Author: editor.udayarashmi@gmail.com

ಸಿಂದಗಿ: ನಮ್ಮ ಜೀವನದ ಗುರಿ ಸಾಧನೆಗೆ ಯೋಗ್ಯ ಗುರುಗಳ ಅವಶ್ಯವಿದೆ ಎಂದು ವಿಜಯಪುರ ಧಾಮದ ಹೃದಯ ರೋಗ ತಜ್ಞ ಡಾ.ಗೌತಮ ವಗ್ಗರ್ ಹೇಳಿದರು.ಪಟ್ಟಣದ ಬಂದಾಳ ರಸ್ತೆಯಲ್ಲಿರುವ ವಿವೇಕ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ ವಿವೇಕ ಸಿರಿ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುರುಗಳ ಸೂಕ್ತ ಮಾರ್ಗದರ್ಶನದಲ್ಲಿ ನಾವು ಗುರಿ ಮುಟ್ಟಲು ಸಾಧ್ಯ. ವಿದ್ಯಾರ್ಥಿಗಳು ಗುರಿಯ ಕಡೆಗೆ ಗಮನ ಕೊಟ್ಟು ಗುರುವಿನ ಮಾರ್ಗದರ್ಶನದಲ್ಲಿ ಸಾಧನೆ ಮಾಡಿ ಸಾಧಕರಾಗಬೇಕು ಎಂದು ಸಲಹೆ ನೀಡಿದರು.ಈ ವೇಳೆ ಕಿಡ್ನಿ ತಜ್ಞೆ ಡಾ.ಮೋನಿಕಾ ಮಾತನಾಡಿ ಸ್ವಾಮಿ ವಿವೇಕಾನಂದರ ಹೆಸರನ್ನಿಟ್ಟುಕೊಂಡ ವಿವೇಕ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಅವರ ತತ್ವಾದರ್ಶಗಳನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು ಎಂದರು.ಇದೇ ಸಂದರ್ಭದಲ್ಲಿ ಮೇಕರ್ ಸುಧೀರ್ ಕೃಷ ಪೂಜಾರಿ, ಪ್ರಾಂಶುಪಾಲೆ ಶಾಹಿಮೋಲ್ ರಾಬಿನ್ ಅವರು ವಾರ್ಷಿಕ ವರದಿ ವಾಚನ ಮಾಡಿದರು.ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ನೀಲಮ್ಮ ಹೆಗ್ಗನದೊಡ್ಡಿ, ಆಡಳಿತಾಧಿಕಾರಿ ಟೆನಿ ರಾಬಿನ್, ಸಂಸ್ಥಾಪಕ ಎ.ಆರ್.ಹೆಗ್ಗನದೊಡ್ಡಿ ವೇದಿಕೆಯ ಮೇಲಿದ್ದರು.ಈ ವೇಳೆ ಸಾಂಸ್ಕೃತಿಕ ಸ್ಪರ್ಧೆ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ…

Read More

ಸಿಂದಗಿ: ಸಮಾನತೆ, ಮಾನವತಾವಾದ, ಸಮಾಜವಾದ ಹಾಗೂ ಧರ್ಮ ನಿರಪೇಕ್ಷದಂತಹ ಮೌಲ್ಯಗಳನ್ನು ಸಂವಿಧಾನ ಜನರಿಗೆ ಕೊಡುಗೆಯಾಗಿ ನೀಡಿದೆ ಎಂದು ಸರಕಾರಿ ಪಪೂ ಕಾಲೇಜಿನ ಉಪನ್ಯಾಸಕ ಶಶಿಧರ ಅವಟಿ ಹೇಳಿದರು.ಗುರುವಾರದಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಿಂದಗಿ ಪುರಸಭೆ ಕಾರ್ಯಾಲಯ ವತಿಯಿಂದ ಸಂವಿಧಾನ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಭಾರತ ಸಂವಿಧಾನವು ಐದು ಪ್ರಮುಖ ಮೌಲ್ಯಗಳಾದ ಸ್ವಾತಂತ್ರ್ಯ, ಏಕತೆ, ಭ್ರಾತೃತ್ವ, ಸಮಾನತೆ ಮತ್ತು ಸಹೋದರತ್ವ ನೀಡುವ ಮೂಲಕ ಪ್ರಪಂಚದಲ್ಲಿ ವಿಶೇಷ ಸ್ಥಾನಮಾನ ಹೊಂದಿದೆ. ಸಂವಿಧಾನದ ಮಹತ್ವ ಹಾಗೂ ಮೌಲ್ಯಗಳನ್ನು ಕುರಿತು ಜಾಗೃತಿ ಮೂಡಿಸುವುದು ಮತ್ತು ರಾಷ್ಟ್ರೀಯ ಏಕತೆಯನ್ನು ಎತ್ತಿ ಹಿಡಿಯುವ ಉದೇಶದಿಂದ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ಪ್ರತಿಯೊಬ್ಬ ವ್ಯಕಿಯು ಸಂವಿಧಾನ ಪೀಠಿಕೆಯನ್ನು ಅರಿಯಬೇಕು ಎಂದು ಹೇಳಿದರು.ಈ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಸಂವಿಧಾನ ಪಿಠೀಕೆಯನ್ನು ಬೋಧಿಸಿದರು. ಎಸ್.ಕೆ.ಬಿರಾದಾರ ಸರಕಾರದ ಐದು ಗ್ಯಾರಂಟಿಗಳ ಬಗ್ಗೆ ಮಾತನಾಡಿದರು. ಸಂವಿಧಾನ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಯಲ್ಲಿ…

Read More

ವಿಜಯಪುರ: ವಸತಿ ನಿಲಯಗಳ ಅವ್ಯವಸ್ಥೆ ಹಾಗೂ ವಸತಿ ನಿಲಯಗಳ ನಿರ್ವಹಣೆಯ ಅನುದಾನ ದುರುಪಯೋಗ ಪಡಿಸಿಕೊಂಡವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಲಿತ ರಕ್ಷಣಾ ವೇದಿಕೆ (ರಿ) ಶೋಷಿತ ಜನಾಂಗಗಳ ಒಕ್ಕೂಟ ಜಿಲ್ಲಾ ಸಮತಿ ವತಿಯಿಂದ ವಿಜಯಪುರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪುಂಡಲೀಕ ಮಾನವರ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ದಲಿತ ರಕ್ಷಣಾ ವೇದಿಕೆ ಶೋಷಿತ ಜನಾಂಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧರ್ಮರಾಜ ಎಸ್. ಸಾಲೋಟಗಿ ಮಾತನಾಡಿ, ಇಂಡಿ ಹಾಗೂ ಚಡಚಣ ತಾಲೂಕಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ಮೇಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಇಲ್ಲದೆ, ಅವ್ಯವಸ್ಥೆಯ ಕುರಿತು ಹಾಗೂ ವಸತಿ ನಿಲಯಗಳ ನಿರ್ವಹಣೆಗಾಗಿ, ಯಂತ್ರೋಪಕರಣ, ಪೀಠೋಪಕರಗಳ ಖರೀದಿಗಾಗಿ ಬಂದಿರುವ ಅನುದಾನ ದುರುಪಯೋಗವಾಗಿರುವ ಬಗ್ಗೆ ಹಾಗೂ ವಸತಿ ನಿಲಯಗಳಿಗೆ ಜನತಾ ಬಜಾರದಿಂದ ಆಹಾರ ಧಾನ್ಯಪಡೆದುಕೊಳ್ಳದೆ ಅಂಗಡಿಯಿಂದ ಖರೀದಿಸುತ್ತಿರುವ ಬಗ್ಗೆ ತನಿಖೆ ನಡಿಸಿ ಕ್ರಮ ಕೈಗೊಳ್ಳುವ ಕುರಿತು ಈಗಾಗಲೇ ಇಂಡಿಯಲ್ಲಿ ಪ್ರತಿಭಟನೆ ಮಾಡಲಾಗಿದ್ದು…

Read More

ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಶ್ರೀ ಬಸವೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿಧ್ಯಾಲಯದಲ್ಲಿ ಸಂತ ಸೇವಾಲಾಲ್ ಅವರ ಜಯಂತಿಯನ್ನು ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಪ್ರಾಚಾರ್ಯ ಸಿ ಎಸ್ ಹಿರೇಮಠ, ಮುಖ್ಯಗುರು ಜಗದೀಶ ಗುಮಶೆಟ್ಟಿ, ಎಸ್ ಪಿ ರಾಣಗಟ್ಟಿ, ಕಂಠಿರವ ದೇಸಾಯಿ, ನಿಂಗನಗೌಡ ಗುಂಡಕನಾಳ, ಬಿ ಜಿ ಚನಗೊಂಡ, ವಿಶ್ವನಾಥ ಸಿಂದಗಿ, ಎಸ್ ಎಸ್ ಕೊರವಾರಮಠ ಸೇರಿದಂತೆ ಇತರರು ಇದ್ದರು.

Read More

ವಿಜಯಪುರ: ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅಳವಡಿಸಿ ಅಧಿಕ ಇಳುವರಿ ಪಡೆಯಬಹುದು ಎಂದು ವಿಜಯಪುರದ ಉಪ ಕೃಷಿ ನಿರ್ದೇಶಕರಾದ ಡಾ. ಬಾಲರಾಜ ರಂಗರಾವ ಹೇಳಿದರು.ಅವರು ಜಿಲ್ಲಾ ಕೃಷಿ ತರಬೇತಿ ಕೇಂದ್ರ ವಿಜಯಪುರದಲ್ಲಿ ೨೦೨೩-೨೪ ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ (ಸೂಕ್ಷ್ಮ ನೀರಾವರಿ)-ಕೇಂದ್ರ ಪುರಸ್ಕೃತ ಯೋಜನೆಯಡಿ ಸೂಕ್ಷö್ಮ ನೀರಾವರಿ ಘಟಕಗಗಳ ಉಪಯೋಗಗಳು ಮತ್ತು ನಿರ್ವಹಣೆ ವಿಷಯದ ಕುರಿತು ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸಹಾಯಕ ಕೃಷಿ ನಿರ್ದೇಶಕಕಿ ಶ್ರೀಮತಿ ವಿಜಯಲಕ್ಷ್ಮೀ ಎಸ್. ಚವ್ಹಾಣ, ಮಾತನಾಡಿದರು.ತರಬೇತಿಯಲ್ಲಿ ನೀರಿನ ಮಿತ ಬಳಕೆ, ವಿವಿಧ ಬೆಳೆಗಳಲ್ಲಿ ನೀರಿನ ಅವಶ್ಯಕತೆ, ವಿವಿಧ ಬೆಳೆಗಳಲ್ಲಿ ವಿವಿಧ ನೀರಾವರಿ ಪದ್ಧತಿಗಳು, ಸೂಕ್ಷ್ಮ ನೀರಾವರಿ ಘಟಕಗಗಳ ಭಾಗಗಳ ಕಾರ್ಯವೈಖರಿ ಮತ್ತು ನಿರ್ವಹಣೆ ಕುರಿತು ವಿವಧ ಅತಿಥಿ ಉಪನ್ಯಾಸಕ ತಜ್ಞರ ಮೂಲಕ ಮಾಹಿತಿ ನೀಡಲಾಯಿತು.ಎಮ್.ಆರ್. ಮೈದರಗಿ , ಲಿಂಗರಾಜ ತಾಳಿಕೋಟಿ ಮತ್ತು ಶ್ರೀಮತಿ ಗೀತಾ ಭಜಂತ್ರಿ ಉಪಸ್ಥಿತರಿದ್ದರು. ಫಾತಿಮಾಬಾನು ಸುತಾರ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಲಕ್ಷ್ಮೀ ಕಾಮಗೊಂಡ…

Read More

ವಿಜಯಪುರ: ಕೆಐಎಡಿಬಿ ೧೧೦/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಫೆ.೧೭ರಂದು ಕೈಗೊಳ್ಳುವುದರಿಂದ ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ೩೩/೧೧ ಕೆವ್ಹಿ ಹೊನ್ನುಟಗಿ ಮತ್ತು ೩೩/೧೧ ಕೆವ್ಹಿ ನಾಗಠಾಣ ವಿದ್ಯುತ್ ವಿತರಣಾ ಕೇಂದ್ರಗಳಿಗೆ ಹಾಗೂ ೧೧೦/೧೧ ಕೆವ್ಹಿ ಕೆಐಎಡಿಬಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲ ೧೧ ಕೆವ್ಹಿ ವಿದ್ಯುತ್ ಮಾರ್ಗಗಳಿಗೆ ಅಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ವಿಜಯಪುರ: ವಿಜಯಪುರ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಫೆ.೨೯ ಹಾಗೂ ಮಾರ್ಚ್ ೦೧ ರಂದು ಮತ್ತು ಮಾರ್ಚ್ ೦೨ ರಂದು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಗರದ ಡಾ. ಬಿ.ಆರ್ ಅಂಬೇಡ್ಕರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.ಈ ಕ್ರೀಡಾಕೂಟದಲ್ಲಿ ಪುರುಷರು ಹಾಗೂ ಮಹಿಳೆಯರಿಗಾಗಿ ಫುಟಬಾಲ್, ವ್ಹಾಲಿಬಾಲ್, ಹಾಕಿ, ಕಬಡ್ಡಿ, ಟೇಬಲ್ ಟೆನ್ನಿಸ್ (ಸಿಂಗಲ್ಸ್-ಡಬಲ್ಸ್) ಟೆನ್ನಿಸ್, ಬ್ಯಾಡ್ಮಿಂಟನ್, ಕೇರಂ, ಕ್ರಿಕೆಟ್, ಬಾಸ್ಕೆಟ್ ಬಾಲ್, ಚೆಸ್, ಟೆನ್ನಿಕ್ವಾಯಿಟ್, ಥ್ರೋಬಾಲ್, ಈಜು, ಭಾರ ಎತ್ತುವುದು ಕ್ರೀಡೆಗಳು ಹಾಗೂ ಹಿಂದೂಸ್ತಾನಿ ಸಂಗೀತ, ಲಘು ಶಾಸ್ತ್ರೀಯ ಸಂಗೀತ, ಕರ್ನಾಟಕ ಲಘು ಸಂಗೀತ,ಜಾನಪದ ಗೀತೆ ಕಥಕ್, ಮಣಿಪುರಿ, ಕೂಚುಪುಡಿ, ಕಥಕ್ಕಳಿ, ಓಡಿಸ್ಸಿ, ಭರತ ನಾಟ್ಯ, ಜಾನಪದ ನೃತ್ಯ(ತಂಡ), ವಿಂಡ್ ವಾದ್ಯಗಳು, ಪರಕೇಶÀನ್ ವಾದ್ಯಗಳು, ಕರಕುಶಲ ವಸ್ತುಗಳ ಪ್ರದರ್ಶನ, ಕಿರುನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಗುವುದು.ಕ್ರೀಡಾಕೂಟದಲ್ಲಿ ಭಾಗವಹಿಸಲಿಚ್ಛಿಸುವ ರಾಜ್ಯ ಸರ್ಕಾರಿ ನೌಕರರು ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ…

Read More

ವಿಜಯಪುರ: ದೇವರಹಿಪ್ಪರಗಿ ತಾಲೂಕಿನ ಹರನಾಳ ಗ್ರಾಮದಲ್ಲಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾ ಸ್ಥಬ್ಧಚಿತ್ರ ಸಂಚರಿಸಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮ ಮಂಚಾಯತ್ ಅಧ್ಯಕ್ಷ ಸಂತೋಷ ಚನ್ನಗೊಂಡ, ಸಂವಿಧಾನದ ಮಹತ್ವ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದರು.ಜಾಥಾದ ಸ್ತಬ್ಧಚಿತ್ರವನ್ನು ಹರನಾಳ ಗ್ರಾಮದ ಜನರು ತುಂಬಾ ಅದ್ಧೂರಿಯಾಗಿ ಗೊಂಬೆ ಕುಣಿತ, ಡೊಳ್ಳು ಕುಣಿತ, ಕುಂಭಮೇಳದ ಮೂಲಕ ಸ್ವಾಗತಿಸಿದರು. ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂವಿಧಾನ ಪಿಠೀಕೆ ವಾಚನ ಮಾಡಲಾಯಿತು.ನಂತರ ಸಂವಿಧಾನ ಜಾಗೃತಿ ಜಾಥಾದ ಸ್ತಭ್ಧಚಿತ್ರವು ಚಿಕ್ಕರೂಗಿ, ಹಿಟ್ನಳಿ, ಮುಳಸಾವಳಗಿ, ಗ್ರಾಮ ಪಂಚಾಯತನಲಿ ಸಂಚರಿಸಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸೋಮವ್ವ ರತ್ನಾಕರ, ಜಿಲ್ಲಾ ನೋಡಲ್ ಅಧಿಕಾರಿಗಳು ಪವಾರ, ಸಿಂದಗಿ ಸಮಾಝ ಕಲ್ಯಾಣ ಇಲಾಖೆ ಅಧಿಕಾರಿ ಶಿವಲಿಂಗಪ್ಪ ಹಡಪದ, ದೇವರಹಿಪ್ಪರಗಿ ತಾಲೂಕ ಪಂಚಾಯತ್ ಎ.ಡಿ ಶಿವಾನಂದ ಮೂಲಿಮನಿ, ತಾ.ಪ. ನರೆಗಾ ಅಧಿಕಾರಿ ಶಾಂತಗೌಡ ನ್ಯಾಮನ್ನವರ, ಉಪಸ್ಥಿತರಿದ್ದರು.

Read More

ವಿಜಯಪುರ: ೧೧೦/೧೧ ಕೆವಿ ಭೂತನಾಳದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ೨೦ಎಮ್‌ವಿಎ ಪರಿವರ್ತಕ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ೧೧ಕೆವಿ ಬ್ಯಾಂಕ್ ನಂ.೧ ಹಾಗೂ ೧೧ ಕೆವಿ ಬ್ಯಾಂಕ್ ನಂ.೨ರ ಮೇಲೆ ಬರುವಂತಹ ಎಲ್ಲಾ ೧೧ಕೆವಿ ವಿದ್ಯುತ್ ಮಾರ್ಗಗಳಿಗೆ ಫೆ.೧೬ರ ಬೆಳಿಗ್ಗೆ ೯ ಗಂಟೆಯಿಂದ ಫೆ.೧೮ರ ಸಂಜೆ ೬ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ವಿಜಯಪುರ ಜಿಲ್ಲಾಡಳಿತದಿಂದ ಸಂತ ಸೇವಾಲಾಲ ಜಯಂತಿ ಆಚರಣೆ ವಿಜಯಪುರ:ಸಮಾಜದಲ್ಲಿನ ಕಂದಾಚಾರಗಳನ್ನು ಹೊಡೆದೊಡಿಸಲು ತಮ್ಮದೆಯಾದ ಚಿಂತನೆಗಳನ್ನು ನೀಡಿದ ಸಂತ ಸೇವಾಲಾಲರು ವಾಸ್ತವಿಕ ಜಗತ್ತಿನಲ್ಲಿ ಬದುಕಿದ ದಾರ್ಶನಿಕ ವ್ಯಕ್ತಿ ಎಂದು ಉಪನ್ಯಾಸಕಿ ಅನುಪಮಾ ಪಿ. ಹೇಳಿದರು.ಅವರು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.ಸೇವಾಲಾಲರು ತಮ್ಮ ತತ್ವಗಳ ಮೂಲಕ ಲೋಕಕ್ಕೆ ಜ್ಞಾನದ ಮೂಲಕ ಮುಕ್ತಿ ಮಾರ್ಗ ತೋರಿಸಿದರು. ಸರ್ವರನ್ನು ಒಳಗೊಂಡ ಸಮ ಸಮಾಜದ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವನೆಯನ್ನು ಮೂಡಲು ಪ್ರೇರೇಪಿಸಿದರು. ತನ್ನ ಸಮಾಜದ ಜನರ ಕಷ್ಟಕ್ಕಾಗಿ ತಮ್ಮ ಪ್ರಾಣಾರ್ಪಣೆಗೂ ಸಿದ್ದರಾಗಿದ್ದರು ಎಂದರು.ಕಾರ್ಯಕ್ರಮದಲ್ಲಿ ತಹಶಿಲ್ದಾರ ಕವಿತಾ, ಸಮಾಜ ಕಲ್ಯಾಣ ಇಲಾಖೆಯ ಪುಂಡಲಿಕ್ ಮಾನವರ, ಮಹನಾಗರ ಪಾಲಿಕೆಯ ಸುಮಿತ್ರ ರಾಜು ಜಾಧವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಯ್ಯುಬ್ ದ್ರಾಕ್ಷಿ, ಮಾಜಿ ಶಾಸಕರರಾದ ಮನೋಹರ್ ಐನಾಪೂರ, ರಾಜಪಾಲ ಚವ್ವಾಣ, ಕೇಶವ ಗಂಗಾರಾಮ ರಾಠೋಡ, ಧನಸಿಂಗ ಮಾಹಾರಾಜ,…

Read More