ವಿಜಯಪುರ: ದೇವರಹಿಪ್ಪರಗಿ ತಾಲೂಕಿನ ಹರನಾಳ ಗ್ರಾಮದಲ್ಲಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾ ಸ್ಥಬ್ಧಚಿತ್ರ ಸಂಚರಿಸಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮ ಮಂಚಾಯತ್ ಅಧ್ಯಕ್ಷ ಸಂತೋಷ ಚನ್ನಗೊಂಡ, ಸಂವಿಧಾನದ ಮಹತ್ವ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದರು.
ಜಾಥಾದ ಸ್ತಬ್ಧಚಿತ್ರವನ್ನು ಹರನಾಳ ಗ್ರಾಮದ ಜನರು ತುಂಬಾ ಅದ್ಧೂರಿಯಾಗಿ ಗೊಂಬೆ ಕುಣಿತ, ಡೊಳ್ಳು ಕುಣಿತ, ಕುಂಭಮೇಳದ ಮೂಲಕ ಸ್ವಾಗತಿಸಿದರು. ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂವಿಧಾನ ಪಿಠೀಕೆ ವಾಚನ ಮಾಡಲಾಯಿತು.
ನಂತರ ಸಂವಿಧಾನ ಜಾಗೃತಿ ಜಾಥಾದ ಸ್ತಭ್ಧಚಿತ್ರವು ಚಿಕ್ಕರೂಗಿ, ಹಿಟ್ನಳಿ, ಮುಳಸಾವಳಗಿ, ಗ್ರಾಮ ಪಂಚಾಯತನಲಿ ಸಂಚರಿಸಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸೋಮವ್ವ ರತ್ನಾಕರ, ಜಿಲ್ಲಾ ನೋಡಲ್ ಅಧಿಕಾರಿಗಳು ಪವಾರ, ಸಿಂದಗಿ ಸಮಾಝ ಕಲ್ಯಾಣ ಇಲಾಖೆ ಅಧಿಕಾರಿ ಶಿವಲಿಂಗಪ್ಪ ಹಡಪದ, ದೇವರಹಿಪ್ಪರಗಿ ತಾಲೂಕ ಪಂಚಾಯತ್ ಎ.ಡಿ ಶಿವಾನಂದ ಮೂಲಿಮನಿ, ತಾ.ಪ. ನರೆಗಾ ಅಧಿಕಾರಿ ಶಾಂತಗೌಡ ನ್ಯಾಮನ್ನವರ, ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

