ಇಂಡಿ: ಬುಲೆರೋ ಪಿಕ್ ಅಪ್ ಗೂಡ್ಸ್ ವಾಹನಗಳಲ್ಲಿ ಸಾಗಾಟ ಮಾಡುತ್ತಿದ್ದ ೧೧೦ ಕ್ಕೂ ಹೆಚ್ಚು ಆಕಳು ಹಾಗೂ ಕರುಗಳನ್ನು ಮದ್ಯರಾತ್ರಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ತಡೆದ ಹಿರೆಬೇವನೂರು ಗ್ರಾಮಸ್ಥರು ಅವುಗಳನ್ನು ರಕ್ಷಣೆ ಮಾಡಿದ್ದಾರೆ.
ತಾಲೂಕಿನ ಹಿರೆಬೇವನೂರು ಗ್ರಾಮದಲ್ಲಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ನೆರೆಯ ಮಹಾರಾಷ್ಟ್ರದ ಅಕ್ಕಲಕೋಟದಿಂದ ಅಗರಖೇಡ ಮಾರ್ಗವಾಗಿ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣಕ್ಕೆ ಸಾಗಾಟ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ಜನರು ವಾಹನಗಳನ್ನು ತಡೆಯುತ್ತಿದ್ದಂತೆ ಎರಡು ವಾಹನಗಳ ಚಾಲಕರು ಪರಾರಿ ಜನರ ಕೈಗೆ ಸಿಕ್ಕಿ ಬಿದ್ದ ಓರ್ವ ಚಾಲಕ ಮೂರು ವಾಹನಗಳಲ್ಲಿದ್ದ ಆಕಳು ಹಾಗೂ ಕರುಗಳನ್ನು ವಾಹನಗಳಲ್ಲಿ ಕಟ್ಟಲಾಗಿತ್ತು. ಮೂರು ವಾಹನಗಳಲ್ಲಿ ಆಕಳು ಹಾಗೂ ಕರುಗಳನ್ನು ಹಾಕಿದ್ದರು
ಈ ವಿಷಯವನ್ನು ಇಂಡಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ಗ್ರಾಮಸ್ಥರು ನೀಡಿದರು. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಆಧಿಕಾರಿಗಳು ಹಾಗೂ ಸಿಬ್ಬಂದಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆಕಳು ಹಾಗೂ ಕರುಗಳನ್ನು ವಿಜಯಪುರದ ಗೋಶಾಲೆಗೆ ಪೊಲೀಸರು ಕಳುಹಿಸಿದ್ದಾರೆ.
ಈ ವೇಳೆ ವಾಹನದಲ್ಲೇ ಮೃತಪಟ್ಟಿದ್ದ ೧ ಆಕಳು ಹಾಗೂ ೧೧ ಕರುಗಳ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಳು ಹಾಗೂ ಕರುಗಳನ್ನು ಎಲ್ಲಿಂದ ಎಲ್ಲಿಗೆ ಹಾಗೂ ಯಾರಿಗೆ ಸಾಗಾಟ ಮಾಡುತ್ತಿದ್ದ ವಿಚಾರ ತನಿಖೆಯಿಂದ ಬಹಿರಂಗವಾಗಬೇಕಿದೆ. ಸ್ಥಳಕ್ಕೆ ಗ್ರಾಮೀಣ ಪಿಎಸ್‌ಐ ಮಂಜುನಾಥ ಹುಲಕುಂದ, ಸಿ.ಪಿ.ಐ ಸುನೀಲ ಪಾಟೀಲ ಭೇಟಿ ನೀಡಿದ್ದು, ಪೊಲೀಸ್ ತನಿಖೆಯಲ್ಲಿ ಇತರೆ ಮಾಹಿತಿ ತಿಳಿದು ಬರಬೇಕಿದೆ.
Subscribe to Updates
Get the latest creative news from FooBar about art, design and business.
Related Posts
Add A Comment