ವಿಜಯಪುರದಲ್ಲಿ ಅಕ್ರಮ 35,060 ಕೆಜಿ ಅಕ್ಕಿ ಹಾಗೂ ಲಾರಿ ವಶಕ್ಕೆ ಪಡೆದ ಅಧಿಕಾರಿಗಳು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಆರ್ ಎನ್ಎಸ್ ಶೋ ರೂಮ್ ಹತ್ತಿರ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿ ವಶಕ್ಕೆ ಪಡೆದಿದ್ದಾರೆ.
ಆರ್ ಎನ್ಎಸ್ ಶೋ ರೂಮ್ ಹತ್ತಿರ ಲಾರಿಯಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, 35,060 ಕೆಜಿ ಅಕ್ಕಿ ಹಾಗೂ ಲಾರಿ ವಶಕ್ಕೆ ಪಡೆದು ಟಿ.ರಾಜು ಎಂಬುವವರ ಮೇಲೆ ಜಲ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ದಾಳಿಯಲ್ಲಿ ಆಹಾರ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮರೇಶ ತಾಂಡೂರ, ಆಹಾರ ನಿರೀಕ್ಷಕರಾದ ವಿಜಯಕುಮಾರ ಗುಮಶೆಟ್ಟಿ,
ಜಲನಗರ ಪಿ ಎಸ್ ಐ ಮಹೇಶ ಸಂಖ್ ,ಪೋಲಿಸ್ ಸಿಬ್ಬಂದಿಗಳಾದ ವೈ. ಎ ರಾಥೋಡ, ಎಚ್ ಎನ್ ಪೂಜಾರಿ ಹಾಗೂ ಎಂ.ಆರ್ ಶಿಂಧೆ ಇದ್ದರು ಎಂದು
ಆಹಾರ ಇಲಾಖೆಯ
ಉಪ ನಿರ್ದೇಶಕ
ವಿನಯಕುಮಾರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

