Author: editor.udayarashmi@gmail.com

ಬಸವನಬಾಗೇವಾಡಿ: ಬಸವ ಜನ್ಮ ಬಸವನಬಾಗೇವಾಡಿಯ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯನವರು ಬಜೆಟ್ ನಲ್ಲಿ ಬಸವನಬಾಗೇವಾಡಿಗೆ ಪ್ರತ್ಯೇಕ ಪ್ರಾಧಿಕಾರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಸ್ಥಳೀಯ ಬಸವೇಶ್ವರ ಸೇವಾ ಸಮಿತಿ ಪದಾಧಿಕಾರಿಗಳು ಸೋಮವಾರ ಬೆಂಗಳೂರಿನ ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಜವಳಿ ಕಬ್ಬು ಅಭಿವೃದ್ದಿ ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶ್ವಗುರು ಬಸವಣ್ಣನವರ ಬೆಳ್ಳಿ ಮೂರ್ತಿಯನ್ನು ಕೊಡುವ ಮೂಲಕ ಸನ್ಮಾನಿಸಿ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಮೇ.10 ರಂದು ಬಸವ ಜಯಂತಿ ಕಾರ್ಯಕ್ರಮಕ್ಕೆ ಬಸವ ಜನ್ಮಸ್ಥಳ ಬಸವನಬಾಗೇವಾಡಿಗೆ ಆಗಮಿಸಬೇಕೆಂದು ಮನವಿ ಮಾಡಿಕೊಳ್ಳಲಾಯಿತು. ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.ಈ ಸಂದರ್ಭದಲ್ಲಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ,ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಮುಖಂಡರಾದ ಅನಿಲ ಅಗರವಾಲ, ಸಂಗಮೇಶ ಓಲೇಕಾರ, ಸಂಗಣ್ಣ ಕಲ್ಲೂರ, ಶೇಖರ ಗೊಳಸಂಗಿ, ಬಸವರಾಜ ಕೋಟಿ, ಬಸವರಾಜ ಹಾರಿವಾಳ, ರವಿ ರಾಠೋಡ, ಮಹಾಂತೇಶ ಆದಿಗೊಂಡ, ಸುಭಾಷ ಚಿಕ್ಕೊಂಡ, ಬಸವರಾಜ…

Read More

ಬಸವನಬಾಗೇವಾಡಿ: ತಾಲೂಕಿನ ಉಕ್ಕಲಿ ಗ್ರಾಮದಿಂದ ಹೊನ್ನುಟಗಿ ಗ್ರಾಮಕ್ಕೆ ಹೋಗುವ ರೈತರ ಜಮೀನುಗಳ ದಾರಿ ಸಮಸ್ಯೆ ಇತ್ಯರ್ಥಪಡಿಸುವಂತೆ ಆಗ್ರಹಿಸಿ ಸೋಮವಾರ ಉಕ್ಕಲಿ ಗ್ರಾಮದ ರೈತರು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಗ್ರಾಮದ ನೀಲಪ್ಪ ಮಸಳಿ ಮಾತನಾಡಿ, ಉಕ್ಕಲಿ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಜಮೀನು ಸ.ನಂ. 980 ಅಪ್ಪಾಸಾಹೇಬ ಕಾಸಪ್ಪ ಕಲಗೊಂಡ ಎಂಬುವವರಿಗೆ ಸೇರಿದೆ. ಇವರು ಕಳೆದ ಒಂದೂವರೆ-ಎರಡು ತಿಂಗಳಿನಿಂದ ಜಮೀನಿಗೆ ಹೊಂದಿಕೊಂಡಿರುವ ರಸ್ತೆಯನ್ನು ಆಳವಾಗಿ ಗುಂಡಿ ತೋಡಿ ಮುಂದೆ ಸಾಗುವ ರಸ್ತೆಯನ್ನು ಸ್ಥಗಿತಗೊಳಿಸಿರುತ್ತಾರೆ. ಈ ಮಾರ್ಗದಲ್ಲಿರುವ ಗ್ರಾಮದ ಸುಮಾರು 30-40 ರೈತರು ತಮ್ಮ ತಮ್ಮ ಜಮೀನುಗಳಿಗೆ ಸಂಚರಿಸಲು ಪರದಾಡುವಂತಾಗಿದೆ. ಉಕ್ಕಲಿಯಿಂದ ಹೊನ್ನುಟಗಿ ಗ್ರಾಮಕ್ಕೆ ಹೋಗುವ ಚಾಲ್ತಿಯಲ್ಲಿರುವ ರಸ್ತೆ ಸರಕಾರಿ ರಸ್ತೆಯಾಗಿರುತ್ತದೆ. ಈ ರಸ್ತೆ ಮಾರ್ಗವಾಗಿ ಹಲವಾರು ವರ್ಷಗಳಿಂದ ರೈತರು, ಜನರು ಸಂಚಾರ ಮಾಡುತ್ತಿದ್ದಾರೆ. ಇವರು ಈಗ ರಸ್ತೆಯನ್ನು ಬಂದ್ ಮಾಡಿರುವದರಿಂದಾಗಿ ತುಂಬಾ ತೊಂದರೆಯಾಗಿದೆ. ರಸ್ತೆ ಬಂದ್ ಮಾಡಿರುವದಿಂದಾಗಿ ಈ ರಸ್ತೆಯಲ್ಲಿರುವ ಜಮೀನಗಳ ರೈತರು ಬೆಳೆ ರಾಶಿಯನ್ನು ಕಷ್ಟಪಟ್ಟು ಮಾಡಿಕೊಂಡು ಬಂದಿದ್ದಾರೆ.…

Read More

ವಿಜಯಪುರ: ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಬಸವನ ಬಾಗೇವಾಡಿ ವಿಧಾನಸಭಾ ಮತಕ್ಷೇತ್ರದ ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ತಾಲೂಕಿಗೆ ಸಂಬಂಧಿಸಿದಂತೆ ಇದೇ ಮಾ.೧೩ರಂದು ಸಂಜೆ ೪ ಗಂಟೆಗೆ ಗ್ರಾಮೀಣ ವಿದ್ಯಾವರ್ಧಕ ಸಂಘ ನಿಡಗುಂದಿಯಲ್ಲಿ ೫ ಗ್ಯಾರಂಟಿ ಯೋಜನೆಗಳ ತಾಲೂಕಾ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.ಸಮಾವೇಶದಲ್ಲಿ ಬಸವನಬಾಗೇವಾಡಿ ಮತಕ್ಷೇತ್ರದ ಎಲ್ಲ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ವಿಜಯಪುರ ಉಪವಿಭಾಗಾಧಿಕಾರಿ ಶ್ವೇತಾ ಬಿಡಿಕರ ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ವಿಜಯಪುರ: ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ತಾಳಿಕೋಟಿ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಮಾರ್ಚ್ ೧೩ ರಂದು ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರ (ಮೊ:೯೩೬೪೦೬೨೫೫೭), ಪೊಲೀಸ್ ಇನ್‌ಸ್ಪೆಕ್ಟರ್-೧ (ಮೊ:೯೩೬೪೦೬೨೬೪೦), ಪೊಲೀಸ್ ಇನ್‌ಸ್ಪೆಕ್ಟರ್-೨ (ಮೊ:೯೩೬೪೦೬೨೬೩೯) ಇವರು ಅಂದು ಬೆಳಿಗ್ಗೆ ೧೧ ಗಂಟೆಯಿAದ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.ಅಹವಾಲು ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಭರ್ತಿ ಮಾಡಿದ ಮತ್ತು ನೋಟರಿಯಿಂದ ಅಫಿಡವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಅಧಿಕೃತವಾಗಿ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಹಾಗೂ ಲಂಚದ ಬೇಡಿಕೆ ಇನ್ನಿತರೆ ತೊಂದರೆ ನೀಡುತ್ತಿರುವ ಅಧಿಕಾರಿ-ಸಿಬ್ಬಂದಿಗಳ ವಿರುದ್ದ ಸಾರ್ವಜನಿಕರು ದೂರುಗಳನ್ನು ನೀಡಬಹುದಾಗಿದೆ. ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳಬಹುದಾದ ದೂರುಗಳನ್ನು ಅಲ್ಲಿನ ಸ್ಥಳೀಯ ಅಧಿಕಾರಿಗಳ ಸಹಯೋಗದಲ್ಲಿ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಹಾಗೂ ಸರಕಾರಿ ಅಧಿಕಾರಿಗಳು ಅಕ್ರಮ ಆಸ್ತಿ ಸಂಪಾದನೆ, ಸರಕಾರಿ ಹಣದ ದುರುಪಯೋಗ, ಕಳಪೆ ಕಾಮಗಾರಿ ಹಾಗೂ ಇತರೆ ಯಾವುದೇ ರೀತಿಯ ದೂರುಗಳಿಗಾಗಿ ಕಚೇರಿ ದೂರವಾಣಿ: ೦೮೩೫೨-೨೫೫೩೩೩, ೨೫೭೭೮೬, ೨೯೫೦೭೪ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಲೋಕಾಯುಕ್ತ ಪೊಲೀಸ್ ಅಧಿಕ್ಷಕರಾದ ಟಿ.ಮಲ್ಲೇಶ ಅವರು ಪ್ರಕಟಣೆಯಲ್ಲಿ…

Read More

ಅಕ್ಕಮಹಾದೇವಿ ಮಹಿಳಾ ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಭಿಮತ ವಿಜಯಪುರ: ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹಿಳೆಯರ ಕೊಡುಗೆ ಬಹಳ ಮುಖ್ಯ. ಆ ದೇಶದ ಮಹಿಳೆಯರು ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ಪಾಲ್ಗೊಂಡಾಗ ಮಾತ್ರ ಯಾವುದೇ ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ೧೫ನೇ ವಾರ್ಷಿಕ ಘಟಿಕೋತ್ಸವದಲ್ಲಿ  ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಹೇಳಿದ್ದರು, ನೀವು ಸಮಾಜದ ಪ್ರಗತಿಯ ಬಗ್ಗೆ ನಿಖರವಾಗಿ ತಿಳಿದುಕೊಳ್ಳಬೇಕಾದರೆ, ಆ ಸಮಾಜದ ಮಹಿಳೆಯರ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಿ. ಇಂದಿನ ಮಹಿಳೆಯರು ಕೌಟುಂಬಿಕ ಮತ್ತು ಸಾಮಾಜಿಕ ಜವಾಬ್ದಾರಿಗಳ ಜೊತೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ ಎಂದರು.ಲಿಂಗ ಸಮಾನತೆಯ ತತ್ವವನ್ನು ಭಾರತೀಯ ಸಂವಿಧಾನದ ಪೀಠಿಕೆ, ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು ಮತ್ತು ನಿರ್ದೇಶನ ತತ್ವಗಳಲ್ಲಿ ಪ್ರತಿಪಾದಿಸಲಾಗಿದೆ. ಸಂವಿಧಾನವು ಮಹಿಳೆಯರಿಗೆ ಸಮಾನ ಸ್ಥಾನಮಾನವನ್ನು ನೀಡುವುದು ಮಾತ್ರವಲ್ಲದೆ ಮಹಿಳೆಯರ ಸಬಲೀಕರಣಕ್ಕಾಗಿ…

Read More

ದೇವರಹಿಪ್ಪರಗಿ: ಬಿಜೆಪಿ ದೇವರಹಿಪ್ಪರಗಿ ಮಂಡಲದ ವಿವಿಧ ಮೋರ್ಚಾಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.ಮಂಡಲದ ಖಜಾಂಚಿಯಾಗಿ ಸೋಮಶೇಖರ ಹಿರೇಮಠ, ಪ್ರಧಾನ ಕಾರ್ಯದರ್ಶಿಯಾಗಿ ಮಹಾಂತೇಶ ಬಿರಾದಾರ(ಬೂದಿಹಾಳ ಡೋಣ), ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಕಾಶ ಡೋಣುರಮಠ(ಸಾತಿಹಾಳ), ಶಿವರಾಜ್ ತಳವಾರ, ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ರಮೇಶ ಈಳಗೇರ, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಆಕಾಶ ಕಬ್ಬಿನ(ಪಡಗಾನೂರ) ನೇಮಕಗೊಂಡಿದ್ದಾರೆ ಎಂದು ಮಂಡಲ ಪ್ರಕಟಣೆ ಮೂಲಕ ತಿಳಿಸಿದೆ.

Read More

ದೇವರಹಿಪ್ಪರಗಿ: ಬ್ಲಾಕ್ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ವಿಭಾಗದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಲಾಡ್ಲೇಮಶಾಕ ರೂಗಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಮೊಹರೆ ಹಣಮಂತ್ರಾಯ ವೃತ್ತದಲ್ಲಿ ಸನ್ಮಾನಿಸಿದರು.ಅಂಜುಮನ್ ಅಧ್ಯಕ್ಷ ಲಾಲಸಾಬ್ ಮಳಖೇಡ, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯರಾದ ಸುನೀಲ ಕನಮಡಿ, ಹುಸೇನ್ ಕೊಕಟನೂರ, ಬಂದೇನವಾಜ್ ಹಳ್ಳಿ, ಹಾಜಿಲಾಲ್ ಕರ್ನಾಚಿ, ಭಾಷಾಸಾಬ್ ಹಳ್ಳಿ, ಮೊಹಮ್ಮದ ರಫಿಕ್ ಮೋಮಿನ್, ಬಸವರಾಜ ಅತನೂರ, ಬಸಪ್ಪ ನಾಟೀಕಾರ, ಸಂಜೀವ ಬಜಂತ್ರಿ, ಹಸನ್ ನಧಾಫ್, ಎ.ಎಮ್.ನಧಾಫ್, ಯಮನೂರಿ ದೇವಣಗಾಂವ, ರಾಜು ಈಳಗೇರ, ಚಿದಾನಂದ ಹಡಪದ, ಅನೀಲ ಹಡಪದ, ಶಫೀಕ ಕಲಾಲ್ ಇದ್ದರು.

Read More

ಕರಿಭಂಟನಾಳ ಗುರುಗಂಗಾಧರೇಶ್ವರ ಜಾತ್ರಾಮಹೋತ್ಸವ | ರಾಷ್ಟ್ರೀಯ ಜನಜಾಗೃತಿ ಸಮಾವೇಶ | ಆರೋಗ್ಯಮೇಳ ಸಂವಾದ ಬಸವನಬಾಗೇವಾಡಿ: ನಾಡಿನಲ್ಲಿ ನಡೆಯುವ ಜಾತ್ರೆಗಳು ಜನರಲ್ಲಿ ಭಕ್ತಿ-ವೈರಾಗ್ಯ-ಜ್ಞಾನದ ಜಾಗೃತಿ ಮೂಡಿಸುತ್ತವೆ. ಜನರು ಜಾತ್ರೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಉತ್ಸಾಹ ಹೆಚ್ಚಿಸಿಕೊಳ್ಳುತ್ತಾರೆ. ಈ ಭಾಗದಲ್ಲಿ ನಡೆಯುವ ಕರಿಭಂಟನಾಳ ಗ್ರಾಮದ ಗುರುಗಂಗಾಧರೇಶ್ವರ ಜಾತ್ರಾಮಹೋತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಕಾರ್ಯಕ್ರಮಗಳನ್ನು ಶ್ರೀಮಠದ ಶ್ರೀಗಳು ಹಮ್ಮಿಕೊಳ್ಳುವ ಮೂಲಕ ವೈಶಿಷ್ಠವಾದ ಜಾತ್ರೆಯನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದು ಬೆಂಗಳೂರಿನ ಸರ್ಪಭೂಷಣಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ತಾಲೂಕಿನ ಕರಿಭಂಟನಾಳ ಗ್ರಾಮದ ಆರಾಧ್ಯದೈವ ಗುರುಗಂಗಾಧರೇಶ್ವರರ ಜಾತ್ರಾಮಹೋತ್ಸವದಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜನಜಾಗೃತಿ ಸಮಾವೇಶ ಹಾಗೂ ಆರೋಗ್ಯಮೇಳ ಸಂವಾದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತ್ರಿಕಾಲ ಜ್ಞಾನ ಸ್ವರೂಪರಾಗಿರುವ ಮಹಾತ್ಮರ ಜಾತ್ರೆಗಳು ನಾಡಿನಲ್ಲಿ ನಡೆಯುತ್ತವೆ. ಜಾತ್ರೆಗಳು ಜನರಲ್ಲಿ ಚೇತನ ಶಕ್ತಿ ತರುತ್ತವೆ. ಆರೋಗ್ಯವಾದ ಶರೀರ ಇರಬೇಕಾದರೆ ನಮ್ಮಲ್ಲಿ ಅರಿವಿನ ಶಕ್ತಿ ಇರಬೇಕು. ನಮ್ಮ ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಯಾವ ದುರ್ಗುಣಗಳು ಮೈಗೂಡಲು ಸಾಧ್ಯವಿಲ್ಲ. ಇಂದ್ರಿಯ ನಿಗ್ರಹ ಬಹುಮುಖ್ಯವಾಗಿದೆ. ಭಗವಂತನಲ್ಲಿ…

Read More

ಸಿಂದಗಿ: ತಾಲೂಕನ್ನು ವಿಭಜನೆ ಮಾಡಿದಾಗ ಸಿಂದಗಿಯಿಂದ ಕೇವಲ ಹನ್ನೆರಡು ಕಿಲೋಮೀಟರ್ ದೂರವಿರುವ ಗಬಸಾವಳಗಿ ಗ್ರಾಮವನ್ನು ಸುಮಾರು ೪೦ಕಿಮೀ. ದೂರವಿರುವ ಆಲಮೇಲ ತಾಲೂಕಿಗೆ ಸೇರಿಸಿದ್ದು ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಸ್ಥರಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ ಎಂದು ಪತ್ರಕರ್ತ ಮಲ್ಲಿಕಾರ್ಜುನ ಹಿರೇಮಠ ಹೇಳಿದರು.ಗಬಸಾವಾಳಗಿ ಗ್ರಾಮದಲ್ಲಿ ಹೋರಾಟ ವೇದಿಕೆಯ ಸದಸ್ಯರು ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಬಸಾವಳಗಿ ಹಾಗೂ ಬಿಸನಾಳ ಎರಡೂ ಗ್ರಾಮದ ಗ್ರಾಮಸ್ಥರು ಪ್ರತಿದಿನ ತಮ್ಮ ವ್ಯಾಪಾರ ವ್ಯವಹಾರಗಳಿಗಾಗಿ, ಯಾವುದೇ ಸರಕಾರಿ ಕಾರ್ಯಾಲಯ ಕೆಲಸಗಳಿಗಾಗಿ ಸಿಂದಗಿಯನ್ನೇ ಅವಲಂಬಿಸಿದ್ದಾರೆ. ಒಂದು ವೇಳೆ ಅಲಮೇಲ ತಾಲೂಕಿನಲ್ಲಿಯೇ ಮುಂದುವರಿಸಿದ್ದಾದರೆ ಗ್ರಾಮಸ್ಥರು ದಿನನಿತ್ಯ ಪರದಾಡುವಂತಾಗುತ್ತದೆ. ಈ ಎಲ್ಲ ಬವಣೆಗಳಿಗೆ ಕೊನೆ ಹಾಡಬೇಕಾದರೆ ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲೂಕಿಗೆ ಮರು ಸೇರ್ಪಡೆ ಮಾಡಬೇಕೆಂದು ತಾಲೂಕು ಆಡಳಿತ ಹಾಗೂ ಶಾಸಕರಲ್ಲಿ ಮನವಿ ಮಾಡಿದರು.ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಗಳನ್ನು ಆಲಮೇಲಕ್ಕೆ ಸೇರಿಸಿದ್ದು ಅವೈಜ್ಞಾನಿಕ ವಾಗಿದೆ.ಗಬಸಾವಳಗಿ, ಬಿಸನಾಳ ಗ್ರಾಮಗಳ ಸುತ್ತಲಿನ ಗ್ರಾಮಗಳಾದ ಹಂಚಿನಾಳ, ಗುತ್ತರಗಿ, ಭಂಟನೂರ ಗ್ರಾಮಗಳು…

Read More

ಆಲಮೇಲ: ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಅಧಿಕಾರಕ್ಕೆ ಬಂದು ೬ ತಿಂಗಳಲ್ಲಿ ೫ ಯೋಜನೆಗಳು ಜಾರಿಗೊಳಿಸಿದೆ. ಅದನ್ನು ಸಹಿಸಿಕೊಳ್ಳದ ವಿರೋದ ಪಕ್ಷದವರು ಲೋಕಸಭೆ ಚುನಾವಣೆ ಬಳಿಕ ೫ ಯೋಜನೆಗಳು ವಾರೆಂಟಿ ಆಗಲಿದೆ ಎನ್ನುತ್ತಿದ್ದಾರೆ. ಯಾವುದೆ ಕಾರಣಕ್ಕೂ ಯೋಜನೆಗಳು ನಿಲ್ಲದೇ ಮುಂದುವರೆಯಲಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಬಾನುವಾರ ಪಟ್ಟಣದಲ್ಲಿ ೨೦೧೮-೧೯ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನದಡಿ ಪಟ್ಟಣದ ದೇವರ ಅಗಸಿ, ದ್ವಾರ ಬಾಗಿಲು ನಿರ್ಮಾಣ ಮತ್ತು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ನೂತನ ತಾಲೂಕು ಕೇಂದ್ರವಾದ ಆಲಮೇಲ ಪಟ್ಟಣದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಇದೊಂದು ವಿಶೇಷ ತಾಲೂಕು ಕೇಂದ್ರವಾಗಿಸುವ ಬಗ್ಗೆ ನನ್ನ ತಂದೆಯವರ ಆಸೆಯಾಗಿತ್ತು. ನನ್ನ ಆಸೆಯೂ ಅದೇ ಆಗಿದೆ ಎಂದರು.೨೦೧೮-೧೯ನೇ ಸಾಲಿನಲ್ಲಿ ನನ್ನ ತಂದೆ ದಿ. ಎಂ.ಸಿ.ಮನಗೂಳಿ ಅವದಿಯಲ್ಲಿ ಎಸ್.ಎಫ್.ಸಿ ವಿಶೇಷ ಅನುದಾನದಡಿ ಮಂಜರಾಗಿರುವ ೫ ಕೋಟಿ ಕಾಮಗಾರಿಗೆ ಇಂದು ನಮ್ಮ ಸರ್ಕಾದಲ್ಲಿ ಅನುದಾನ ಮಂಜುರುಗೊಳಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಈ ಯೋಜನೆಯಡಿ ಪಟ್ಟಣದ ದೇವರ…

Read More