ಆಲಮೇಲ: ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಅಧಿಕಾರಕ್ಕೆ ಬಂದು ೬ ತಿಂಗಳಲ್ಲಿ ೫ ಯೋಜನೆಗಳು ಜಾರಿಗೊಳಿಸಿದೆ. ಅದನ್ನು ಸಹಿಸಿಕೊಳ್ಳದ ವಿರೋದ ಪಕ್ಷದವರು ಲೋಕಸಭೆ ಚುನಾವಣೆ ಬಳಿಕ ೫ ಯೋಜನೆಗಳು ವಾರೆಂಟಿ ಆಗಲಿದೆ ಎನ್ನುತ್ತಿದ್ದಾರೆ. ಯಾವುದೆ ಕಾರಣಕ್ಕೂ ಯೋಜನೆಗಳು ನಿಲ್ಲದೇ ಮುಂದುವರೆಯಲಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಬಾನುವಾರ ಪಟ್ಟಣದಲ್ಲಿ ೨೦೧೮-೧೯ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನದಡಿ ಪಟ್ಟಣದ ದೇವರ ಅಗಸಿ, ದ್ವಾರ ಬಾಗಿಲು ನಿರ್ಮಾಣ ಮತ್ತು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನೂತನ ತಾಲೂಕು ಕೇಂದ್ರವಾದ ಆಲಮೇಲ ಪಟ್ಟಣದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಇದೊಂದು ವಿಶೇಷ ತಾಲೂಕು ಕೇಂದ್ರವಾಗಿಸುವ ಬಗ್ಗೆ ನನ್ನ ತಂದೆಯವರ ಆಸೆಯಾಗಿತ್ತು. ನನ್ನ ಆಸೆಯೂ ಅದೇ ಆಗಿದೆ ಎಂದರು.
೨೦೧೮-೧೯ನೇ ಸಾಲಿನಲ್ಲಿ ನನ್ನ ತಂದೆ ದಿ. ಎಂ.ಸಿ.ಮನಗೂಳಿ ಅವದಿಯಲ್ಲಿ ಎಸ್.ಎಫ್.ಸಿ ವಿಶೇಷ ಅನುದಾನದಡಿ ಮಂಜರಾಗಿರುವ ೫ ಕೋಟಿ ಕಾಮಗಾರಿಗೆ ಇಂದು ನಮ್ಮ ಸರ್ಕಾದಲ್ಲಿ ಅನುದಾನ ಮಂಜುರುಗೊಳಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಈ ಯೋಜನೆಯಡಿ ಪಟ್ಟಣದ ದೇವರ ಅಗಸಿ ದ್ವಾರ ಬಾಗಿಲು ನಿರ್ಮಾಣಕ್ಕೆ ೫೦ ಲಕ್ಷ ಮಿಸಲಿಡಲಾಗಿತ್ತು. ಬಹುದಿನಗಳಿಂದ ನೆನಗೆಗುದಿಗೆ ಬಿದ್ದಿರುವ ದ್ವಾರ ಬಾಗಿಲು ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಲಾಗುವದು ಎಂದರು.
ಶಾಸಕನಾಗಿ ೯ ತಿಂಗಳ ಕಾಲಾವಧಿಯಲ್ಲಿ ಆಲಮೇಲ ಪಟ್ಟಣದ ಅಭಿವೃದ್ದಿಗೆ ರೂ.೨೦ ಕೋಟಿ ಮಂಜುರು ಮಾಡಿಸಲಾಗಿದೆ. ರೂ.೨೦ ಕೋಟಿ ವೆಚ್ಚದಲ್ಲಿ ಇಂಡಿ ರಸ್ತೆ ಪ್ರವಾಸಿ ಮಂದಿರದಿಂದ ಅಫಜಪಲೂರ ರಸ್ತೆಯ ಬಡದಾಳ ಪೆಟ್ರೋಲ ಬಂಕ್‌ವರೆಗೂ ರಸ್ತೆ, ವಿದ್ಯುತ್, ಮೂಲ ಸೌಕರ್ಯ ಅಳವಡಿಸಿ ಸೌಂದರ್ಯೀಕರಣಗೊಳಿಸುವ ಈ ಕಾಮಗಾರಿ ಆದಷ್ಟು ಬೇಗ ಪ್ರಾರಂಭಿಸಲಾಗುವುದು. ಹಾಗೂ ರೂ.೩.೫ ಕೊಟಿ ವೆಚ್ಚದಲ್ಲಿ ಪಟ್ಟಣದ ಪುರಾತನ ಕೆರೆ ಅಭಿವೃದ್ದಿಗೆ ಮಿಸಲಿಡಲಾಗಿದೆ. ಈ ಕಾಮಗಾರಿ ೧೫ ದಿನಗಳಲ್ಲಿ ಪ್ರಾರಂಭಿಸುತ್ತೇನೆ ಎಂದು ಹೇಳಿದರು.
ಹಿರೇಮಠದ ಚಂದ್ರಶೇಖರ ಶಿವಾಚಾಯರು, ಅರ್ಬನ ಬ್ಯಾಂಕಿನ ಅಧ್ಯಕ್ಷ ಶಿವುಕುಮಾರ ಗುಂದಗಿ, ಬ್ಲಾಕ್ ಕಾಂಗ್ರೆಸ್ & ಪ.ಪಂ ಸದಸ್ಯ ಅಧ್ಯಕ್ಷ ಸಾಧೀಕ ಸುಂಬಡ ಮಾತನಾಡಿದರು.
ಪ.ಪಂ ಮುಖ್ಯಾಧಿಕಾರಿ ಸುರೇಶ ನಾಯಕ, ಪಿಎಸ್‌ಐ ಕುಮಾರ ಹಾಡಕರ, ಮುಖಂಡರಾದ ಸೋಮನಾಥ ಮೇಲಿಮನಿ, ಸೌಕತಲಿ ಸುಂಬಡ, ಅಶೋಕ ಕೊಳಾರಿ, ಮಲ್ಲು ಅಚಲೇರಿ, ಸಂತೋಷ ಜರಕರ, ಬೀಮ ಬಮ್ಮನಳ್ಳಿ, ಶಶಿಧರ ಗಣಿಯಾರ, ದಯಾನಂದ ನಾರಾಯಣಕರ, ಮೈಬೂಬ ಮಸಳಿ, ಪ್ರಶಾಂತ ನಾಶಿ ಮುಂತಾದವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

