ಸಿಂದಗಿ: ತಾಲೂಕನ್ನು ವಿಭಜನೆ ಮಾಡಿದಾಗ ಸಿಂದಗಿಯಿಂದ ಕೇವಲ ಹನ್ನೆರಡು ಕಿಲೋಮೀಟರ್ ದೂರವಿರುವ ಗಬಸಾವಳಗಿ ಗ್ರಾಮವನ್ನು ಸುಮಾರು ೪೦ಕಿಮೀ. ದೂರವಿರುವ ಆಲಮೇಲ ತಾಲೂಕಿಗೆ ಸೇರಿಸಿದ್ದು ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಸ್ಥರಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ ಎಂದು ಪತ್ರಕರ್ತ ಮಲ್ಲಿಕಾರ್ಜುನ ಹಿರೇಮಠ ಹೇಳಿದರು.
ಗಬಸಾವಾಳಗಿ ಗ್ರಾಮದಲ್ಲಿ ಹೋರಾಟ ವೇದಿಕೆಯ ಸದಸ್ಯರು ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಬಸಾವಳಗಿ ಹಾಗೂ ಬಿಸನಾಳ ಎರಡೂ ಗ್ರಾಮದ ಗ್ರಾಮಸ್ಥರು ಪ್ರತಿದಿನ ತಮ್ಮ ವ್ಯಾಪಾರ ವ್ಯವಹಾರಗಳಿಗಾಗಿ, ಯಾವುದೇ ಸರಕಾರಿ ಕಾರ್ಯಾಲಯ ಕೆಲಸಗಳಿಗಾಗಿ ಸಿಂದಗಿಯನ್ನೇ ಅವಲಂಬಿಸಿದ್ದಾರೆ. ಒಂದು ವೇಳೆ ಅಲಮೇಲ ತಾಲೂಕಿನಲ್ಲಿಯೇ ಮುಂದುವರಿಸಿದ್ದಾದರೆ ಗ್ರಾಮಸ್ಥರು ದಿನನಿತ್ಯ ಪರದಾಡುವಂತಾಗುತ್ತದೆ. ಈ ಎಲ್ಲ ಬವಣೆಗಳಿಗೆ ಕೊನೆ ಹಾಡಬೇಕಾದರೆ ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲೂಕಿಗೆ ಮರು ಸೇರ್ಪಡೆ ಮಾಡಬೇಕೆಂದು ತಾಲೂಕು ಆಡಳಿತ ಹಾಗೂ ಶಾಸಕರಲ್ಲಿ ಮನವಿ ಮಾಡಿದರು.
ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಗಳನ್ನು ಆಲಮೇಲಕ್ಕೆ ಸೇರಿಸಿದ್ದು ಅವೈಜ್ಞಾನಿಕ ವಾಗಿದೆ.
ಗಬಸಾವಳಗಿ, ಬಿಸನಾಳ ಗ್ರಾಮಗಳ ಸುತ್ತಲಿನ ಗ್ರಾಮಗಳಾದ ಹಂಚಿನಾಳ, ಗುತ್ತರಗಿ, ಭಂಟನೂರ ಗ್ರಾಮಗಳು ಮರಳಿ ೧೬-೦೨-೨೦೨೨ರಂದು ಸಿಂದಗಿ ತಾಲೂಕಿಗೆ ಮರು ಸೇರ್ಪಡೆ ಆಗಿದೆ. ಅದೆ ರೀತಿ ಆಲಮೆಲ ತಾಲೂಕಿಗೆ ಸೇರಿಸಿದ ಗಾಬಸಾವಳಗಿ ಹಾಗೂ ಬಿಸಾನಾಳ ಈ ಎರಡು ಗ್ರಾಮಗಳನ್ನು ಮರಳಿ ಸಿಂದಗಿ ತಾಲೂಕಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಅಧ್ಯಕ್ಷ ಶಿವಲಿಂಗಪ್ಪಗೌಡ. ನಾ ಬಿರಾದಾರ, ಅಶೋಕ. ಮ ಬಿರಾದಾರ,
ಸುರೇಶಬಾಬು ಕೋಟಿಖಾನಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಭೀಮನಗೌಡ. ಎ ಬಿರಾದಾರ, ನಾನಾಗೌಡ. ಯ ಬಿರಾದಾರ, ಅಯ್ಯಪ್ಪಗೌಡ.ಪ ಬಿರಾದಾರ, ಪ್ರಭುಗೌಡ ಬಿರಾದಾರ, ಮಲ್ಲನಗೌಡ.ಪ ಬಿರಾದಾರ, ದೇವು. ಚ ಕೊಳಕುರ, ಅಣ್ಣಾರಾಯ. ರಾ ಪಪೀರಾಪುರ, ಮಲ್ಲಿಕಾರ್ಜುನ. ಬಿ ಬಿರಾದಾರ, ಪರಶುರಾಮ. ಸೊ ಅನಶೆಟ್ಟಿ, ಬಸನಗೌಡ. ನಾ ಬಿರಾದಾರ, ಮಲ್ಲನಗೌಡ, ಬಂಗಾರೆಪ್ಪಗೌಡ. ಬಾ ಬಿರಾದಾರ, ಶಿವಶರಣ ಹೇಳವರ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
ಗಬಸಾವಳಗಿಯನ್ನು ಸಿಂದಗಿ ತಾಲೂಕಿಗೆ ಸೇರಿಸಲು ಧರಣಿ ಸತ್ಯಾಗ್ರಹ
Related Posts
Add A Comment

