ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯುಗಾದಿ ಹಬ್ಬದ ಹಿನ್ನೆಲ್ಲೆಯಲ್ಲಿ ಶ್ರೀ ಮಲ್ಲಿಕಾರ್ಜುನ ಜಾತ್ರೆಯ ಪ್ರಯುಕ್ತ ಶ್ರೀಶೈಲಗೆ ತೆರುಳುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮೂಲಕ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ವಿಜಯಪುರ ವಿಭಾಗದ ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟಿ ಹಾಗೂ ಬಸವನ ಬಾಗೇವಾಡಿ ಬಸ್ ನಿಲ್ದಾಣದಿಂದ ದಿನಾಂಕ೦೬-೦೩-೨೦೨೬ ಜನದಟ್ಟಣೆಗನುಗುಣವಾಗಿ ಶ್ರೀಶೈಲಕ್ಕೆ ಹೆಚ್ಚುವರಿ ಬಸ್ಸುಗಳು ಕಾರ್ಯಾಚರಿಸಲಿದ್ದು, ಮುಂಗಡ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಸಹ ಕಲ್ಪಿಸಿದೆ.
ಈ ಕುರಿತ ಹೆಚ್ಚಿನ ಮಾಹಿತಿಗಾಗಿ ವಿಜಯಪುರ ೧ನೇ ಘಟಕ ವ್ಯವಸ್ಥಾಪಕರು- ಮೊ:೭೭೬೦೯೯೨೨೬೩, ವಿಜಯಪುರದ ೨ನೇ ಘಟಕದ ವ್ಯವಸ್ಥಾಪಕರು ಮೊ:೭೭೬೦೯೯೨೨೬೪, ಇಂಡಿ ಘಟಕ ವ್ಯವಸ್ಥಾಪಕರು ಮೊ:೭೭೬೦೯೯೨೨೬೫, ಸಿಂದಗಿ ಘಟಕ ವ್ಯವಸ್ಥಾಪಕರು ಮೊ:೭೭೬೦೯೯೨೨೬೬, ಮುದ್ದೇಬಿಹಾಳ ಘಟಕ ವ್ಯವಸ್ಥಾಪಕರು ಮೊ:೭೭೬೦೯೯೨೨೬೭, ತಾಳಿಕೋಟಿ ಘಟಕ ವ್ಯವಸ್ಥಾಪಕರು ಮೊ:೭೭೬೦೯೯೨೨೬೮, ಬ.ಬಾಗೇವಾಡಿ ಘಟಕ ವ್ಯವಸ್ಥಾಪಕರು ಮೊ:೭೭೬೦೯೯೮೮೬೯, ವೀರರಾಣಿ ಕಿತ್ತೂರ ಚನ್ನಮ್ಮ ಕೇಂದ್ರ ಬಸ್ ನಿಲ್ದಾಣದ ಸಹಾಯಕ ಸಂಚಾರ ವ್ಯವಸ್ಥಾಪಕರ ಮೊ:೭೭೬೦೯೯೨೨೫೮, ವಿಜಯಪುರ ಮುಂಗಡ ಟಿಕೇಟ ವಿಭಾಗ ಮೊ:೭೭೬೦೯೯೨೨೭೦, ವಿಭಾಗೀಯ ಸಾರಿಗೆ ಅಧಿಕಾರಿ ಮೊ:೭೭೬೦೯೯೨೨೫೨, ವಿಭಾಗೀಯ ತಾಂತ್ರಿಕ ಶಿಲ್ಪಿ ಮೊ:೭೭೬೦೯೯೨೨೫೧ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
