ಬಸವನಬಾಗೇವಾಡಿ: ಪಟ್ಟಣದ ಪುರಸಸಭೆ ವಾರ್ಡ ಸಂಖ್ಯೆ 5 ರಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ 2022-23 ನೇ ಸಾಲಿನ ಅಮೃತ ನಗರೋತ್ಥಾನ 4 ನೇ ಹಂತದ ಯೋಜನೆಯ ಅಡಿಯಲ್ಲಿ ಅಂದಾಜು ಮೊತ್ತ ರೂ.17.76 ಲಕ್ಷ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ಭೂಮಿಪೂಜಾ ಸಮಾರಂಭ ಬುಧವಾರ ಜರುಗಿತು.
ಭೂಮಿ ಪೂಜೆ ನೆರವೇರಿಸಿದ ರಾಜ್ಯ ಸಹಕಾರಿ ಮಹಾ ಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಪಟ್ಟಣದ ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ ಸ್ವಚ್ಛತೆ, ವಿದ್ಯುತ್ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳನ್ನು ಸಚಿವ ಶಿವಾನಂದ ಪಾಟೀಲ ಹಾಗೂ ಪುರಸಭೆ ಆಡಳಿತ ಮಂಡಳಿ ಸಮರ್ಪಕವಾಗಿ ನೀಡಲಾಗುತ್ತಿದೆ. ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಗೆ ನಿತ್ಯವು ನಾನಾಕಡೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಪಟ್ಟಣದ ಸಾರ್ವಜನಿಕರ ಪ್ರಮುಖ ರಸ್ತೆಯಾದ ಈ ರಸ್ತೆ ಬಹುದಿನಗಳಿಂದ ಹಾಳಾಗಿತ್ತು. ಈಗ ಈ ರಸ್ತೆ ಮತ್ತು ಅದರ ಪಕ್ಕದಲ್ಲಿ ಚರಂಡಿ ನಿರ್ಮಾಣ ಮಾಡುವದರಿಂದ ಬಸವಜನ್ಮ ಸ್ಮಾರಕ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಮತ್ತು ಪಟ್ಟಣದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಗುತ್ತಿಗೆದಾರರು ಶೀಘ್ರವೇ ಕಾಮಗಾರಿಯನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಿ ಜನರಿಗೆ,ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕೆಂದರು.
ಪುರಸಭೆ ವಾರ್ಡ ಸಂಖ್ಯೆ 5 ರ ಸದಸ್ಯ ಅಶೋಕ ಹಾರಿವಾಳ ಮಾತನಾಡಿದರು.
ಈ ಸಂದರ್ಭದಲ್ಲಿ ಶಿವಾನಂದ ಈರಕಾರಮುತ್ಯಾ, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಮುಖಂಡರಾದ ಬಸವರಾಜ ಗೊಳಸಂಗಿ, ಬಸವರಾಜ ಹಾರಿವಾಳ, ಸುರೇಶಗೌಡ ಪಾಟೀಲ, ಶೇಖರ ಗೊಳಸಂಗಿ, ಸುಭಾಸ ಚಿಕ್ಕೊಂಡ, ಶೇಖರಗೌಡ ಪಾಟೀಲ, ಸಂಕನಗೌಡ ಪಾಟೀಲ, ಬಸವರಾಜ ರಾಯಗೊಂಡ, ಸಂಗಮೇಶ ಓಲೇಕಾರ, ಕಲ್ಲು ಸೊನ್ನದ, ದಯಾನಂದ ಜಾಲಗೇರಿ, ಈರಣ್ಣ ವಂದಾಲ, ಎಂ.ಜಿ. ಆದಿಗೊಂಡ, ಮುದುಕಪ್ಪ ಬಸರಕೊಡ, ಸಂತೋಷ ಕೂಡಗಿ, ಜಗನ್ನಾಥ ಪತ್ತಾರ, ಬಸವರಾಜ ಬಿರಾದಾರ, ಗುತ್ತಿಗೆದಾರರಾದ ಕಲ್ಲನಗೌಡ ಬಿರಾದಾರ, ಶಾಂತು ರಾಠೋಡ, ಎಚ್.ಆರ್.ಬಾಗವಾನ, ಪುರಸಭೆ ಅಭಿಯಂತರ ಸಂತೋಷ ಗಿಡ್ಡಸನ್ನವರ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

