Author: editor.udayarashmi@gmail.com

ವಿಜಯಪುರ: ೨೦೨೩-೨೪ ನೆ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯ ಮತ್ಸ್ಯ ವಾಹಿನಿ ಯೋಜನೆ ಅಡಿಯಲ್ಲಿ ತ್ರಿಚಕ್ರ ವಾಹನಗಳನ್ನು ಪರವಾನಿಗೆ ಆಧಾರದಲ್ಲಿ ಪಡೆಯಲು ಆಸಕ್ತ ಮೀನು ಮಾರಾಟಗಾರರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.ಜಿಲ್ಲೆಗೆ ಒಟ್ಟು ೩ ಭೌತಿಕ ಗುರಿಗಳಿದ್ದು, ಆಯ್ಕೆಯಾಗುವ ಅರ್ಜಿದಾರರು ಇಲಾಖೆಗೆ ಭದ್ರತಾ ಠೇವಣಿ (ಸಾಮಾನ್ಯ ವರ್ಗದವರು ಒಂದು ಲಕ್ಷ ರೂಪಾಯಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರು ೫೦ ಸಾವಿರ ರೂಪಾಯಿ) ಮೊತ್ತವನ್ನು ನೀಡಬೇಕಿರುತ್ತದೆ. ಅರ್ಜಿ ಸಲ್ಲಿಸಲು ಮಾ.೧೯ ಕೊನೆಯ ದಿನವಾಗಿದೆ.ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ವಿಜಯಪುರ, ಮುದ್ದೇಬಿಹಾಳ (೯೮೮೬೮೨೦೭೬೧) ಇವರನ್ನು ಸಂಪರ್ಕಿಸಬಹುದು ಎಂದು ವಿಜಯಪುರ ಮೀನುಗಾರಿಕೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬಸವನಬಾಗೇವಾಡಿ: ಪಟ್ಟಣದ ಪುರಸಸಭೆ ವಾರ್ಡ ಸಂಖ್ಯೆ 5 ರಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ 2022-23 ನೇ ಸಾಲಿನ ಅಮೃತ ನಗರೋತ್ಥಾನ 4 ನೇ ಹಂತದ ಯೋಜನೆಯ ಅಡಿಯಲ್ಲಿ ಅಂದಾಜು ಮೊತ್ತ ರೂ.17.76 ಲಕ್ಷ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ಭೂಮಿಪೂಜಾ ಸಮಾರಂಭ ಬುಧವಾರ ಜರುಗಿತು.ಭೂಮಿ ಪೂಜೆ ನೆರವೇರಿಸಿದ ರಾಜ್ಯ ಸಹಕಾರಿ ಮಹಾ ಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಪಟ್ಟಣದ ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ ಸ್ವಚ್ಛತೆ, ವಿದ್ಯುತ್ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳನ್ನು ಸಚಿವ ಶಿವಾನಂದ ಪಾಟೀಲ ಹಾಗೂ ಪುರಸಭೆ ಆಡಳಿತ ಮಂಡಳಿ ಸಮರ್ಪಕವಾಗಿ ನೀಡಲಾಗುತ್ತಿದೆ. ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಗೆ ನಿತ್ಯವು ನಾನಾಕಡೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಪಟ್ಟಣದ ಸಾರ್ವಜನಿಕರ ಪ್ರಮುಖ ರಸ್ತೆಯಾದ ಈ ರಸ್ತೆ ಬಹುದಿನಗಳಿಂದ ಹಾಳಾಗಿತ್ತು. ಈಗ ಈ ರಸ್ತೆ ಮತ್ತು ಅದರ ಪಕ್ಕದಲ್ಲಿ ಚರಂಡಿ ನಿರ್ಮಾಣ ಮಾಡುವದರಿಂದ ಬಸವಜನ್ಮ ಸ್ಮಾರಕ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಮತ್ತು ಪಟ್ಟಣದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.…

Read More

ಸಿಂದಗಿ: ತಾಲೂಕಿನ ಬಬಲೇಶ್ವರ ಗ್ರಾಮದ ಬಿಜೆಪಿ ಯುವ ಮುಖಂಡ ರವಿಕಾಂತ ನಾಯ್ಕೋಡಿ ಅವರನ್ನು ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗದ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯರನ್ನಾಗಿ ಆಯ್ಕೆ ಮಾಡಿ ರಾಜ್ಯಾಧ್ಯಕ್ಷ ಆರ್. ರಘು (ಕೌಟಿಲ್ಯ) ಆದೇಶ ಹೊರಡಿಸಿದ್ದಾರೆ.ಈ ವೇಳೆ ಪತ್ರಿಕಾ ಹೇಳಿಕಾ ಹೇಳಿಕೆ ನೀಡಿದ ರವಿಕಾಂತ ಅವರು, ರಾಜ್ಯದ ನಾಯಕರು ನನ್ನ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟು ತಳಮಟ್ಟದಿಂದ ಪಕ್ಷ ಸಂಘಟಿಸುವ ಜವಾಬ್ದಾರಿ ನೀಡಿದ್ದಾರೆ. ಅವರ ನಿರೀಕ್ಷೆಗಳು ಹುಸಿ ಹೋಗದಂತೆ ಸರ್ವ ಸಮಾಜದ ಜನರೊಂದಿಗೆ ಒಳ್ಳೆಯ ಒಡನಾಟ ಇಟ್ಟುಕೊಂಡು ಪಕ್ಷದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತೇನೆ. ಮುಂಬರುವ ಲೋಕಸಭಾ ಹಾಗೂ ಜಿಪಂ, ತಾಪಂ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ ಎಂದಿದ್ದಾರೆ.

Read More

ಸಿಂದಗಿ: ಸಂವಿಧಾನವನ್ನೇ ತಿದ್ದುಪಡಿ ಮಾಡುತ್ತೇವೆ ಎಂದು ಹೇಳಿಕೆ ನೀಡಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗಡೆ ಅವರ ನಡೆಯನ್ನು ನಮ್ಮ ಶಾಖೆಯು ಖಂಡಿಸುತ್ತದೆ ಎನ್‌ಎಸ್‌ಯುಐ ಘಟಕದ ತಾಲೂಕಾಧ್ಯಕ್ಷ ಷಹಜಹಾನ ಗೋಲಗೇರಿ ಹೇಳಿದರು.ಪಟ್ಟಣದ ಅಂಬೇಡ್ಕರ್ ವೃತ್ತದ ಎದುರು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸಿಂದಗಿ ತಾಲೂಕು ಶಾಖೆಯ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಸಂಸದ ಅನಂತಕುಮಾರ ಹೆಗಡೆ ಅವರನ್ನು ಈ ಕೂಡಲೇ ಅಮಾನತ್ತು ಮಾಡಬೇಕು. ದೇಶದ ಪವಿತ್ರ ಗ್ರಂಥ ಎಂದು ನಂಬಿರುವ ಭಾರತದ ಸಂವಿಧಾನದ ಬಗ್ಗೆ ಬಹಳ ಹಗುರವಾಗಿ ಮಾತನಾಡಿ ಸಮಾಜದಲ್ಲಿ ಶಾಂತಿಯನ್ನು ಕದಡಿಸುವ ಜೊತೆಗೆ ವಿಷಬೀಜ ಬಿತ್ತುವ ಕಲಸವನ್ನು ಮಾಡುತ್ತಿರುವ ಉತ್ತರ ಕನ್ನಡ ಜಿಲ್ಲೆ ಸಂಸದ ಅನಂತಕುಮಾರ ಹೆಗಡೆ ಅವರನ್ನು ಈ ಕೂಡಲೇ ಬಂಧಿಸಿ ಕಾನೂನು ರೀತಿಯಲ್ಲಿ ಕ್ರಮವಹಿಸಬೇಕು ಎಂದು ತಾಲೂಕು ದಂಡಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರುಈ ವೇಳೆ ಉಪಾಧ್ಯಕ್ಷ ಸಿದ್ದು ಚಾವರ್, ಪ್ರಧಾನ ಕಾರ್ಯದರ್ಶಿ ಹುಸೇನ್ ಆಳಂದ್, ಸಂಗಮೇಶ್…

Read More

ಮುದ್ದೇಬಿಹಾಳ: ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಮತ್ತು ಯುವನಿಧಿಗಳ ಯೋಜನೆಗಳ ಲಾಭಗಳನ್ನು ಅರ್ಹ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ಸಾಂಸ್ಥಿಕ ಕಾರ್ಯವಿಧಾನಗಳನ್ನು ಜಾರಿಗೆ ತರಲು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ರಚಿಸಿದ್ದು, ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷರಾಗಿ ಸದ್ದಾಂ ಕುಂಟೋಜಿ ಅವರನ್ನು ಆಯ್ಕೆಮಾಡಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ.ಪ್ರಕಾಶ ಜೆ.ಸಿ ಆದೇಶಿಸಿದ್ದಾರೆ.

Read More

ವಿಜಯಪುರ: ನಗರದ ಮಹಾನಗರ ಪಾಲಿಕೆ ಆವರಣದ ಒಳಾಂಗಣದಲ್ಲಿ ಡಾ. ಬಿ. ಆರ್ ಅಂಬೇಡ್ಕರ ಅವರ ಪುತ್ತಳಿ (ಮೂರ್ತಿ ) ನಿರ್ಮಿಸಲು ಒತ್ತಾಯಿಸಿ ಬೀಮ ಸರಕಾರ ಸಂಘಟನಾ ಸಮಿತಿ ಇವರ ವತಿಯಿಂದ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಭೀಮ ಸರಕಾರ ಸಂಸ್ಥಾಪಕರು ಮತ್ತು ಜಿಲ್ಲಾಧ್ಯಕ್ಷ ಪರಶುರಾಮ ಚಲವಾದಿ ಮಾತನಾಡಿ, ಮಹಾ ನಾಯಕ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ ರವರು ನಮ್ಮ ದೇಶಕ್ಕೆ ಶ್ರೇಷ್ಠವಾದ ಸಂವಿಧಾನವನ್ನು ಕೊಟ್ಟಂತವರು. ಮತ್ತು ಎಲ್ಲ ಬಡವರು, ದೀನ ದುರ್ಬಲರ, ಎಲ್ಲ ಜನಾಂಗದವರ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನಾಯಕ. ಇವರ ಪುತ್ಥಳಿಯನ್ನು ಮಹಾನಗರ ಪಾಲಿಕೆಯ ಒಳಾಂಗಣದಲ್ಲಿ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರಾಹುಲ ಮಾನಕರ, ಉದಯಕುಮಾರ್ ಆಕಾಶ, ಇಸ್ಮಾಯಿಲ್ ಬೀಳಗಿ, ರಾಜು ಬುರ್ಲಿ, ಲಕ್ಷ್ಮಣ ಬ್ಯಾಲ್ಯಾಳ, ರಫೀಕ್ ಚಟ್ಟರ್ಕಿ, ಮತ್ತಿತರರು ಉಪಸ್ಥಿತರಿದ್ದರು.

Read More

ವಿಜಯಪುರಕ್ಕೆ ಬೃಹತ್ ಪವನ ವಿದ್ಯುತ್ ಘಟಕ | ಯುವಕರಿಗೆ ಉದ್ಯೋಗಾವಕಾಶ | ಕೈಗಾರಿಕಾ ಕ್ರಾಂತಿಗೆ ನಾಂದಿ ವಿಜಯಪುರ: ದೇಶದ ಎರಡನೇ ದೊಡ್ಡ ಪವನ ವಿದ್ಯುತ್ ಘಟಕವನ್ನು ತವರು ಜಿಲ್ಲೆ ವಿಜಯಪುರಕ್ಕೆ ತರಲು ಶ್ರಮಿಸುವುದರ ಮೂಲಕ ಜಿಲ್ಲೆಯಲ್ಲಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿ ಕೈಗಾರಿಕಾ ಕ್ರಾಂತಿಗೆ ಮುಂದಡಿ ಇಡುವುದರ ಮೂಲಕ ನಿರುದ್ಯೋಗಿ ಯುವಕರಿಗೆ ಬದುಕು ಕಟ್ಟಿಕೊಡಲು ಮುಂದಾಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಸಚಿವ ಡಾ. ಎಂ.ಬಿ ಪಾಟೀಲ್ ರವರ ಕಾರ್ಯ ಅಭಿನಂದನಾರ್ಹ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯ ವಕ್ತಾರ ಸಂಗಮೇಶ್ ಬಬಲೇಶ್ವರ ತಿಳಿಸಿದ್ದಾರೆ.ಬುಧವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಎಂ ಬಿ ಪಾಟೀಲರು ನೀರಾವರಿ ಸಚಿವರಾಗಿದ್ದಾಗಿನ (2013 ರಿಂದ 2018 ರ) ಅವಧಿಯು ಬಸವ ನಾಡಿನ ಜನತೆಯ ಪಾಲಿಗೆ ಅದೊಂದು ನೀರಾವರಿ ಕ್ಷೇತ್ರದ ಅಭಿವೃದ್ಧಿಯ ಸುವರ್ಣ ಯುಗವಾಗಿತ್ತು. ಎಂ ಬಿ ಪಾಟೀಲರ ಕರ್ತೃತ್ವ ಶಕ್ತಿ ಮತ್ತು ದೂರ ದೃಷ್ಟಿಯಿಂದಾಗಿ ಬರದ ನಾಡು ಬಂಗಾರದ ನಾಡಾಗಿ ಇಂದು ಕಡು…

Read More

ವ್ಯಂಗ್ಯೋತ್ಸವ’- ಶ್ರೀನಿವಾಸ ಜಾಲವಾದಿ, ಸುರಪುರ ‘ಏನು ಉಂಟು ನಿನ್ನಲ್ಲಿ ಮಾರಾಯ?’ ಕೇಳಿದ ರಬಡ್ಯಾ ಕಾಳ್ಯಾಗ’ಏನಲೇ ಯಪ್ಪಾ ಏನಾತು ನಿಂಗ?’ ಕಾಳ್ಯಾ ಆಶ್ಚಯದಿಂದ ಕೇಳಿದ’ಯಾಕ?”ಅಲ್ಲಾ, ಉಡುಪಿ ಕುಂದಾಪುರ ಕಡೆ ಹೋಗಿದ್ದೇನ?’ ಕೇಳ್ದ ಕಾಳ್ಯಾ’ಯಾಕಲೇ ತಮ್ಮಾ ಏನಾಯಿತು?’ ಅಂದ ರಬಡ್ಯಾ’ ಮತ್ತs ಹಂಗ ಮಾತಾಡಕತ್ತಿದಿ’ ಅಂದ ಕಾಳ್ಯಾ’ಏ ಯಾಂವ ಎಲ್ಲಿ ಯಾಕ ಹೋಗವಲ್ನಕಲೇ, ನಿಂದೇನ ಹಚ್ಚಿದಿ, ಮದ್ಲೆ ಕುಡ್ಯಾಕ ನೀರಿಲ್ಲಂತ ಮಂದಿ ಗೊಳ್ಯಾಡಕುಂತಾರು’ ಅಂತ ಗುಡುಮ್ಯಾ ಬೈದ’ಅಲ್ಲಾ ಬೆಂಗಳೂರಾಗ ನೀರs ಇಲ್ಲಂತ ಮತ್ತ ಹ್ಯಾಂಗ?’ ಅಂದಳು ರಾಣಿ’ಅಲ್ಲಿ ಕುಡ್ಯಾಕು ನೀರಿಲ್ಲ, ತಕ್ಕೊಳಾಕು ನೀರಿಲ್ಲ’ ಅಂದ ಕಾಕಾ’ ಮತ್ತ ಮಂದಿ ಯಾನ ಮಾಡ್ತಾರು?’ ಕೇಳಿದ ಟುಮ್ಯಾ’ಯಾನು ಇಲ್ಲ ಜಾನೂ ಇಲ್ಲ, ಸಬ್ ಖಾಲಿ ಕಾಗಜ್ ಲೇಕರ ಹಾತ್ ಸಾಫ್ ಕರ್ತಾರೆ’ ಅಂತ ಬಾಶಾ ನಕ್ಕ’ಏ ಯಾವ ಸಾಪ ಅಲೇ, ಹಾವು ಏನು?’ ಅಂದ ಶೌರಿ’ಏ ಮತ್ತ ನೀರಿಲ್ಲ ಅಂತಾರು….ಮತ್ತ ತಮಿಳನಾಡಿಗಿ ನೀರ ಬಿಟ್ಟಾರಂತಲಾ’ ಎಂದ ಗುಂಡ್ಯಾ’ಅವು ಹಂಗೇ ಏಳಲೇ, ಇಲ್ಲಿ ಇಲ್ಲ ಅನ್ನೊದು ಅಲ್ಲಿ ರಾತ್ರೋರಾತ್ರಿ…

Read More

ವಿಜಯಪುರ: ತನ್ನ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಕರುನಾಡನ್ನು ರಂಜಿಸುತ್ತ ಬಂದಿರುವ ಜೀ ಕನ್ನಡ ವಾಹಿನಿಯು, ಈಗ ತನ್ನ ಹಿಟ್ ರಿಯಾಲಿಟಿ ಶೋಗಳಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಗಳನ್ನ ಮತ್ತೆ ತೆರೆಗೆ ತರಲು ತಯಾರಿ ನಡೆಸಿದೆ.7 ಸೀಸನ್‌ಗಳನ್ನ ಯಶಸ್ವಿಯಾಗಿ ಪೂರೈಸಿರುವ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್ ಈಗ ತನ್ನ 8 ನೇ ಆವೃತ್ತಿಯೊಂದಿಗೆ ಮತ್ತೆ ಕರುನಾಡನ್ನ ಕುಣಿಸಲು ತಯಾರಾಗಿದೆ. ಈಗಾಗಲೇ ಸಾಕಷ್ಟು ಯುವ ನೃತ್ಯ ನಿರ್ದೇಶಕರನ್ನ ಸ್ಯಾಂಡಲ್ ವುಡ್ಡಿಗೆ ನೀಡಿರುವ ಈ ರಿಯಾಲಿಟಿ ಶೋ ಮತ್ತಷ್ಟು ನೃತ್ಯ ನಿರ್ದೇಶಕರನ್ನ ಹುಟ್ಟು ಹಾಕುವ ಕೆಲಸವನ್ನ ಈ ಆವೃತ್ತಿಯಲ್ಲಿ ಮತ್ತೆ ಮಾಡಲಿದೆ.ಇದರ ಜೊತೆಜೊತೆಗೆ ಸತತ 4 ಹಿಟ್ ಸೀಸನ್ನುಗಳನ್ನ ಕೊಟ್ಟಿರುವ ಕರುನಾಡಿನ ನೆಚ್ಚಿನ ರಿಯಾಲಿಟಿ ಶೋಗಳಲ್ಲಿ ಒಂದಾದ ಕಾಮಿಡಿ ಕಿಲಾಡಿಗಳು ಈಗಾಗಲೇ ಸಾಕಷ್ಟು ಕಾಮಿಡಿ ಕಲಾವಿದರನ್ನ ಕರುನಾಡಿಗೆ ನೀಡಿರುವುದು ಈಗ ಇತಿಹಾಸ. ವೇದಿಕೆಗಾಗಿ ಕಾಯುತ್ತಿರುವ ಅದೆಷ್ಟೋ ಹಾಸ್ಯ ನಟನಟಿಯರ ಕನಸನ್ನ ನನಸು ಮಾಡುತ್ತಿರುವ ಈ ರಿಯಾಲಿಟಿ ಶೋ ಈ ಬಾರಿ ಕಾಮಿಡಿ ಕಿಲಾಡಿಗಳು…

Read More

ವಿಜಯಪುರ ಜಿಲ್ಲಾ ಕೃಷಿಯೆತರ ಪತ್ತಿನ ಸಹಕಾರಿ ಸಂಘದ ಒಕ್ಕೂಟ ವಿಜಯಪುರ: ಜಿಲ್ಲಾ ಕೃಷಿಯೆತರ ಪತ್ತಿನ ಸಹಕಾರಿ ಸಂಘದ ಒಕ್ಕೂಟದ ಚುನಾವಣೆ ಅವಿರೋಧವಾಗಿ ನಡೆದಿದ್ದು, ಈ ಕೆಳಗಿನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪನಿಬಂಧಕರಾದ ಎಸ್ ಕೆ ಭಾಗ್ಯಶ್ರೀ ಘೋಷಿಸಿದ್ದಾರೆ.ವಿಜಯಪುರ ನಗರ ಮತಕ್ಷೇತ್ರದಿಂದ ಪತ್ರಕರ್ತ ದೀಪಕ ಶಿಂತ್ರೆ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯ ಗುರುಶಾಂತ ನಿಡೋಣಿ, ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ್ ಮಗ್ಗಿಮಠ, ಪರಶುರಾಮ ಚಿಂಚಲಿ, ಡಾ.ಸದಾಶಿವ ಪವಾರ, ನಬಿಸಾಬ್ ಕರ್ಜಗಿ, ಇಂಡಿ ತಾಲೂಕಾ ಮತಕ್ಷೇತ್ರ ದಿಂದ ಶ್ರೀಮಂತ ಇಂಡಿ, ವಿಜಯಪುರ ಗ್ರಾಮೀಣ ಕ್ಷೇತ್ರದಿಂದ ಬಸವರಾಜ ಬಂಡಿ, ಮುದ್ದೇಬಿಹಾಳ ಮತಕ್ಷೇತ್ರದಿಂದ ಬಸವರಾಜ ಇಸ್ಲಾಂಪುರ, ಬಸವನಬಾಗೇವಾಡಿಯಿಂದ ಸಿದ್ದಪ್ಪ ಬಾಳಗೊಂಡ, ಸಿಂದಗಿ ಮತಕ್ಷೇತ್ರ ದಿಂದ ಡಾ.ರಾಮರಾವ ನಾಯಕ ಚಡಚಣ ಕ್ಷೇತ್ರದಿಂದ ಬಸವರಾಜ ಸಾವಕಾರ ಅವಿರೋಧ ಆಯ್ಕೆಯಾಗಿದ್ದಾರೆ.

Read More