ವಿಜಯಪುರ: ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅಳವಡಿಸಿ ಅಧಿಕ ಇಳುವರಿ ಪಡೆಯಬಹುದು ಎಂದು ವಿಜಯಪುರದ ಉಪ ಕೃಷಿ ನಿರ್ದೇಶಕರಾದ ಡಾ. ಬಾಲರಾಜ ರಂಗರಾವ ಹೇಳಿದರು.
ಅವರು ಜಿಲ್ಲಾ ಕೃಷಿ ತರಬೇತಿ ಕೇಂದ್ರ ವಿಜಯಪುರದಲ್ಲಿ ೨೦೨೩-೨೪ ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ (ಸೂಕ್ಷ್ಮ ನೀರಾವರಿ)-ಕೇಂದ್ರ ಪುರಸ್ಕೃತ ಯೋಜನೆಯಡಿ ಸೂಕ್ಷö್ಮ ನೀರಾವರಿ ಘಟಕಗಗಳ ಉಪಯೋಗಗಳು ಮತ್ತು ನಿರ್ವಹಣೆ ವಿಷಯದ ಕುರಿತು ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಹಾಯಕ ಕೃಷಿ ನಿರ್ದೇಶಕಕಿ ಶ್ರೀಮತಿ ವಿಜಯಲಕ್ಷ್ಮೀ ಎಸ್. ಚವ್ಹಾಣ, ಮಾತನಾಡಿದರು.
ತರಬೇತಿಯಲ್ಲಿ ನೀರಿನ ಮಿತ ಬಳಕೆ, ವಿವಿಧ ಬೆಳೆಗಳಲ್ಲಿ ನೀರಿನ ಅವಶ್ಯಕತೆ, ವಿವಿಧ ಬೆಳೆಗಳಲ್ಲಿ ವಿವಿಧ ನೀರಾವರಿ ಪದ್ಧತಿಗಳು, ಸೂಕ್ಷ್ಮ ನೀರಾವರಿ ಘಟಕಗಗಳ ಭಾಗಗಳ ಕಾರ್ಯವೈಖರಿ ಮತ್ತು ನಿರ್ವಹಣೆ ಕುರಿತು ವಿವಧ ಅತಿಥಿ ಉಪನ್ಯಾಸಕ ತಜ್ಞರ ಮೂಲಕ ಮಾಹಿತಿ ನೀಡಲಾಯಿತು.
ಎಮ್.ಆರ್. ಮೈದರಗಿ , ಲಿಂಗರಾಜ ತಾಳಿಕೋಟಿ ಮತ್ತು ಶ್ರೀಮತಿ ಗೀತಾ ಭಜಂತ್ರಿ ಉಪಸ್ಥಿತರಿದ್ದರು. ಫಾತಿಮಾಬಾನು ಸುತಾರ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಲಕ್ಷ್ಮೀ ಕಾಮಗೊಂಡ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

