ಸಿಂದಗಿ: ನಮ್ಮ ಜೀವನದ ಗುರಿ ಸಾಧನೆಗೆ ಯೋಗ್ಯ ಗುರುಗಳ ಅವಶ್ಯವಿದೆ ಎಂದು ವಿಜಯಪುರ ಧಾಮದ ಹೃದಯ ರೋಗ ತಜ್ಞ ಡಾ.ಗೌತಮ ವಗ್ಗರ್ ಹೇಳಿದರು.
ಪಟ್ಟಣದ ಬಂದಾಳ ರಸ್ತೆಯಲ್ಲಿರುವ ವಿವೇಕ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ ವಿವೇಕ ಸಿರಿ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುರುಗಳ ಸೂಕ್ತ ಮಾರ್ಗದರ್ಶನದಲ್ಲಿ ನಾವು ಗುರಿ ಮುಟ್ಟಲು ಸಾಧ್ಯ. ವಿದ್ಯಾರ್ಥಿಗಳು ಗುರಿಯ ಕಡೆಗೆ ಗಮನ ಕೊಟ್ಟು ಗುರುವಿನ ಮಾರ್ಗದರ್ಶನದಲ್ಲಿ ಸಾಧನೆ ಮಾಡಿ ಸಾಧಕರಾಗಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಕಿಡ್ನಿ ತಜ್ಞೆ ಡಾ.ಮೋನಿಕಾ ಮಾತನಾಡಿ ಸ್ವಾಮಿ ವಿವೇಕಾನಂದರ ಹೆಸರನ್ನಿಟ್ಟುಕೊಂಡ ವಿವೇಕ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಅವರ ತತ್ವಾದರ್ಶಗಳನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಮೇಕರ್ ಸುಧೀರ್ ಕೃಷ ಪೂಜಾರಿ, ಪ್ರಾಂಶುಪಾಲೆ ಶಾಹಿಮೋಲ್ ರಾಬಿನ್ ಅವರು ವಾರ್ಷಿಕ ವರದಿ ವಾಚನ ಮಾಡಿದರು.
ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ನೀಲಮ್ಮ ಹೆಗ್ಗನದೊಡ್ಡಿ, ಆಡಳಿತಾಧಿಕಾರಿ ಟೆನಿ ರಾಬಿನ್, ಸಂಸ್ಥಾಪಕ ಎ.ಆರ್.ಹೆಗ್ಗನದೊಡ್ಡಿ ವೇದಿಕೆಯ ಮೇಲಿದ್ದರು.
ಈ ವೇಳೆ ಸಾಂಸ್ಕೃತಿಕ ಸ್ಪರ್ಧೆ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಶಿವನಗೌಡ ಬಿರಾದಾರ, ಪತ್ರಕರ್ತ ಆನಂದ ಶಾಬಾದಿ, ರಾಯಣ್ಣ ಇವಣಗಿ, ರಾ.ಶಿ. ವಾಡೇದ, ಸಿ.ಎಸ್.ಪೂಜಾರಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

