ವಿಜಯಪುರ: ನಗರದ ಮಹಾನಗರ ಪಾಲಿಕೆ ಆವರಣದ ಒಳಾಂಗಣದಲ್ಲಿ ಡಾ. ಬಿ. ಆರ್ ಅಂಬೇಡ್ಕರ ಅವರ ಪುತ್ತಳಿ (ಮೂರ್ತಿ ) ನಿರ್ಮಿಸಲು ಒತ್ತಾಯಿಸಿ ಬೀಮ ಸರಕಾರ ಸಂಘಟನಾ ಸಮಿತಿ ಇವರ ವತಿಯಿಂದ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಭೀಮ ಸರಕಾರ ಸಂಸ್ಥಾಪಕರು ಮತ್ತು ಜಿಲ್ಲಾಧ್ಯಕ್ಷ ಪರಶುರಾಮ ಚಲವಾದಿ ಮಾತನಾಡಿ, ಮಹಾ ನಾಯಕ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ ರವರು ನಮ್ಮ ದೇಶಕ್ಕೆ ಶ್ರೇಷ್ಠವಾದ ಸಂವಿಧಾನವನ್ನು ಕೊಟ್ಟಂತವರು. ಮತ್ತು ಎಲ್ಲ ಬಡವರು, ದೀನ ದುರ್ಬಲರ, ಎಲ್ಲ ಜನಾಂಗದವರ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನಾಯಕ. ಇವರ ಪುತ್ಥಳಿಯನ್ನು ಮಹಾನಗರ ಪಾಲಿಕೆಯ ಒಳಾಂಗಣದಲ್ಲಿ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಹುಲ ಮಾನಕರ, ಉದಯಕುಮಾರ್ ಆಕಾಶ, ಇಸ್ಮಾಯಿಲ್ ಬೀಳಗಿ, ರಾಜು ಬುರ್ಲಿ, ಲಕ್ಷ್ಮಣ ಬ್ಯಾಲ್ಯಾಳ, ರಫೀಕ್ ಚಟ್ಟರ್ಕಿ, ಮತ್ತಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

