Author: editor.udayarashmi@gmail.com

ಮುದ್ದೇಬಿಹಾಳ: ಏಕತೆಯ ಕೊರತೆ ಉಂಟಾಗದಂತೆ ನಡೆದುಕೊಂಡಲ್ಲಿ ಮಾತ್ರವೇ ದೇಶ ವಿಕಸಿತಗೊಳ್ಳಲು ಸಾಧ್ಯವೆಂದು ಮುಖ್ಯೋಪಾಧ್ಯಾಯ ರಾಮಚಂದ್ರ ಹೆಗಡೆ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ಸರ್ದಾರ್ ವಲ್ಲಭಬಾಯಿಯವರ ಜನ್ಮ ದಿನಾಚರಣೆ ಪ್ರಯುಕ್ತ ಆಚರಿಸಿರುವ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಮ್ಮ ಭಾರತದಲ್ಲಿ ಎಲ್ಲರಲ್ಲಿ ನಾವು ಭಾರತೀಯರು ಎನ್ನುವ ಒಗ್ಗಟ್ಟಿನ ಭಾವನೆ ಬಂದಲ್ಲಿ ಮಾತ್ರವೇ ದೇಶ ಪ್ರಗತಿಯ ಉತ್ತುಂಗಕ್ಕೆ ಏರಲು ಸಾಧ್ಯ. ಮಕ್ಕಳು ಕಲಿವಿನ ಹಂತದಲ್ಲಿ ಸಂಕುಚಿತ ಮನೋಭಾವ ಮೂಡಿಸಿಕೊಂಡು ವೈಯಕ್ತಿಕ ಬೆಳವಣಿಗೆಯನ್ನು ಹಾಳುಮಾಡಿಕೊಳ್ಳುವುದಲ್ಲದೇ ದೇಶದ ಅಭಿವೃದ್ಧಿಗೆ ಮಾರಕ ಶಕ್ತಿಯಾಗಿ ಪರಿಣಮಿಸಬಾರದು. ಮಕ್ಕಳು ತಮ್ಮ ಪ್ರಾರಂಭಿಕ ಹಂತದಿಂದಲೇ ದೇಶಾಭಿಮಾನ ರೂಢಿಸಿಕೊಳ್ಳುವುದರ ಮೂಲಕ ದೇಶದ ಪ್ರಗತಿಗೆ ತನ್ನ ಕೊಡುಗೆಗಳನ್ನು ನೀಡಬೇಕು ಎಂದರು.ದೈಹಿಕ ಶಿಕ್ಷಕ ಬಿ.ಟಿ.ಭಜಂತ್ರಿಯವರು ಮಕ್ಕಳಿಗೆ ರಾಷ್ಟ್ರೀಯ ಏಕತಾ ದಿವಸ್ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕಿ ಶಬಾನಾ ಲೈನ್ ಸ್ವಾಗತಿಸಿದರು. ರಮೇಶ ಮಡಿವಾಳರ ವಂದಿಸಿದರು.

Read More

ವಿಜಯಪುರ: ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿರುವ ಶಿವಾನುಭವ ಮಂಟಪದಲ್ಲಿ ಮಂಗಳವಾರ ದೀಪಾವಳಿ ಉಡುಗೊರೆ ಕಿಟ್ ವಿತರಣೆಗೆ ಕರ್ನಾಟಕ ರಾಜ್ಯ ಸಹಕಾರಿ ನಿಯಮಿತ ಬೆಂಗಳೂರು ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ವಿಜಯಪುರ ನಗರ ಮತಕ್ಷೇತ್ರದ ಬಡ ಕುಟುಂಬದವರು ಹಿಂದೂಗಳ ದೊಡ್ಡ ಹಬ್ಬವಾದ ದೀಪಾವಳಿಯನ್ನು ಅತ್ಯಂತ ಖುಷಿಯಿಂದ ಆಚರಿಸಬೇಕು. ಎಲ್ಲರ ಮನೆಯಲ್ಲಿ ನಂದಾ ದೀಪ ಬೆಳಗಲೆಂದು ಶಾಸಕರು ಹಾಗೂ ತಂದೆಯವರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರು, ನಗರದ 11 ಸಾವಿರ ಬಡ ಕುಟುಂಬಗಳಿಗೆ ದೀಪಾವಳಿ ಉಡುಗೊರೆಯಾಗಿ ಎರಡು ಸಾವಿರ (₹2,000) ಕಿಟ್ ನೀಡಲು ಘೋಷಿಸಿದಂತೆ ಅರ್ಹ ಬಡ ಕುಟುಂಬಗಳಿಗೆ ಕಿಟ್ ವಿತರಣೆಗೆ ಚಾಲನೆ ನೀಡಿದೆ.ಕಿಟ್ ದಲ್ಲಿ ಬೆಲ್, ಕಡಲೆ ಬೆಳೆ, ಪಾಮ್ ಐಲ್, ಗೋಧಿ ಹಿಟ್ಟು, ಬದಾಮಿ, ಕಿಸ್ ಮಿಸ್, ಅಕ್ಕಿ, ದೀಪ, ವಿಭೂತಿ ಹಾಗೂ ಬಟ್ಟೆಗಳು ಒಳಗೊಂಡಿವೆ. ನಗರದ ಜನತೆ ಖುಷಿ ಮತ್ತು ಶ್ರದ್ಧಾಭಕ್ತಿಯಿಂದ ಹಬ್ಬ ಆಚರಿಸಲಿ. ಮಹಾಲಕ್ಷ್ಮಿ ಎಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿ…

Read More

ಆರೋಗ್ಯ ತಪಾಸಣಾ ಉಚಿತ ಶಿಬಿರದಲ್ಲಿ ಐಆರ್‌ಬಿ ಸಿಬ್ಬಂದಿ ಅಭಿಮತ ವಿಜಯಪುರ: ಸಿದ್ಧೇಶ್ವರ ಶ್ರೀಗಳ ಹೆಸರಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದಕ್ಕೂ ಸಾರ್ಥಕ ಎನಿಸುತ್ತದೆ. ಇಲ್ಲಿರುವ ಸುಂದರ ಪರಿಸರ, ಅದ್ಭುತವಾದ ವಾತಾವರಣ, ಪರಿಸರ ಸ್ನೇಹಿ ವ್ಯವಸ್ಥೆ, ಸುಚಿತ್ವ ಹಾಗೂ ನಗುಮೊಗದ ಸೇವೆಯನ್ನು ಕಂಡರೆ ಅರ್ಧ ಆರೋಗ್ಯದ ಸಮಸ್ಯೆ ವೈದ್ಯರನ್ನು ಕಾಣುವ ಮೊದಲೇ ಸರಿ ಹೋಗುತ್ತದೆ. ಹೀಗಾಗಿ ಇದನ್ನು ಆಸ್ಪತ್ರೆ ಎನ್ನುವುದಕ್ಕಿಂತಲೂ ಆಧ್ಯಾತ್ಮಿಕ ಅನುಭೂತಿಯ ತಾಣ ಎಂದರೂ ತಪ್ಪಾಗುವುದಿಲ್ಲ ಎನ್ನುವ ಭಾವನೆಯನ್ನು ವ್ಯಕ್ತ ಪಡಿಸಿದ ಇಂಡಿಯನ್ ರಿಸರ್ವ ಬೆಟಾಲಿಯನ್‌ನ ಸಿಬ್ಬಂಧಿಗಳು ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಂಡು ಮನಸಾರೆ ಹೊಗಳಿದರು.ಮುಂಬರಲಿರುವ ಮಧ್ಯ ಪ್ರದೇಶ, ರಾಜಸ್ಥಾನ, ತೆಲಂಗಾಣ ಚುನಾವಣೆಗಳಿಗೆ ಕಾನೂನು ಸೂವ್ಯವಸ್ಥೆಯನ್ನು ಕಾಪಾಡಲು ಸಿದ್ಧಗೊಂಡಿರುವ ೨ ಕಂಪನಿ ಅಂದರೆ ೨೦೦ ಜನರಿರುವ ಇಂಡಿಯನ್ ರಿಸರ್ವ ಬೆಟಾಲಿಯನ್ ಸಿಬ್ಬಂಧಿಗಳಿಗೆಂದು ನಗರದ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡ ಸಿಬ್ಬಂಧಿವರ್ಗ ಆಸ್ಪತ್ರೆಯ ಸಹೃದಯದ ಸೇವೆಯನ್ನು ಕಂಡು ಸಂತಸ ವ್ಯಕ್ತ ಪಡಿಸಿದರು. ನಮ್ಮಲ್ಲಿ…

Read More

ವಿಜಯಪುರ: ಎಸ್‌ಸಿಪಿ ಟಿಎಸ್‌ಪಿ ಅನುದಾನ ಲ್ಯಾಪ್ಸವಾಗದಂತೆ ನೋಡಿಕೊಂಡು ಸಮರ್ಪಕವಾಗಿ ಬಳಕೆ ಮಾಡುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ೨೦೨೩-೨೪ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯ ಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಎಸ್‌ಸಿಪಿ ಟಿಎಸ್‌ಪಿ ಅನುದಾನವನ್ನು ಕಾಲಮಿತಿಯೊಳಗೆ ವೆಚ್ಚ ಮಾಡಬೇಕು. ಕೆಬಿಜೆಎನ್‌ಎಲ್ ಇಲಾಖೆಯಿಂದ ೨೦೨೨-೨೩ನೇ ಸಾಲಿನ ಬೊರವೆಲ್ ಫಲಾನುಭವಿಗಳನ್ನು ಆಯ್ಕೆ ಮಾಡಿ ಕೊಳವೆ ಬಾವಿ ಕೊರೆಯಿಸಿ ವಿದ್ಯುತ್ ಸಂಪರ್ಕ ಒದಗಿಸಲು ಕ್ರಮ ವಹಿಸಬೇಕು. ಎಲ್ಲಾ ಇಲಾಖೆಗಳು ಎಸ್‌ಸಿಟಿ ಟಿಎಸ್‌ಪಿ ಯೋಜನೆಯಡಿಯ ನಿಗದಿತ ಗುರಿಯನ್ನು ಕಾಲಮಿತಿಯೊಳಗೆ ಸಾಧಿಸುವಂತೆ ಸೂಚಿಸಿದರು.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿ ಕಾರ್ಮಿಕ ಇಲಾಖೆಯಿಂದ ಬಾಲಕಾರ್ಮಿಕ ನಿರ್ಮೂಲನೆಗೆ ಬಾಲಕಾರ್ಮಿಕ ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಿಳುವಳಿಕೆ ಮೂಡಿಸಬೇಕು, ಆಯುಷ್ ಇಲಾಖೆಯಿಂದ ೧೫ ದಿನಗಳಿಗೊಮ್ಮೆ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಗುರುತಿಸಲ್ಪಟ್ಟ ರೋಗಿಗಳಿಗೆ ಸೂಕ್ತ ಔಷಧೋಪಚಾರ…

Read More

ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣ ಪಂಚಾಯತಿಯ ೧೬ ವಾರ್ಡಗಳಿಗೆ ಸಂಬಂಧಿಸಿದ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಅವಧಿ ಮುಕ್ತಾಯವಾಗಿರುವ ನಗರ ಸ್ಥಳೀಯ ಸಂಸ್ಥೆಯಾದ ಚಡಚಣ ಪಟ್ಟಣ ಪಂಚಾಯತಿಯ ಸಾರ್ವತ್ರಿಕ ಚುನಾವಣೆ ನಡೆಸುವ ಸಂಬಂಧ ೧೬ ವಾರ್ಡುಗಳಿಗೆ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಛೇರಿ ವಿಜಯಪುರ, ಚಡಚಣ ತಹಶೀಲದಾರ ಕಛೇರಿ, ಚಡಚಣ ಪಟ್ಟಣ ಪಂಚಾಯತಿ ಕಛೇರಿ ಹಾಗೂ ಸಂಬಧಪಟ್ಟ ಮತಗಟ್ಟೆಗಳಲ್ಲಿ ಸಾರ್ವಜನಿಕರ ಹಾಗೂ ಮತದಾರರ ವೀಕ್ಷಣೆಗೆ ಅಂತಿಮ ಪ್ರತಿಯನ್ನು ಇರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬಸವನಬಾಗೇವಾಡಿ: ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಭಾನುವಾರ ಸಂಜೆ ವೀರರಾಣಿ ಕಿತ್ತೂರು ಚನ್ನಮ್ಮಳ ೨೪೫ ನೇ ಜಯಂತ್ಯೋತ್ಸವ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಕಾರ್ಯಕ್ರಮದ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಾಣಿ ಚನ್ನಮ್ಮಳ ಭಾವಚಿತ್ರದ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ರಾಣಿ ಚನ್ನಮ್ಮಳ ವೇಷಧಾರಿ ಮಕ್ಕಳು ಗಮನ ಸೆಳೆದರು.ಗ್ರಾಮದ ಚನ್ನಮ್ಮ ವೃತ್ತದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ಹೋರಾಡಿ ಶೌರ್ಯ ಮೆರೆದ ಸ್ತ್ರೀರತ್ನ ಕಿತ್ತೂರು ರಾಣಿ ಚನ್ನಮ್ಮ. ಬ್ರಿಟಿಷರ ಅನ್ಯಾಯದ ವಿರುದ್ಧ ಏಕಾಂಗಿಯಾಗಿ ಹೋರಾಡಿದ ದಿಟ್ಟ ಮಹಿಳೆ. ಜಾತಿ,ಮನೆತನಕ್ಕಾಗಿ ಹೋರಾಟ ಮಾಡದೇ ಜನತೆಯ ರಕ್ಷಣೆಗಾಗಿ, ಸ್ವಾತಂತ್ರಕ್ಕಾಗಿ ಹೋರಾಡಿದ ಧೀರ ಮಹಿಳೆ ಎಂದ ಅವರು, ಮಕ್ಕಳಲ್ಲಿ ಧೈರ್ಯ, ತ್ಯಾಗದ ಮನೋಭಾವನೆ ಬೆಳೆಸಬೇಕು. ಶಾಲಾ ಪಠ್ಯಪುಸ್ತಕಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಾಹಸಿ ಕಥೆಗಳು ಬರಬೇಕು. ಮಕ್ಕಳಲ್ಲಿ ಸ್ವಾಭಿಮಾನ, ದೇಶಭಕ್ತಿ ಬೆಳೆಸಿದರೆ ದೇಶಕ್ಕೆ ಭವಿಷ್ಯವಿದೆ ಎಂದರು.ಕಾರ್ಯಕ್ರಮದಲ್ಲಿ ಸುಭಾಷ ಕಲ್ಯಾಣಿ, ಮಲ್ಲುಗೌಡ ಇಂಡಿ, ಬಸಪ್ಪ ದೊಡ್ಡಮನಿ, ಮಲಕು ಮಸಬಿನಾಳ,…

Read More

ಬಸವನಬಾಗೇವಾಡಿ: ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ, ಹಿರಿಯ ಸಿವ್ಹಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೋಡೆ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಂಜೆ ತಾಲೂಕು ಕಾನೂನು ಸೇವೆಗಳ ಸಮಿತಿಯ ದ್ವೈಮಾಸಿಕ ಸಭೆ, ಎಂಎಂಸಿ ಸಮಿತಿ ಸದಸ್ಯರ ಸಭೆ ಹಾಗೂ ಲೋಕ ಅದಾಲತ್ ಕುರಿತು ಪೂರ್ವಭಾವಿ ಸಭೆ ಜರುಗಿತು.ಹಿರಿಯ ಸಿವ್ಹಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೋಡೆ ಅವರು ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಹಮ್ಮಿಕೊಳ್ಳುವ ಕಾನೂನು ಅರಿವು-ನೆರವು ಕಾರ್ಯಕ್ರಮಗಳಿಗೆ ಆಯಾ ಇಲಾಖೆಯ ಅಧಿಕಾರಿಗಳು ಕಾನೂನು ಸೇವೆಗಳ ಸಮಿತಿಯೊಂದಿಗೆ ಕೈಜೋಡಿಸಬೇಕು. ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವಲ್ಲಿ ಕಾನೂನು ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಡಿ.೯ ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ. ಈ ಅದಾಲತ್‌ದಲ್ಲಿ ಯಾವುದೇ ಒಂದು ಪ್ರಕರಣದ ಉಭಯ ಪಕ್ಷಗಾರರಲ್ಲಿ ರಾಜಿ ಸಂಧಾನ ಏರ್ಪಡಿಸುವ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಬಹುದು. ವ್ಯಾಜ್ಯವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಬಹುದು.ಯಾವುದೇ ರೀತಿ ನ್ಯಾಯಾಲಯ ಶುಲ್ಕ ಕೊಡಬೇಕಾಗಿಲ್ಲ. ಪಕ್ಷಗಾರರು ನೇರವಾಗಿ ಭಾಗವಹಿಸಬಹುದು.…

Read More

ಸಿಂದಗಿ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯಕಾರಿ ಸಮಿತಿಗೆ ಸಂಬಂಧಿಸಿದಂತೆ ಸಿಂದಗಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕಕ್ಕೆ ಶಿವಾನಂದ ಬಡಾನವರ ಅವರನ್ನು ತಾಲೂಕಾಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಗಾಢನಿದ್ರೆಯಲ್ಲಿ ಪುರಸಭೆ | ಚರಂಡಿ ನೀರಿನ ದುರ್ವಾಸನೆ | ಡೇಂಗ್ಯೂ ಪ್ರಕರಣ ದಾಖಲು   *- ರಶ್ಮಿ ನೂಲಾನವರ*ಸಿಂದಗಿ: ಪಟ್ಟಣವನ್ನು ಅಭಿವೃದ್ದಿ ಮಾಡಬೇಕಿರುವ ಪುರಸಭೆಯು ಗಾಢನಿದ್ರೆಯಲ್ಲಿದೆ. ಎಚ್ಚೆತ್ತುಕೊಂಡು ಕಾರ್ಯ ಮಾಡಬೇಕಿರುವ ಅಧಿಕಾರಿಗಳು ನಿಷ್ಕ್ರೀಯ. ಎಲ್ಲದರ ಮಧ್ಯದಲ್ಲಿ ಸಿಂದಗಿ ಪಟ್ಟಮದ ಹಲವೆಡೆ ಚರಂಡಿ ನೀರು ರಸ್ತೆಗೆ ಬರುತ್ತಿದೆ. ನಿತ್ಯ ಆರೋಗ್ಯದ ಸಮಸ್ಯೆ ಹಾಗೂ ನಾನಾ ಕಾಯಿಲೆಗಳ ಆಗಮದಂತಿರುವ ಚರಂಡಿಗಳ ಕರ್ಮಕಥೆ ಇದಾಗಿದೆ.     ಪಟ್ಟಣದ ಬಸ್ ನಿಲ್ದಾಣ ಸುತ್ತಮುತ್ತ, ವಿವೇಕಾನಂದ ವೃತ್ತ ಬಳಿ, ವಿದ್ಯಾನಗರ ವಾಟರ್ ಟ್ಯಾಂಕ ಹಿಂಬದಿ, ಹಳೆ ತಹಸಿಲ್ದಾರ ಕಾರ್ಯಾಲಯದ ಸುತ್ತಲೂ, ಸ್ತ್ರೀಶಕ್ತಿ ಭವನದ ಹಿಂಭಾಗ, ವಿದ್ಯಾನಗರ ಹಿಂಭಾಗದ ಕೊಳಚೆ ಪ್ರದೇಶ, ಸೋಂಪುರ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಚರಂಡಿಗಳ ನೀರಿನಿಂದ ದುರ್ವಾಸನೆ ಬೀರುತ್ತಿವೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವ ಸ್ಥಿತಿ ಹೇಳತೀರದಾಗಿದೆ.ಕನಕದಾಸ ಬಡಾವಣೆಯಿಂದ ಮೋರಟಗಿ ನಾಕಾ:ಪಟ್ಟಣದ ಕನಕದಾಸ ಬಡಾವಣೆಯಿಂದ ಮೋರಟಗಿ ನಾಕಾವರೆಗೆ ದೊಡ್ಡ ಚರಂಡಿಯು ಡೋಹರ ಕಕ್ಕಯ್ಯ ವೃತ್ತಕ್ಕೆ ಸೇರುತ್ತದೆ. ಆದರೆ ಮಾರ್ಗ ಮಧ್ಯದಲ್ಲಿ ಚರಂಡಿ ಒಳಗೆ ಪ್ಲಾಸ್ಟಿಕ್ ಮತ್ತು…

Read More

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ದೇವರಹಿಪ್ಪರಗಿ ನಾಗರಿಕರಮನವಿ ದೇವರಹಿಪ್ಪರಗಿ: ಪಟ್ಟಣದ ನೂತನ ಬಸ್ ನಿಲ್ದಾಣಕ್ಕೆ ಮಡಿವಾಳ ಮಾಚಿದೇವರ ಹೆಸರನ್ನು ನಾಮಕರಣಗೊಳಿಸಿ ಮುಂದೆ ಮಾಚಿದೇವರ ಪ್ರತಿಮೆ ಪ್ರತಿಷ್ಠಾಪಿಸಲು ಕ್ರಮಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮಡಿವಾಳ ಮಾಚಿದೇವ ಜನ್ಮಭೂಮಿ ಪ್ರತಿಷ್ಠಾನ, ಕಲೆ, ಸಾಹಿತ್ಯ, ಸಾಂಸ್ಕೃತಿಕ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು.ವಿಜಯಪುರದ ಹೇಮರಡ್ಡಿ ಮಲ್ಲಮ್ಮ ಸಂಸ್ಥೆಯಲ್ಲಿ ಮಂಗಳವಾರ ಜರುಗಿದ ಕಾರ್ಯಕ್ರಮದಲ್ಲಿ ದೇವರಹಿಪ್ಪರಗಿ ಮಡಿವಾಳ ಮಾಚಿದೇವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ಪಾಟೀಲ ಹಾಗೂ ಬಿ.ಕೆ.ಪಾಟೀಲ ಅವರ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಿ, ನಾಮಕರಣ ಹಾಗೂ ಪ್ರತಿಮೆ ಸ್ಥಾಪನೆಯ ಕುರಿತಂತೆ ಕಳೆದ ಎರಡು ವರ್ಷಗಳಿಂದ ನಡೆದ ನಿರಂತರ ಪ್ರಯತ್ನಗಳು ಹಾಗೂ ಹಿಂದಿನ ಸರ್ಕಾರದಲ್ಲಿಯ ಸಚಿವರನ್ನು ಕಂಡು ಮನವಿ ಸಲ್ಲಿಸಿದ ಕುರಿತು ಗಮನ ಸೆಳೆಯಲಾಯಿತು. ಮನವಿ ಸ್ವೀಕರಿಸಿದ ಸಚಿವರು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಮಾಚಿದೇವ ಜನ್ಮಭೂಮಿ ಪ್ರತಿಷ್ಠಾನದ ಗೌರವ ಅಧ್ಯಕ್ಷ ಕಾಶೀಪತಿ ದೇವಣಗಾಂವ, ವಿಜಯಪುರ ಹೇಮರಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷ ಸುರೇಶ ದೇಸಾಯಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಣಮಂತ್ರಾಯಗೌಡ…

Read More