Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: “ಸಿಎಂ ಸಿದ್ದರಾಮಯ್ಯ 15ನೇ ಬಾರಿ ರೂ.3,71,383 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಮೀನುಗಾರರಿಗೆ ಕ್ಷೇತ್ರದ ಸರ್ವೋತೋಮುಖ ಅಭಿವೃದ್ಧಿಗಾಗಿ 3೦೦೦ ಕೋಟಿ ರೂಪಾಯಿಗಳಷ್ಟು ಬೃಹತ್ ಗಾತ್ರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಹೊನ್ನಾವರ ತಾಲೂಕಿನ ಮಂಕಿ ಕಾಸರ್ಕೋಡಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ , ಭದ್ರಾವತಿಯಲ್ಲಿ ಅತ್ಯಾಧುನಿಕ ಮೀನು ಮಾರುಕಟ್ಟೆ ಸ್ಥಾಪನೆ, ಆಕ್ವಾ ಪಾರ್ಕ್ ಸ್ಥಾಪನೆ , ಮುರುಡೇಶ್ವರದಲ್ಲಿ ಸುಸಜ್ಜಿತ ಹೊರಬಂದರು ನಿರ್ಮಾಣ, ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಮತ್ಸ್ಯ ಆಶಾಕಿರಣ ಯೋಜನೆಯಡಿ ಕರಾವಳಿಯ ಮೀನುಗಾರಿಕೆಯ ಪರಿಹಾರ 1500 ರೂ ಗಳಿಂದ 3000 ರೂಪಾಯಿಗಳಿಗೆ ಏರಿಕೆ ಮಾಡಿದ್ದಾರೆ. ಅಪಘಾತ ಅಥವಾ ಅವಘಡಕ್ಕೆ ಒಳಗಾಗುವ ಮೀನುಗಾರರನ್ನು ತ್ವರಿತವಾಗಿ ದಡಕ್ಕೆ ತರಲು ರಾಜ್ಯದಲ್ಲಿ ಪ್ರಪ್ರಥಮ ಸಮುದ್ರ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿರುವುದು ನಿಜಕ್ಕೂ ಮೆಚ್ಚವಂತದ್ದು. ವಿವಿಧ ವಸತಿ ಯೋಜನೆಯಡಿಯಲ್ಲಿ 10,000 ವಸತಿ ರಹಿತ ಮೀನುಗಾರರಿಗೆ ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಹೇಳಿದ್ದಾರೆ. ಘೊಷಣೆಯಾಗಿರುವ ಈ ಯೋಜನೆಗಳು ಕೇವಲ…
ವಿಜಯಪುರ: ರಾಜ್ಯ ಬಜೆಟ್ ಸಂಪೂರ್ಣ ಸಪ್ಪೆಯಾಗಿದ್ದು, ಅಭಿವೃದ್ಧಿಯನ್ನು ಪ್ರತಿಬಿಂಬಿಸುವ ಯಾವ ಯೋಜನೆಯೂ ಇಲ್ಲ. ಕೇವಲ ಘೋಷಣೆ, ಘೋಷಣೆಗೆ ಸೀಮಿತವಾಗಿದೆ ಹೊರತು ಅನುಷ್ಠಾನದ ಯಾವ ಉಲ್ಲೇಖವೂ ಇಲ್ಲ, ಕೇವಲ ಹಿಂದಿನ ಯೋಜನೆಗಳ ಪುನರಾವರ್ತನೆ, ವಿನಾಕಾರಣ ಕೇಂದ್ರದ ಮೇಲೆ ಬೊಟ್ಟು ತೋರಿಸುವ ಮೂಲಕ ಒಂದು ರೀತಿ ರಾಜಕಾರಣದ ಬಜೆಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದಾರೆ. ಬರದಿಂದ ನಲುಗುತ್ತಿರುವ ರೈತರಿಗೆ ಯಾವ ಅನುಕೂಲಕಾರಿ ಯೋಜನೆ ರೂಪಿಸಿಲ್ಲ, ವಿಜಯಪುರ ಜಿಲ್ಲೆಗಂತೂ ಈ ಬಜೆಟ್ ನಲ್ಲಿ ದೊಡ್ಡ ಅನ್ಯಾಯವಾಗಿದೆ, ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಯಾವ ಮಹತ್ವದ ನಿರ್ಧಾರವಿಲ್ಲ, ಪ್ರವಾಸೋದ್ಯಮ, ವಿಜಯಪುರ ಮಹಾನಗರ ಪಾಲಿಕೆಗೆ ವಿಶೇಷ ಅನುದಾನ ಹೀಗೆ ಯಾವುದಕ್ಕೂ ಬಜೆಟ್ ನಲ್ಲಿ ಘೋಷಣೆ ಮಾಡಿಲ್ಲ, ಜನರ ಆಶ್ವಾಸನೆ ಯಾವುದೂ ಈಡೇರಿಲ್ಲ, ಕೇವಲ ಘೋಷಣೆ ಅಧಿಕವಾಗಿವೆ. ಜಿಲ್ಲೆಯ ರೈತರಿಗೆ, ದ್ರಾಕ್ಷಿ ಬೆಳೆಗಾರರಿಗೆ, ಕಬ್ಬು ಬೆಳೆಗಾರರಿಗೆ ಉತ್ತೇಜಿಸುವ ನಿಟ್ಟಿನಲ್ಲಿ ಯಾವ ಕಾರ್ಯಕ್ರಮಗಳು ಇಲ್ಲ, ಎಲ್ಲರಿಗೂ, ಎಲ್ಲ ವಲಯಕ್ಕೂ ಇದೊಂದು ನಿರಾಶಾದಾಯಕ ಬಜೆಟ್ ಆಗಿದೆ. ಕೇವಲ ಒಂದು ಸಮುದಾಯಕ್ಕೆ ಓಲೈಕೆಯ ರೀತಿಯಲ್ಲಿ ಅನುದಾನ ಮೀಸಲಿರಿಸಿ…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಸಾಮಾಜಿಕ ನ್ಯಾಯ, ಆರ್ಥಿಕ ಅಭಿವೃದ್ಧಿ, ಕೈಗಾರಿಕಾ ಬೆಳವಣಿಗೆ ಮತ್ತು ಪ್ರಾದೇಶಿಕ ತಾರತಮ್ಯ ನಿವಾರಣೆಯ ಹೆಗ್ಗುರಿಗಳನ್ನುಳ್ಳ ಪರಿಪೂರ್ಣ ದೃಷ್ಟಿಯ ಜನಪ್ರಿಯ ಬಜೆಟ್ ಆಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.ಅದರಲ್ಲೂ ನಮ್ಮ ತವರು ಜಿಲ್ಲೆಯಾದ ವಿಜಯಪುರದ ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು, ಇಟ್ಟಂಗಿಹಾಳದ ಬಳಿ ಆಹಾರ ಪಾರ್ಕ್ ಮತ್ತು ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಘೋಷಿಸಿರುವುದಕ್ಕೆ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದ ಸಮರ್ಪಿಸುತ್ತೇನೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.ಇದು ಸಿದ್ದರಾಮಯ್ಯನವರ ದಾಖಲೆಯ ಬಜೆಟ್ ಆಗಿದೆ. ಭಾರತದ ಶಾಸಕಾಂಗ ಇತಿಹಾಸದಲ್ಲಿ 15 ಬಾರಿ ಬಜೆಟ್ ಮಂಡಿಸಿರುವವರು ತೀರಾ ಕಡಿಮೆ ಇದ್ದಾರೆ. ಮುಖ್ಯಮಂತ್ರಿಗಳು ತಮ್ಮ ಬಜೆಟ್ಟಿನಲ್ಲಿ ಶಕ್ತಿಶಾಲಿ ಕರ್ನಾಟಕ ನಿರ್ಮಾಣದ ತಮ್ಮ ದೂರದೃಷ್ಟಿಯನ್ನು ರಾಜ್ಯದ ಜನತೆಯ ಮುಂದಿಟ್ಟಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.ಕೃಷಿ, ರೈತರ ಸಬಲೀಕರಣ, ಕೈಗಾರಿಕೆ, ಮೂಲಸೌಕರ್ಯ, ಆಧುನಿಕ ಉದ್ಯಮಗಳಿಗೆ ಒತ್ತು, ಉದ್ಯೋಗಸೃಷ್ಟಿಯ ಕಡೆಗೆ ಗಮನ, ಶ್ರೀಶೈಲ, ಮಂತ್ರಾಲಯದಂತಹ ಪುಣ್ಯಕ್ಷೇತ್ರಗಳಲ್ಲಿ ಸೌಲಭ್ಯ…
ವಿಜಯಪುರ: “ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಹಣಕಾಸು ಸಚಿವರಾಗಿ ಅತಿ ಹೆಚ್ಚು ಬಾರಿ ಜನಪರ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಪರವಾದ ಬಜೆಟ್ ಮಂಡಿಸುವುದರ ಮೂಲಕ ಎಲ್ಲ ವರ್ಗದ ಜನರಿಗೂ ನ್ಯಾಯ ಕಲ್ಪಿಸುವ ಪ್ರಯತ್ನ ಮಾಡಿದ್ದಾರೆ. ರಾಜ್ಯದ ಜನರಿಗೆ ವಿವಿಧ ಭಾಗ್ಯಗಳನ್ನು ಕರುಣಿಸಿರುವ ಈ ಭಾಗ್ಯವಿಧಾತ ಅದು ಹೇಗೆ ಈ ರಾಜ್ಯವನ್ನು ಮುನ್ನಡೆಸಬಲ್ಲರು? ಎನ್ನುವ ಕುತೂಹಲಗಳೆಲ್ಲಕ್ಕೂ ತಮ್ಮ ಅಪಾರವಾದ ಆರ್ಥಿಕ ಕ್ಷೇತ್ರದ ಅನುಭವವನ್ನು ದಾರೆಯೆರೆದು ಜನಮುಖಿ ಬಜೆಟ್ ನ್ನು ಮಂಡಿಸಿದ್ದಾರೆ. ವಿಶೇಷವಾಗಿ ಬಸವ ನಾಡು ವಿಜಯಪುರ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲರ ವಿನಂತಿಯ ಮೇರೆಗೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳ ಈ ಜನಪರ ಬಜೆಟ್ ಗೆ ನಾನು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.” – ಸಂಗಮೇಶ ಬಬಲೇಶ್ವರಮುಖ್ಯ ವಕ್ತಾರರು, ಕೆಪಿಸಿಸಿ ಪ್ರಚಾರ ಸಮಿತಿ, ಬೆಂಗಳೂರು
’ವ್ಯಕ್ತಿ – ವ್ಯಕ್ತಿತ್ವ’ ಅಂಕಣ ಬರಹ ವಿಜಯ ಕರ್ನಾಟಕ” ಪತ್ರಿಕೆಯ “ಹೆಲ್ತ್ ಎಕ್ಸಲೆನ್ಸ್ 2024″ ಪ್ರಶಸ್ತಿ ಪುರಸ್ಕೃತ ಇವರು ವೃತ್ತಿಯಲ್ಲಿ ವೈದ್ಯರು, ಪ್ರವೃತ್ತಿಯಲ್ಲಿ ಸಮಾಜ ಸೇವಕರು. ಅದಕ್ಕಾಗಿ ಆರಿಸಿಕೊಂಡ ಮಾರ್ಗ ರಾಜಕಾರಣ. ರಾಜಕಾರಣಕ್ಕೆ ಬರುವವರು ಹಣ ಮಾಡಲು ಎಂಬ ಅಪವಾದಕ್ಕೆ ವಿರುದ್ಧವಾಗಿ ತಾವು ಕಷ್ಟಪಟ್ಟು ದುಡಿದ ಅಪಾರ ಹಣವನ್ನು ಸಮಾಜಸೇವೆಗೆ ಸುರಿದವರಿವರು. ಇಂತಹ ಅಪರೂಪದ ವ್ಯಕ್ತಿತ್ವ ಹೊಂದಿದವರು ಡಾ.ಗೌತಮ್ ಆರ್ ಚೌಧರಿ ಅವರು.”ವೈದ್ಯೋ ನಾರಾಯಣ ಹರಿ” ಉಕ್ತಿಗೆ ಬದಲು ಬಡ ರೋಗಿಗಳಲ್ಲೇ ದೇವರನ್ನು ಕಾಣುವ ಸಹೃದಯಿ ಇವರು. ವಿಜಯಪುರ ಜಿಲ್ಲೆಯ ಕಡುಬಡತನದ ಅನೇಕ ರೋಗಿಗಳನ್ನು ತಮ್ಮ ಸ್ವಂತ ವೆಚ್ಚದಲ್ಲಿ ಬೆಂಗಳೂರಿಗೆ ಕರೆದೊಯ್ದು ಅವರಿಗೆ ಅಗತ್ಯವಿದ್ದ ಲಕ್ಷಾಂತರ ರೂ. ವೆಚ್ಚದ ಶಸ್ತ್ರಚಿಕಿತ್ಸೆಗಳನ್ನು ಸಂಪೂರ್ಣ ಉಚಿತವಾಗಿ ನೆರವೇರಿಸಿ ಆ ಕುಟುಂಬಗಳ ಬಾಳಿಗೆ ಬೆಳಕಾದ ಇವರು ಪ್ರಚಾರದಿಂದ ಗಾವುದ ದೂರವಿರುವವರು. ವೈದ್ಯಕೀಯ ರಂಗದಲ್ಲಿ ಇವರ ಇಂತಹ ಸಮರ್ಪಣಾ ಭಾವದ ಸೇವೆಯನ್ನು ಗುರುತಿಸಿಯೇ ಇತ್ತೀಚೆಗೆ ನಾಡಿನ ಖ್ಯಾತ ದಿನಪತ್ರಿಕೆ “ವಿಜಯ ಕರ್ನಾಟಕ” ಪತ್ರಿಕೆ ಬಳಗವು ಇತ್ತೀಚೆಗೆ ಇವರಿಗೆ…
Udayarashmi kannada daily newspaper
ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಗುರುವಾರ ತಾಲೂಕಾಡಳಿತದಿಂದ ಸಂತ ಸೇವಾಲಾಲ ಜಯಂತಿ ಆಚರಿಸಲಾಯಿತು.ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಸಂತ ಸೇವಾಲಾಲ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸರ್ಕಾರದ ಮಹಾತ್ಮರ ಜಯಂತಿಗಳನ್ನು ಆಚರಣೆ ಮಾಡುವ ಮೂಲಕ ಸಮಾಜಕ್ಕೆ ಅವರ ಸಂದೇಶಗಳನ್ನು ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಮಹಾತ್ಮರು ಸಾರಿದ ಸಂದೇಶಗಳನ್ನು ಪ್ರತಿಯೊಬ್ಬರೂ ಅರಿತುಕೊಂಡು ಜೀವನ ಮಾಡಿದರೆ ಸುಂದರವಾದ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.ಪುರಸಭೆ ಸದಸ್ಯ ನೀಲಪ್ಪ ನಾಯಕ ಮಾತನಾಡಿದರು.ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ರಾಠೋಡ, ಬಂಜಾರಾ ಸಮಾಜ ಧರ್ಮಗುರು ಸಂತ ಸೇವಾಲಾಲ ಅವರ ಬೋಧನೆಗಳು ಸಾರ್ವಕಾಲಿಕವಾಗಿವೆ. ನಮ್ಮ ಸಮಾಜದ ತಾಂಡಾಗಳು ಹಿಂದುಳಿದಿವೆ. ಅವುಗಳು ಅಭಿವೃದ್ಧಿಯಾಗುವ ಜೊತೆಗೆ ಅಲ್ಲಿ ಸರ್ಕಾರ ಎಲ್ಲ ಮೂಲಭೂತ ಸೌಲಭ್ಯಗಳನ್ನು ನೀಡುವಂತಾಗಬೇಕೆಂದರು.ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಅವರು ಸಂತ ಸೇವಾಲಾಲ ಅವರ ಜೀವನ ಕುರಿತು ಸವಿಸ್ತಾರವಾಗಿ ಮಾತನಾಡಿದರು. ಡಿಎಸ್ಎಸ್ ಮುಖಂಡ ಅಶೋಕ ಚಲವಾದಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ರವಿ ನಾಯ್ಕೋಡಿ, ದೇವೇಂದ್ರ ಚವ್ಹಾಣ,…
ಬಸವನಬಾಗೇವಾಡಿ: ಸೇವಾಲಾಲ ಒಬ್ಬ ದನಗಾಹಿಯಾಗಿದ್ದರೂ ಜೀವನದ ಅನುಭವವನ್ನು ತತ್ವದ ಮೂಲಕ ಭೋದಿಸಿ ಜನರಲ್ಲಿ ಅಜ್ಞಾನವನ್ನು ದೂರ ಮಾಡಿದ ಮಹಾನ ದಾರ್ಶನಿಕ ಎಂದು ರಾಷ್ಟೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ ವೃತ್ತದಲ್ಲಿ ರಾಷ್ಟೀಯ ಬಸವಸೈನ್ಯವು ಗುರುವಾರ ಸೇವಾಲಾಲರ ಜಯಂತೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸೇವಾಲಾಲರ ಭಾವಚಿತ್ರಕ್ಕೆ ಪೂಜೆಯ ಸಲ್ಲಿಸಿ ಮಾತನಾಡಿದ ಅವರು, ಸತ್ಯ,ಅಹಿಂಸೆ,ದಯೆ,ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದವರು. ಇದಲ್ಲದೇ ಮಾನವ ಜನ್ಮ ಪವಿತ್ರವಾದದ್ದು ಇದನ್ನು ಹಾಳು ಮಾಡಿಕೊಳ್ಳಬೇಡಿ. ವ್ಯಸನಗಳಿಂದ ದೂರವಿರಿ ಪ್ರಾಮಾಣಿಕರಾಗಿ ಜೀವಿಸಿ ಕಷ್ಟದಲ್ಲಿ ಇರುವರಿಗೆ ಸಹಾಯ ಮಾಡಬೇಕು ಎಂದು ಹೇಳಿದವರು ಸೇವಾಲಾಲರು. ಇಂದಿಗೂ ಅವರ ಬೋಧನೆಗಳು ಬಂಜಾರಾ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ರಾಷ್ಟೀಯ ಬಸವಸೈನ್ಯದ ಮುಖಂಡರಾದ ಶ್ರೀಕಾಂತ ಕೋಟ್ರಶೆಟ್ಟಿ , ಸುನೀಲಗೌಡ ಚಿಕ್ಕೊಂಡ, ನಿಂಗಪ್ಪ ಅವಟಿ, ಮನ್ನಾನ ಶಾಬಾದಿ ,ಸುರೇಶ ದೇಸಾಯಿ, ಸಂಗಮೇಶ ಕಲ್ಲೂರ, ಮಂಜುನಾಥ ಜಾಲಗೇರಿ, ಮಹೇಶ ಹೆರಕಲ್, ವಿಶ್ವನಾಥ ಗಬ್ಬೂರ , ಮಾಂತೇಶ ಹೆಬ್ಬಾಳ, ಶಂಕರ…
ಬಸವನಬಾಗೇವಾಡಿ: ಸತತ ಪ್ರಯತ್ನ, ಓದಿನಲ್ಲಿ ಶ್ರದ್ಧೆ, ಆತ್ಮವಿಶ್ವಾಸ ಇದ್ದರೆ ವಿದ್ಯಾರ್ಥಿಗಳಿಗೆ ಯಾವುದು ಅಸಾಧ್ಯವಲ್ಲ ಎಂದು ವಿಜಯಪುರದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಕೆಲೂರ ಹೇಳಿದರು.ಸ್ಥಳೀಯ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಹಾಗೂ ಸ್ನೇಹಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಡತನ, ಕನ್ನಡ ಮಾಧ್ಯಮ, ಹಳ್ಳಿ ಬದುಕಿನ ಹಿನ್ನೆಲೆ ಇದ್ದರೂ ಗುರಿ ಮುಟ್ಟಿದ ನೂರಾರು ಸಾಧಕರು ನಮ್ಮ ಕಣ್ಣಮುಂದಿದ್ದಾರೆ. ಸಾಧಿಸುವ ಛಲದೊಂದಿಗೆ ಸತತ ಪ್ರಯತ್ನದಲ್ಲಿದ್ದವರು ಯಶಸ್ಸು ಕಾಣುತ್ತಾರೆ ಎಂದು ಹೇಳಿದ ಅವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದರೆ ರೂ.25,000 ಹಾಗೂ ಗಣಿತ ವಿಷಯದಲ್ಲಿ 100 ಅಂಕ ಪಡೆದರೆ ರೂ. 5,000 ಬಹುಮಾನ ನೀಡುವುದಾಗಿ ಭರವಸೆ ನೀಡಿದರು.ಕ್ಷೇತ್ರ ಸಮನ್ವಯಾಧಿಕಾರಿ ಪಿ.ಯು.ರಾಠೋಡ ಮಾತನಾಡಿ, ಅಂಕ ಗಳಿಕೆ ಜೊತೆಗೆ ಸಂಸ್ಕಾರಯುತ ಶಿಕ್ಷಣ ಇಂದಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಮುಖಂಡ ಅನಿಲ ಅಗರವಾಲ ಮಾತನಾಡಿದರು.ಪುರಸಭೆ ಸದಸ್ಯ ದೇವೇಂದ್ರ ರಾಠೋಡ, ಎಸ್.ಎ.ದೇಗಿನಾಳ, ಮುರಗೇಶ…
ಬಸವನಬಾಗೇವಾಡಿ: ವಿದ್ಯಾರ್ಥಿಗಳು ಮೊಬೈಲ್, ಟಿವಿ ಧಾರವಾಹಿಗಳನ್ನು ವೀಕ್ಷಣೆ ಮಾಡುವದನ್ನು ಬಿಟ್ಟು ಅಧ್ಯಯನದ ಕಡೆಗೆ ಹೆಚ್ಚು ಗಮನಹರಿಸಿದರೆ ಸ್ಪರ್ಧಾತ್ಮಕ ಯುಗದಲ್ಲಿ ಮುಂದೆ ಬರಲು ಸಾಧ್ಯವಿದೆ ಎಂದು ವಿಜಯಪುರದ ಚಾಣಕ್ಯ ಕರಿಯರ ಅಕಾಡೆಮಿಯ ಅಧ್ಯಕ್ಷ ಎನ್.ಎಂ. ಬಿರಾದಾರ ಹೇಳಿದರು.ಪಟ್ಟಣದ ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಅಕಾಡೆಮಿಯಲ್ಲಿ ತರಬೇತಿ ಪಡೆದ ಸಾಕಷ್ಟು ವಿದ್ಯಾರ್ಥಿಗಳು ಉದ್ಯೋಗ ಪಡೆದಿದ್ದಾರೆ. ತಾವುಗಳು ನಮ್ಮ ಅಕಾಡೆಮಿ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಒಳ್ಳೆಯ ವಿಚಾರಗಳನ್ನು ಗುರಿಯಾಗಿಟ್ಟುಕೊಂಡು ಅಭ್ಯಾಸದಲ್ಲಿ ತೊಡಗಿದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.ಉಪನಿರ್ದೇಶಕ ಡಾ.ಸಿ.ಕೆ.ಹೊಸಮನಿ ಮಾತನಾಡಿ, ಇಲಾಖೆಯ ಎಲ್ಲ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ನಿರಂತರ ಅಧ್ಯಯನದೊಂದಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದುಕೊಳ್ಳಬೇಕು ಎಂದು ಹೇಳಿದರು.ಸಾನಿಧ್ಯ ವಹಿಸಿದ್ದ ಸಿದ್ಧಲಿಂಗ ಸ್ವಾಮೀಜಿ, ವಕೀಲ ವಿ.ಬಿ.ಮರ್ತುರ, ಪ್ರಾಚಾರ್ಯ ಎಂ.ಬಿ.ವಗ್ಗರ ಮಾತನಾಡಿದರು. ಉಪನಿರ್ದೇಶಕರ ಕಚೇರಿ ಶಾಖಾಧಿಕಾರಿ ಪ್ರಕಾಶ…
