ಉದಯರಶ್ಮಿ ದಿನಪತ್ರಿಕೆ
ಚಡಚಣ: ಇಂಡಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 52ರ ಮೇಲಿನ ಅರ್ಜನಾಳ ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿದ್ದು, ದಿನವಿಡಿ ವಾಹನಗಳು ಅಡ್ಡಾಡುವದರಿಂದ ಶಾಲೆಯ ಮಕ್ಕಳು ಜೀವದ ಭಯದಲ್ಲಿ ತಿರುಗಾಡುವಂತಾಗಿದೆ ಎಂಬುದು ಶಾಲಾ ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.
ಎಸ್. ಡಿ. ಎಂ ಸಿ. ಅಧ್ಯಕ್ಷ ಧರ್ಮರಾಜ ಬಿರಾದಾರ ಮಾತನಾಡಿ, ಅರ್ಜನಾಳ ಗ್ರಾಮ ರಾಷ್ಟ್ರೀಯ ಹೆದ್ದಾರಿ ಇಂದ ಸುಮಾರು 3 ಕಿಲೋಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಗ್ರಾಮದಲ್ಲಿ ರಸ್ತೆಯ ಬದಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಇದ್ದು, ಇಲ್ಲಿಗೆ ದಿನಾಲು ಅರ್ಜನಾಳ, ಗೊಟ್ಯಾಳ ಗ್ರಾಮದ ವಿದ್ಯಾರ್ಥಿಗಳು ದಿನಾಲು ಜೀವದ ಹಂಗು ತೊರೆದು ಶಾಲೆಗೆ ಬರುವಂತಾಗಿದೆ ಎಂದರು.
ಎಸ್. ಡಿ. ಎಂ. ಸಿ. ಕಾರ್ಯದರ್ಶಿ ರಾಜಕುಮಾರ ಪೂಜಾರಿ ಮಾತನಾಡಿ, ಸರ್ಕಾರ ರಸ್ತೆಗಳ ಸುಧಾರಣೆ ಮಾಡದೇ ಹೋದಲ್ಲಿ ಪ್ರಾಣಹಾನಿ ಸಂಭವಿಸುವದು ಗ್ಯಾರಂಟಿ ಅದಕ್ಕೆ ತಕ್ಕ ಉತ್ತರ ಕೊಡಬೇಕಾಗುತ್ತದೆ, ಇಲ್ಲಿಯವರೆಗೂ ಸಣ್ಣ ಪುಟ್ಟ ಗಾಯಗಳು ವಿದ್ಯಾರ್ಥಿಗಳು ಅನುಭವಿಸಿವೆ, ಹೀಗೆ ನಡೆದಲ್ಲಿ ಮುಂದಿನ ಅನಾಹುತಕ್ಕೆ ಯಾರು ಕಾರಣಿಭೂತರು, ಹೆದ್ದಾರಿಯಿಂದ ಗ್ರಾಮದ ವರೆಗೂ ಸಂಪೂರ್ಣ ರಸ್ತೆ ಕೆಟ್ಟಿದ್ದರು ಯಾರೊಬ್ಬರೂ ಸರ್ಕಾರಕ್ಕೆ ಮಾಹಿತಿ ಕೊಟ್ಟಿಲ್ಲ ಅಂದರೆ ವಿಪರ್ಯಾಸದ ಸಂಗತಿ, ಈಗಲಾದರೂ ಎಚ್ಚತ್ತು ರಸ್ತೆ ಸುಧಾರಣೆ ಮಾಡದೇ ಹೋದಲ್ಲಿ ಗ್ರಾಮಸ್ಥರಿಂದ, ಸಂಘ ಸೌಂಸ್ಥೆಗಳಿಂದ ಹೆದ್ದಾರಿ ತಡೆದು ಹೋರಾಟ ಮಾಡಲಾಗುವುದು ಎಂದು ಶ್ರೀಕಾಂತ ಹುಲಜಂತಿ ಹಾಗೂ ಗ್ರಾಮಸ್ಥರು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

