ಬಸವನಬಾಗೇವಾಡಿ: ತಾಲೂಕಿನ ಉಕ್ಕಲಿ ಗ್ರಾಮದಿಂದ ಹೊನ್ನುಟಗಿ ಗ್ರಾಮಕ್ಕೆ ಹೋಗುವ ರೈತರ ಜಮೀನುಗಳ ದಾರಿ ಸಮಸ್ಯೆ ಇತ್ಯರ್ಥಪಡಿಸುವಂತೆ ಆಗ್ರಹಿಸಿ ಸೋಮವಾರ ಉಕ್ಕಲಿ ಗ್ರಾಮದ ರೈತರು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ನೀಲಪ್ಪ ಮಸಳಿ ಮಾತನಾಡಿ, ಉಕ್ಕಲಿ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಜಮೀನು ಸ.ನಂ. 980 ಅಪ್ಪಾಸಾಹೇಬ ಕಾಸಪ್ಪ ಕಲಗೊಂಡ ಎಂಬುವವರಿಗೆ ಸೇರಿದೆ. ಇವರು ಕಳೆದ ಒಂದೂವರೆ-ಎರಡು ತಿಂಗಳಿನಿಂದ ಜಮೀನಿಗೆ ಹೊಂದಿಕೊಂಡಿರುವ ರಸ್ತೆಯನ್ನು ಆಳವಾಗಿ ಗುಂಡಿ ತೋಡಿ ಮುಂದೆ ಸಾಗುವ ರಸ್ತೆಯನ್ನು ಸ್ಥಗಿತಗೊಳಿಸಿರುತ್ತಾರೆ. ಈ ಮಾರ್ಗದಲ್ಲಿರುವ ಗ್ರಾಮದ ಸುಮಾರು 30-40 ರೈತರು ತಮ್ಮ ತಮ್ಮ ಜಮೀನುಗಳಿಗೆ ಸಂಚರಿಸಲು ಪರದಾಡುವಂತಾಗಿದೆ. ಉಕ್ಕಲಿಯಿಂದ ಹೊನ್ನುಟಗಿ ಗ್ರಾಮಕ್ಕೆ ಹೋಗುವ ಚಾಲ್ತಿಯಲ್ಲಿರುವ ರಸ್ತೆ ಸರಕಾರಿ ರಸ್ತೆಯಾಗಿರುತ್ತದೆ. ಈ ರಸ್ತೆ ಮಾರ್ಗವಾಗಿ ಹಲವಾರು ವರ್ಷಗಳಿಂದ ರೈತರು, ಜನರು ಸಂಚಾರ ಮಾಡುತ್ತಿದ್ದಾರೆ. ಇವರು ಈಗ ರಸ್ತೆಯನ್ನು ಬಂದ್ ಮಾಡಿರುವದರಿಂದಾಗಿ ತುಂಬಾ ತೊಂದರೆಯಾಗಿದೆ. ರಸ್ತೆ ಬಂದ್ ಮಾಡಿರುವದಿಂದಾಗಿ ಈ ರಸ್ತೆಯಲ್ಲಿರುವ ಜಮೀನಗಳ ರೈತರು ಬೆಳೆ ರಾಶಿಯನ್ನು ಕಷ್ಟಪಟ್ಟು ಮಾಡಿಕೊಂಡು ಬಂದಿದ್ದಾರೆ. ತಹಸೀಲ್ದಾರರು ರೈತರಿಗೆ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು.
ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಕರವೇ ಜಿಲ್ಲಾ ಯುವ ಘಟಕ ಅಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ ವೈ.ಎಸ್. ಸೋಮನಕಟ್ಟಿ ಅವರು ಉಕ್ಕಲಿ ಗ್ರಾಮದ ಸರ್ವೆ ನಂ.980 ಜಮೀನಿಗೆ ಹೊಂದಿಕೊಂಡಿರುವ ರಸ್ತೆಯನ್ನು ಆಳವಾಗಿ ಗುಂಡಿ ತೊಡಿ ಮುಂದೆ ಸಾಗುವ ರಸ್ತೆಯನ್ನು ಸ್ಥಗಿತಗೊಳಿಸಿದ್ದಾರೆ. ಈ ರಸ್ತೆ ಗ್ರಾಮ ನಕಾಶೆಯಲ್ಲಿ ಇರುವ ಇಲ್ಲದಿರುವ ಕುರಿತು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ವರದಿ ನೀಡಲು ಪತ್ರ ಬರೆದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಮಸಳಿ, ಗೌಡಪ್ಪ ಓಜಿ, ಬಾಬಾಸಾಹೇಬ ಮಸಳಿ, ಬಿ.ಎಸ್ .ತೆಲಸಂಗ, ಎಸ್ .ಎನ್. ಇಂಡಿ, ಎನ್. ಎಸ್. ಮದ್ದರಿಮಠ, ವಿ. ಬಿ. ಕುಲಕರ್ಣಿ, ಚಂದ್ರಾಮ ಭಜಂತ್ರಿ, ಎಂ.ಎ. ಮಸಳಿ,ರಮೇಶ ನರಸರೆಡ್ಡಿ, ಈರಣ್ಣ ಚಿನಿವಾಲ ಇತರರು ಇದ್ದರು.
Subscribe to Updates
Get the latest creative news from FooBar about art, design and business.
ಕಂದಕ ತೆರವುಗೊಳಿಸಿ ದಾರಿ ಸಮಸ್ಯೆ ಇತ್ಯರ್ಥಪಡಿಸಲು ರೈತರ ಆಗ್ರಹ
Related Posts
Add A Comment

