ಉದಯರಶ್ಮಿ ದಿನಪತ್ರಿಕೆ
ವಿಜಯಪುರ: 4 ವರ್ಷ ಮೇಲ್ಮಟ್ಟ ವಯೋಮಾನದ ನಗರದ ಮನಿಯಾರ ಕಾಲೋನಿಯಲ್ಲಿರುವ ಕುಮಾರಿ ಬಿಬಿ ಖತಿಜಾ ಅವರು ಕಳೆದ ಶುಕ್ರವಾರ ಒಂದು ದಿನ ಪವಿತ್ರ ರಂಜಾನ ತಿಂಗಳಿನ ಉಪವಾಸ ಕೈಗೊಂಡು ಈ ಚಿಕ್ಕ ವಯಸ್ಸಿನಲ್ಲಿ ತನ್ನ ಭಕ್ತಿ ಭಾವ ಮೆರೆದಿದ್ದಾಳೆ.
ಕುಮಾರಿ ಬಿಬಿ ಖತಿಜಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಿರಸ್ತೆದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಸಲೀಂ ಬಿಜಾಪೂರ ಇವರ ಮೊಮ್ಮಗಳಾಗಿದ್ದಾರೆ.

