ರಿ ಎಂಬಾತ ಜನಪ್ರತಿನಿಧಿಯಾದ ಬಸನಗೌಡ ಪಾಟೀಲ ಯತ್ನಾಳರ ಬಗ್ಗೆ ಪದೇ ಪದೇ ಅತ್ಯಂತ ಕೀಳು ಮಟ್ಟದ ಅವಾಚ್ಯ ಶಬ್ದಗಳನ್ನು ಬಳಸಿ ಏಕವಚನದಲ್ಲಿ ಅವಹೇಳನಕಾರಿ ಮಾತನಾಡಿದ್ದು, ಎಲ್ಲ ಕಡೆ ವೈರಲ್ ಆಗಿದೆ. ಇದರಿಂದ ರಾಜ್ಯಮಟ್ಟದಲ್ಲಿ ಬಸನಗೌಡ ಪಾಟೀಲ ಯತ್ನಾಳರ ಹೆಸರಿಗೆ ಕಳಂಕವನ್ನು ಸತತವಾಗಿ ತರುತ್ತಿದ್ದಾನೆ. ಇವನ ಹೀನ ನಡೆಯಿಂದ ರಾಜ್ಯಾದ್ಯಂತ ಇರುವ ಬಸನಗೌಡರ ಲಕ್ಷಾಂತರ ಹಿಂದೂ ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು ಅಲ್ಲದೆ, ಸಮಾಜ ಬಾಂಧವರು ರೊಚ್ಚಿಗೆದ್ದು ಇವನ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ, ವಿಜಯಪುರ ನಗರಕ್ಕೆ ಎಲ್ಲ ಕಡೆಯಿಂದ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ರೈತರಿಗೆ ಸರ್ಕಾರ ನಿಗದಿಪಡಿಸಿದ ದರದಲ್ಲಿ ರಸಗೊಬ್ಬರ ಪೂರೈಸುವಂತೆ ಹಾಗೂ ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಚಡಚಣ ತಾಲೂಕಿನ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಮುಖಂಡರು ಚಡಚಣ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಚಡಚಣ ತಾಲೂಕು ದಂಡಾಧಿಕಾರಿಗಳು ಹಾಗೂ ತಹಸೀಲ್ದಾರ ಸಂಜೆಯ ಇಂಗಳೆ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ಪ್ರಸ್ತುತ ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಯೂರಿಯಾ, ಡಿಎಪಿ ಸೇರಿದಂತೆ ವಿವಿಧ ರಸಗೊಬ್ಬರಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಕೆಲ ಖಾಸಗಿ ಮಾರಾಟಗಾರರು ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಕೃಷಿ ವೆಚ್ಚ ಹೆಚ್ಚಾಗುತ್ತಿದೆ. ರೈತರಿಗೆ ಅಗತ್ಯವಿರುವ ರಸಗೊಬ್ಬರಗಳು ಸಹಕಾರ ಸಂಘಗಳು ಹಾಗೂ ಅಧಿಕೃತ ಮಾರಾಟ ಕೇಂದ್ರಗಳಲ್ಲಿ ಸಮರ್ಪಕ ಪ್ರಮಾಣದಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೇ, ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುವ…

Read More

ಸಾರಿಗೆ ಇಲಾಖೆ ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೇವಾನಂದ ಬಿರಾದಾರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವೃತ್ತಿಧರ್ಮದ ಜೊತೆಗೆ ಸಮಾಜಮುಖಿ ಚಿಂತನೆ ಮೂಲಕ ಕಾರ್ಯ ನಿರ್ವಹಿಸಿದರೆ ಆತ್ಮತೃಪ್ತಿ ಇರುತ್ತದೆ. ಈ ನಿಟ್ಟಿನಲ್ಲಿ ಹುಟ್ಟೂರಿನ ಋಣ ತೀರಿಸುವ ಕಾರ್ಯ ಮಾಡೋಣ ಎಂದು ಸಾರಿಗೆ ಇಲಾಖೆ ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೇವಾನಂದ ಬಿರಾದಾರ ಹೇಳಿದರು.ವಿಜಯಪುರದಲ್ಲಿ ಚಿಕ್ಕರೂಗಿ ನೌಕರರ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವೆಲ್ಲ ಗ್ರಾಮೀಣ ಪ್ರದೇಶದಿಂದ ಬಂದಿದ್ದೇವೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸುಧಾರಣೆಗೆ ನೌಕರರೆಲ್ಲ ಸೇರಿಕೊಂಡು ಸಹಕಾರ ನೀಡುವ ಕಾರ್ಯ ಮಾಡೋಣ, ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡೋಣ ಎಲ್ಲರೂ ಸಹಕಾರ ನೀಡಬೇಕೆಂದರು.ಅಮ್ಮ ಫೌಂಡೇಶನ್ ಗೌರವಾಧ್ಯಕ್ಷ ಯು ಐ ಶೇಖ ಮಾತನಾಡಿ, ಆಧುನಿಕತೆ ಹೆಚ್ಚಾದಂತೆ ಬದುಕಿನಲ್ಲಿ ಒತ್ತಡಗಳು ಹೆಚ್ಚಾಗುತ್ತಿದೆ. ಯಾರಿಗೂ ಸಮಯವಿಲ್ಲದಂತಾಗಿದೆ. ಇಂತಹದರಲ್ಲಿ ಚಿಕ್ಕರೂಗಿ ನೌಕರರೆಲ್ಲರೂ ಒಂದೆಡೆ ಸೇರಿಕೊಂಡು ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇವರು ಎಲ್ಲರಿಗೂ ಮಾದರಿಯಾಗಿದ್ದು, ಮುಂಬರುವ ದಿನಗಳಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಬೆಳಗಾವಿ: ನಗರದ ಡಾ ಫ ಗು ಹಳಕಟ್ಟಿ ಸಭಾಭವನದಲ್ಲಿ ರವಿವಾರ ವಾರದ ಪ್ರಾರ್ಥನಾ ಸಭೆ ನಡೆಯಿತು.ಈ ವೇಳೆ ಮಾತನಾಡಿದ ಸಾಹಿತಿ ಡಾ ಶಶಿಕಾಂತ ಪಟ್ಟಣ ಇವರು, ಇತ್ತೀಚಿನ ದಿನಗಳಲ್ಲಿ ವಚನ ಚಳುವಳಿ ಬಸವ ತತ್ವ ಪ್ರಸಾರ ಕುಗ್ಗಿಸುವ ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ವಿಷಾದ ವ್ಯಕ್ತ ಪಡಿಸಿದರು.ಒಂದು ಕಡೆಗೆ ಕನ್ನೇರಿ ಸ್ವಾಮಿಗಳು ಒತ್ತಾಯ ಪೂರ್ವಕವಾಗಿ ಲಿಂಗಾಯತರ ಹೆಗಲ ಮೇಲೆ ವೈದಿಕರ ಹೇರಿಕೆ ಮಾಡಿದರೆ ಹಂಪಿ ಕನ್ನಡ ವಿವಿ ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಅಧ್ಯಯನದ ಪ್ರಾಧ್ಯಾಪಕ ಪ್ರೊ ವಾಸುದೇವ ಬಡಿಗೇರ ಅವರು ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಒಬ್ಬರೇ ಎಂದೆನ್ನುತ್ತಾ ಕಕ್ಕಯ್ಯ ಕೆಂಭಾವಿ ಬೋಗಣ್ಣ ಮಾದಾರ ಚೆನ್ನಯ್ಯ ಕುಂಬಾರ ಗುಂಡಯ್ಯ ಮುಂತಾದ ಅನೇಕ ಶರಣರನ್ನು ಬಸವ ಪೂರ್ವಯುಗದ ಶರಣರು ಎಂದು ಸುಳ್ಳು ಸಂಶೋಧನೆ ಮಾಡಿದ್ದಾರೆ.ಇಂತವರ ವಿರುದ್ಧ ಪ್ರತಿಭಟನೆ ಮಾಡಬೇಕೆಂದು ಕರೆಕೊಟ್ಟರು.ಇಂತಹ ಪ್ರಚಲಿತ ವಿದ್ಯಮಾನಗಳು ಬಸವಣ್ಣನವರ ತತ್ವ ಸಿದ್ಧಾಂತಕ್ಕೆ ಮಾರಕವಾಗಿವೆ.ಇದರ ಜೊತೆಗೆ ಬಸವಣ್ಣನವರ ತಂಗಿ ಎಂದು ಅನೇಕ…

Read More

ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಒಂದು ತಂಪಾದ ಸಂಜೆಯ ವೇಳೆಯಲ್ಲಿ ಭಗವಂತ ಮತ್ತು ರೋಗ ಈ ಇಬ್ಬರೂ ಪರಸ್ಪರ ಉಭಯ ಕುಶಲೋಪರಿಗಳನ್ನು ವಿಚಾರಿಸಿಕೊಳ್ಳುತ್ತಿದ್ದರು. ಜನರು ಭಗವಂತನನ್ನು ಪ್ರಾರ್ಥಿಸಿದರೆ, ರೋಗವನ್ನು ಜನರು ತಮ್ಮಿಂದ ಬಹಳ ದೂರವಿಡುತ್ತಿದ್ದರು. ಹೀಗೆ ಇಬ್ಬರೂ ಮಾತನಾಡುತ್ತಿರುವಾಗ ಪರಸ್ಪರ ತಮ್ಮ ಕೆಲಸಗಳ ಕುರಿತು ಚರ್ಚಿಸುತ್ತಾ ಭಗವಂತ ಹೇಳುತ್ತಾನೆ, ನಾನು ಈ ಪ್ರಪಂಚದ ಎಲ್ಲಾ ಜೀವರಾಶಿಗಳನ್ನು ಕಾಪಾಡುತ್ತೇನೆ ಎಂದು. ಆಗ ರೋಗವು, ನಾನು ಭೀಕರ ರೋಗವನ್ನು ಪ್ರಪಂಚದ ಎಲ್ಲಾ ಕಡೆಗೂ ಮತ್ತು ಎಲ್ಲರಿಗೂ ಹರಡುತ್ತೇನೆ ಎಂದು ಹೇಳಿತು. ಹೀಗೆ ಮಾತನಾಡುತ್ತಾ ರೋಗವು ನಾನು ಒಂದು ತಿಂಗಳಲ್ಲಿ ಸುಮಾರು ಐನೂರು ಜನಕ್ಕೆ ರೋಗವನ್ನು ಹರಡಿ ಅವರನ್ನು ಸಾಯಿಸುತ್ತೇನೆ ಎಂದು ಭಗವಂತನಿಗೆ ಹೇಳಿತು. ಅಲ್ಲಿಗೆ ರೋಗ ಮತ್ತು ಭಗವಂತರ ಮಾತುಕತೆಗಳು ಮುಗಿದು, ಇಬ್ಬರೂ ತಮ್ಮ ತಮ್ಮ ಕೆಲಸದ ನಿಮಿತ್ತ ಅಲ್ಲಿಂದ ಹೊರಡುತ್ತಾರೆ. ಸುಮಾರು ಒಂದೆರಡು ತಿಂಗಳು ಕಳೆದ ನಂತರ ಮತ್ತೆ ಭಗವಂತ…

Read More

ವಿಜಯಪುರದಲ್ಲಿ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬುದ್ಧ, ಬಸವ ಮತ್ತು ಅಂಬೇಡ್ಕರ ಅವರ ತತ್ವ, ಸಿದ್ದಾಂತಗಳು ಸದಾ ಪ್ರಸ್ತುತವಾಗಿವೆ, ಅವರ ಕನಸುಗಳನ್ನು ನನಸಾಗಿಸಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ರವಿವಾರ ನಗರದ ಬುದ್ಧ ವಿಹಾರಕ್ಕೆ ಭೇಟಿ ನೀಡಿದ ಅವರು ಭಗವಾನ ಬುದ್ಧರ ಮೂರ್ತಿಗೆ ಭಕ್ತಿಪೂರಕ ನಮನ‌ ಸಲ್ಲಿಸಿದರು.ಬಳಿಕ ಬುದ್ಧ ವಿಹಾರದ ವತಿಯಿಂದ ನಡೆದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಾಜಿ ಸಚಿವ ಪ್ರೊ. ರಾಜು ಆಲಗೂರ ಅವರಿಗೆ ಎಂ.ಎಲ್.ಸಿ(ವಿಧಾನ ಪರಿಷತ ಸದಸ್ಯ)ಯಾಗಿ ಮಾಡಲು ಹೈಕಮಾಂಡ್ ಮನವರಿಕೆ ಮಾಡಲು ಶಕ್ತಿಮೀರಿ‌ ಪ್ರಯತ್ನಿಸುವುದಾಗಿ ತಿಳಿಸಿದರು.ನಮ್ಮ‌ ತಂದೆಯವರ ಕಾಲದಿಂದಲೂ ದಲಿತ ಸಮುದಾಯೊಂದಿಗೆ ನಮ್ಮ‌ ಕುಟುಂಬ ಅವಿನಾಭಾವ ಸಂಬಂಧ ಹೊಂದಿದೆ. ಭೂರಹಿತರಿಗಾಗಿ ಭೂಮಿ ನೀಡಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು. ಇಲ್ಲಿನ ಬುದ್ಧ ವಿಹಾರ ಅಭಿವೃದ್ಧಿಗೆ ಸದಾ ಬದ್ದನಾಗಿದ್ದೇನೆ. ಬುದ್ಧ, ಬಸವ, ಅಂಬೇಡ್ಕರ ಸಿದ್ದಾಂತದಂತೆ ನಾವೆಲ್ಲರೂ…

Read More