ಷರತ್ತುಬದ್ಧ ಅನುಮತಿ ನೀಡಿದ ಯಡ್ರಾಮಿ ತಾಲೂಕು ಆಡಳಿತ
ಉದಯರಶ್ಮಿ ದಿನಪತ್ರಿಕೆ
ಯಡ್ರಾಮಿ: ತಾಲೂಕಿನ ಕುಮ್ಮನಸಿರಸಗಿ ಗ್ರಾಮದಲ್ಲಿ ಆರ್.ಎಸ್. ಎಸ್. ಪಥಸಂಚಲ ನಡೆಸಲು ತಾಲೂಕ ಆಡಳಿತ ಷರತ್ತು ಬದ್ಧ ಅನುಮತಿ ನೀಡಿದೆ. ಇದರಿಂದ ಸಂಘದ ಕಾರ್ಯಕರ್ತರಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದ್ದು, ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಯುಗಾದಿ ಉತ್ಸವದ ಅಂಗವಾಗಿ ಮಾ. 7ರಂದು ಶನಿವಾರ ಕುಮ್ಮನಸಿರಸಗಿ ಗ್ರಾಮದಲ್ಲಿ ಪಥ ಸಂಚಲನ ನಡೆಸಲು ಅನುಮತಿ ಕೋರಿ ಆರ್.ಎಸ್.ಎಸ್. ಸಂಘ ಅರ್ಜಿ ಸಲ್ಲಿಸಲಾಗಿತ್ತು.ಅದನ್ನು ಪರಿಗಣಿಸಿದ ಪೊಲೀಸ್ ಇಲಾಖೆ ಮತ್ತು ಯಡ್ರಾಮಿ ತಾಲೂಕ ಆಡಳಿತ ಕೂಲಂಕುಶವಾಗಿ ಪರಿಶೀಲಿಸಿ ಅನುಮತಿ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಿಂದ ಗಣವೇಶಧಾರಿಗಳಿಂದ ಪಥಸಂಚಲನ ಪ್ರಾರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಲಿದೆ.
ಪಥ ಸಂಚಲನಕ್ಕೆ 15 ಷರತ್ತು
ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಥಸಂಚಲನಕ್ಕೆ ಷರತ್ತು ವಿಧಿಸಲಾಗಿದ್ದು, ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು, ನಿಗದಿತ ಮಾರ್ಗವನ್ನಷ್ಟೇ ಬಳಸುವುದು, ರಸ್ತೆ ತಡೆದು ಸಂಚಾರಕ್ಕೆ ತೊಂದರೆ ಆಗದಂತೆ, ಜಾತಿ ಅಥವಾ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಘೋಷಣೆಗಳನ್ನು ಕೂಗದಿರುವುದು. ಮತ್ತು ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸದಂತೆ ಸೂಚಿಸಲಾಗಿದೆ. ಕಾನೂನು ನಿಯಮ ಪಾಲಿಸದಿದ್ದರೆ ಅಕ್ರಮ ವಹಿಸುವ ಬಗ್ಗೆ ತಾಲೂಕ ಆಡಳಿತ ನೀಡಿರುವ ಅನುಮತಿ ಪತ್ರದಲ್ಲಿ ತಿಳಿಸಲಾಗಿದೆ.

