ವಿಜಯಪುರ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ೨೦೨೩-೨೪ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಸಾಲ,ಸಹಾಯಧನ ಸೌಲಭ್ಯ ಪಡೆಯಲು ಅಲ್ಪಸಂಖ್ಯಾತ ಸಮುದಾಯದವರಿಂದ (ಮುಸ್ಲಿಂ, ಕ್ರೈಸ್ತರು, ಬೌದ್ಧ, ಸಿಖ್ಖ, ಜೈನ್ ಮತ್ತು ಪಾರ್ಸಿ) ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಫೆಬ್ರವರಿ ೨೯ರೊಳಗೆ https://kmdconline.karnataka.gov.in/ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ಅಲ್ಪಸಂಖ್ಯಾತ ಸಮುದಾಯದವರಾಗಿರಬೇಕು. ಕರ್ನಾಟಕದ ಖಾಯಂ ರಹವಾಸಿಯಾಗಿರಬೇಕು. ಕುಟುಂಬ ವಾರ್ಷಿಕ ವರಮಾನ ನಗರ ಪ್ರದೇಶದಲ್ಲಿ ೧ ಲಕ್ಷ ಹಾಗೂ ಗ್ರಾಮೀಣ ಮಟ್ಟಲ್ಲಿ ೮೦ ಸಾವಿರ ಇರಬೇಕು. ಆಧಾರ್ ಕಾರ್ಡ, ಚುನಾವಣೆ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಬ್ಯಾಂಕ್ ಪಾಸ್‌ಬುಕ್ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನ ಆಜಾದ ಭವನ ರಸ್ತೆ, ಕನಕದಾಸ ಬಡಾವಣೆ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ: ೦೮೩೫೨-೨೭೮೩೪೪ ಯನ್ನು ಸಂಪರ್ಕಿಸಬಹುದಾಗಿದೆ ಎಂದು ವಿಜಯಪುರ ಕರ್ನಾಟಕ ಅಲ್ಪಸಂಖ್ಯಾತರರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

