ವಿಜಯಪುರ ಜಿಲ್ಲಾ ಕೃಷಿಯೆತರ ಪತ್ತಿನ ಸಹಕಾರಿ ಸಂಘದ ಒಕ್ಕೂಟ
ವಿಜಯಪುರ: ಜಿಲ್ಲಾ ಕೃಷಿಯೆತರ ಪತ್ತಿನ ಸಹಕಾರಿ ಸಂಘದ ಒಕ್ಕೂಟದ ಚುನಾವಣೆ ಅವಿರೋಧವಾಗಿ ನಡೆದಿದ್ದು, ಈ ಕೆಳಗಿನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪನಿಬಂಧಕರಾದ ಎಸ್ ಕೆ ಭಾಗ್ಯಶ್ರೀ ಘೋಷಿಸಿದ್ದಾರೆ.
ವಿಜಯಪುರ ನಗರ ಮತಕ್ಷೇತ್ರದಿಂದ ಪತ್ರಕರ್ತ ದೀಪಕ ಶಿಂತ್ರೆ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯ ಗುರುಶಾಂತ ನಿಡೋಣಿ, ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ್ ಮಗ್ಗಿಮಠ, ಪರಶುರಾಮ ಚಿಂಚಲಿ, ಡಾ.ಸದಾಶಿವ ಪವಾರ, ನಬಿಸಾಬ್ ಕರ್ಜಗಿ, ಇಂಡಿ ತಾಲೂಕಾ ಮತಕ್ಷೇತ್ರ ದಿಂದ ಶ್ರೀಮಂತ ಇಂಡಿ, ವಿಜಯಪುರ ಗ್ರಾಮೀಣ ಕ್ಷೇತ್ರದಿಂದ ಬಸವರಾಜ ಬಂಡಿ, ಮುದ್ದೇಬಿಹಾಳ ಮತಕ್ಷೇತ್ರದಿಂದ ಬಸವರಾಜ ಇಸ್ಲಾಂಪುರ, ಬಸವನಬಾಗೇವಾಡಿಯಿಂದ ಸಿದ್ದಪ್ಪ ಬಾಳಗೊಂಡ, ಸಿಂದಗಿ ಮತಕ್ಷೇತ್ರ ದಿಂದ ಡಾ.ರಾಮರಾವ ನಾಯಕ ಚಡಚಣ ಕ್ಷೇತ್ರದಿಂದ ಬಸವರಾಜ ಸಾವಕಾರ ಅವಿರೋಧ ಆಯ್ಕೆಯಾಗಿದ್ದಾರೆ.

