ಬಸವನಬಾಗೇವಾಡಿ: ಸೇವಾಲಾಲ ಒಬ್ಬ ದನಗಾಹಿಯಾಗಿದ್ದರೂ ಜೀವನದ ಅನುಭವವನ್ನು ತತ್ವದ ಮೂಲಕ ಭೋದಿಸಿ ಜನರಲ್ಲಿ ಅಜ್ಞಾನವನ್ನು ದೂರ ಮಾಡಿದ ಮಹಾನ ದಾರ್ಶನಿಕ ಎಂದು ರಾಷ್ಟೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.
ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ ವೃತ್ತದಲ್ಲಿ ರಾಷ್ಟೀಯ ಬಸವಸೈನ್ಯವು ಗುರುವಾರ ಸೇವಾಲಾಲರ ಜಯಂತೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸೇವಾಲಾಲರ ಭಾವಚಿತ್ರಕ್ಕೆ ಪೂಜೆಯ ಸಲ್ಲಿಸಿ ಮಾತನಾಡಿದ ಅವರು, ಸತ್ಯ,ಅಹಿಂಸೆ,ದಯೆ,ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದವರು. ಇದಲ್ಲದೇ ಮಾನವ ಜನ್ಮ ಪವಿತ್ರವಾದದ್ದು ಇದನ್ನು ಹಾಳು ಮಾಡಿಕೊಳ್ಳಬೇಡಿ. ವ್ಯಸನಗಳಿಂದ ದೂರವಿರಿ ಪ್ರಾಮಾಣಿಕರಾಗಿ ಜೀವಿಸಿ ಕಷ್ಟದಲ್ಲಿ ಇರುವರಿಗೆ ಸಹಾಯ ಮಾಡಬೇಕು ಎಂದು ಹೇಳಿದವರು ಸೇವಾಲಾಲರು. ಇಂದಿಗೂ ಅವರ ಬೋಧನೆಗಳು ಬಂಜಾರಾ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟೀಯ ಬಸವಸೈನ್ಯದ ಮುಖಂಡರಾದ ಶ್ರೀಕಾಂತ ಕೋಟ್ರಶೆಟ್ಟಿ , ಸುನೀಲಗೌಡ ಚಿಕ್ಕೊಂಡ, ನಿಂಗಪ್ಪ ಅವಟಿ, ಮನ್ನಾನ ಶಾಬಾದಿ ,ಸುರೇಶ ದೇಸಾಯಿ, ಸಂಗಮೇಶ ಕಲ್ಲೂರ, ಮಂಜುನಾಥ ಜಾಲಗೇರಿ, ಮಹೇಶ ಹೆರಕಲ್, ವಿಶ್ವನಾಥ ಗಬ್ಬೂರ , ಮಾಂತೇಶ ಹೆಬ್ಬಾಳ, ಶಂಕರ ರಜಪೂತ, ಶ್ರೀಧರ ಕುಂಬಾರ, ಶಂಕರಗೌಡ ಚಿಕ್ಕೊಂಡ, ಬಸನಗೌಡ ಪಾಟೀಲ, ರವಿ ರಾಠೋಡ, ದೇವೇಂದ್ರ ಚವ್ಹಾಣ, ಕಾಶೀನಾಥ ರಾಠೋಡ, ಮಹಾದೇವ ನಾಯ್ಕೋಡಿ, ಧನಸಿಂಗ ರಾಠೋಡ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

