Author: editor.udayarashmi@gmail.com

ಅಫಜಲಪುರ: ಭೀಮಾ ನದಿ ಬತ್ತಿರುವದರಿಂದ ನೆರೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಅಥವಾ ತಾತ್ಕಾಲಿಕವಾಗಿ ಬಸವಸಾಗರ ಜಲಾಶಯದಿಂದ ಕಾಲುವೆ ಮೂಲಕ ನೀರು ಹರಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಲಬುರಗಿ ನಗರಕ್ಕೆ ಆಗಮಿಸಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರಿಗೆ ರೈತರು ಮನವಿ ಸಲ್ಲಿಸಿದರು.ಈ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಹೂಗಾರ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಮಳೆ ಇಲ್ಲದೆ ಬೆಳೆಗಳು ಸಂಪೂರ್ಣ ಹಾಳಾಗಿ ಹೋಗಿದ್ದು ಜನ, ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಹೀಗಾಗಿ ಬರಗಾಲ ಹಿಡಿದ ಪ್ರದೇಶ ಎಂದು ಘೋಷಿಸಿ ಪ್ರತಿ ಎಕರೆಗೆ ರೂ.25,000 ಅಂತೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಧರ್ಮರಾಜ್ ಸಾವು, ಭಾಗಣ್ಣ ಕುಂಬಾರ, ಕಂಟೆಪ್ಪ ಹನೂರು,ರೇವಣಸಿದ್ದಯ್ಯ, ಮಲ್ಲು ಸೋಲಾಪುರ ಸೇರಿದಂತೆ ಇತರರು ಇದ್ದರು.

Read More

ವಿಜಯಪುರ: ಪ್ರಾಥಮಿಕ ಹಾಗು ಪ್ರೌಢ ಹಂತದ ವಿದ್ಯಾಥಿ೯ಗಳಿಗೆ ಕನ್ನಡ ಕಡ್ಡಾಯಗೊಳಿಸಬೇಕು. ನಾಡಿನ ಎಲ್ಲ ವಿದ್ಯಾರ್ಥಿಗಳು ಕನ್ನಡ ಓದುವ, ಬರೆಯುವ ಹಾಗು ಮಾತನಾಡುವ ಸಾಮರ್ಥ್ಯವನ್ನು ಶಿಕ್ಷಕರು ಹಾಗು ಪಾಲಕರು ಬೆಳಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.ಮುದ್ದೇಬಿಹಾಳ ತಾಲೂಕಿನ ತಾರನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಹಾಸಿಂಪೀರ ವಾಲಿಕಾರ, ವಿದ್ಯಾರ್ಥಿಗಳು ಸಮಯ ವ್ಯರ್ಥಮಾಡದೆ ಅಭ್ಯಾಸದಲ್ಲಿ ನಿರತರಾಗಬೇಕು.ಮತ್ತು ಪಾಲಕರು ಕುಟುಂಬದಲ್ಲಿ ಕಲಿಕಾ ವಾತಾವರಣ ನಿರ್ಮಾಣಮಾಡಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತರಗತಿಗೆ ಅನುಗುಣವಾಗಿ ಸ್ಪರ್ಧಾತ್ಮಕ ಮನೋಭಾವ ಬೆಳಸಿಕೊಳ್ಳಬೇಕು ಎಂದರು.ತಾರನಾಳ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಬಸವರಾಜ ಬಿರಾದಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆಯ ಗುರುಮಾತೆ ಸುಮಲತಾ ಗಡಿಯಪ್ಪನವರು ಮೈಸೂರಿನ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಪ್ರಯಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಲ್ಲಿಯವರೆಗೆ ಬಂದು ಗೌರವಿಸಿದ್ದು ಶ್ಲಾಘನೀಯ ಎಂದರು.ಗೌರವ ಸನ್ಮಾನ ಸ್ವೀಕರಿಸಿದ ಸುಮಲತಾ ಗಡಿಯಪ್ಪನವರ ಮಾತನಾಡಿ, ಜಿಲ್ಲಾ ಕಸಾಪ ಅನೇಕ ಪ್ರತಿಭಾವಂತರಿಗೆ…

Read More

ಸಿಂದಗಿ: ಶರಣರ, ಸಂತರ ಮಹಾಂತರ ಜೀವನ ಚರಿತ್ರೆಗಳನ್ನು ಪಸರಿಸುವ ನಿಟ್ಟಿನಲ್ಲಿ ಪುರಾಣ ಪ್ರವಚನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.ತಾಲೂಕಿನ ಚಟ್ಟರಕಿ ಗ್ರಾಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ನಿಮಿತ್ಯವಾಗಿ ಹಮ್ಮಿಕೊಂಡ ಯಲ್ಲಾಲಿಂಗ ಮಹಾರಾಜರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಸಂಸಾರ, ಸಂಪತ್ತಿನೆಡೆಗೆ ಹೆಚ್ಚಿನ ಗಮನಹರಿಸದೆ ಧರ್ಮ, ಸಂಸ್ಕಾರ, ಸಂಸ್ಕೃತಿ ಪಸರಿಸುವ ಮಠ-ಮಂದಿರಗಳಲ್ಲಿ ಹಮ್ಮಿಕೊಳ್ಳುವ ಪುರಾಣ ಪ್ರವಚನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮುಖೇನ ಬದುಕು ಸಾರ್ಥಕಗೊಳಿಸಿಕೊಳ್ಳಬೇಕು ಎಂದವರು ಹೇಳಿದರು.ಈ ವೇಳೆ ಪುರಾಣಿಕರಾದ ಖಾಕಂಡಕಿಯ ಶಿವಾನಂದ ಶಾಸ್ತಿçಗಳು, ಪಂಪನಗೌಡ ಹಳಕೋಟೆ, ಮಲ್ಲಿಕಾರ್ಜುನ ಶಹಾಪೂರ, ಶಂಕ್ರಯ್ಯ ಹಿರೇಮಠ, ಅರ್ಜುನ ಮಾಲಗಾರ, ಪ್ರಭುಗೌಡ ಬಿರಾದಾರ, ಚಂದ್ರಶೇಖರ ಹರನಾಳ, ಮಲ್ಲನಗೌಡ, ಮಹಾಂತೇಶ ಮಣೂರ, ಗುರುಸ್ವಾಮಿ ಹಿರೇಮಠ ಸೇರಿದಂತೆ ಶ್ರೀಮಠದ ಭಕ್ತರು ಮತ್ತು ಹಿರಿಯರು ಇದ್ದರು.

Read More

ಮುದ್ದೇಬಿಹಾಳ: ಈಜಲು ಹೋದ ಯುವಕ ನೀರು ಪಾಲಾದ ಘಟನೆ ಪಟ್ಟಣದ ಕೆರೆಯಲ್ಲಿ ನಡೆದಿದೆ.ಮೃತ ದುರ್ದೈವಿಯನ್ನು ತಾಲೂಕಿನ ಶಿರೋಳ ಗ್ರಾಮದ ಶಿವನಗೌಡ ಬಿರಾದಾರ(೩೨) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಮಾ.೧೧ ರಂದೇ ಈಜಲು ಕೆರೆಗೆ ಇಳಿದಿದ್ದ ಎನ್ನಲಾಗಿದೆ.ದಡದಲ್ಲಿ ಬಟ್ಟೆ ಮತ್ತು ಚಪ್ಪಲಿಗಳನ್ನು ಗುರುತಿಸಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಿ ಅಗ್ನಿಶಾಮಕ ಮತ್ತು ಪೊಲೀಸರಿಗೆ ಕೆಲ ಸಾರ್ವಜನಿಕರು ನೀಡಿದ ದೂರಿದ ಹಿನ್ನೆಲೆ ಅಗ್ನಿಶಾಮಕದ ಸಹಾಯಕ ಠಾಣಾಧಿಕಾರಿ ರಮೇಶ ಚಳ್ಳಣ್ಣವರ, ಸಿಬ್ಬಂದಿಗಳಾದ ನಾಗೇಶ ರಾಠೋಡ, ರಾಜೇಂದ್ರ ಪೋದಾರ, ಭೀಮರಾವ ನಾಟೇಕಾರ, ಶಿವಾನಂದ ವಾಲಿಕಾರ, ಸಿದ್ದಣ್ಣ ಪೊಲೇಶಿ, ಮಂಜು ಬಳೆಗಾರ, ಮಸ್ತಾನ್ ಮುಲ್ಲಾ, ತುಕಾರಾಮ ರಾಠೋಡ, ಶ್ರೀಶೈಲ್ ಪಾಟೀಲ, ನಿಂಗಗೌಡ ಬಿರಾದಾರ, ರಂಗನಗೌಡ ಬಿರಾದಾರ, ಪ್ರಕಾಶ ಸುಬ್ಬಣ್ಣಗೋಳ, ಸದು ಹೊಕ್ರಾಣಿ, ವಿರುಪಾಕ್ಷಿ ಪೂಜಾರಿ, ಎಸ್.ಎಂ.ಲಮಾಣಿ, ಶ್ರೀಶೈಲ್ ಪಾಟೀಲ, ಜಹಾಂಗೀರಭಾಷಾ ಅಕ್ತರ ಒಳಗೊಂಡ ತಂಡ ಸತತ ಮೂರು ದಿನಗಳ ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.ಮೃತನು ಶೆರೆ ಕುಡಿದ…

Read More

ವಿಜಯಪುರ: ಭಾರತೀಯ ಜನತಾ ಪಾರ್ಟಿಯ ಸಹಕಾರ ಪ್ರಕೋಷ್ಠದ ರಾಜ್ಯ ಸಹ- ಸಂಚಾಲಕರನ್ನಾಗಿ ಸಂಜಯ ಪಾಟೀಲ, ಕನಮಡಿ ಅವರನ್ನು ನಿಯುಕ್ತಿ ಮಾಡಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶ ನೀಡಿದ್ದಾರೆ.ಈ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ, ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸದೃಢಗೊಳಿಸುತ್ತಾ, ಮುಂಬರುವ ಎಲ್ಲ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಸತತ ಶ್ರಮಿಸಬೇಕೆಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಭಾರತೀಯ ಜನತಾ ಪಾರ್ಟಿಯ ವ್ಯಾಪಾರ-ವಾಣಿಜ್ಯ ಪ್ರಕೋಷ್ಠದ ರಾಜ್ಯ ಸಂಚಾಲಕರನ್ನಾಗಿ ವಿಜಯಕುಮಾರ ಕುಡಿಗನೂರ ಅವರನ್ನು ನಿಯುಕ್ತಿ ಮಾಡಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶ ನೀಡಿದ್ದಾರೆ.ಈ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ, ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸದೃಢಗೊಳಿಸುತ್ತಾ, ಮುಂಬರುವ ಎಲ್ಲ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಸತತ ಶ್ರಮಿಸಬೇಕೆಂದು ಅವರು ತಿಳಿಸಿದ್ದಾರೆ.

Read More

ಇಂಡಿ: ವಿಜಯಪುರ ಜಿಲ್ಲೆಯಲ್ಲಿರುವ ಒಟ್ಟು ಪ್ರದೇಶದಲ್ಲಿ ಈ ಹಿಂದೆ ೦.೧೭ ಅರಣ್ಯ ಪ್ರದೇಶವಿದ್ದದ್ದು ಈಗ ೦.೨೦ ಹೆಕ್ಟೇರ ಪ್ರದೇಶದಲ್ಲಿ ಅರಣ್ಯ ಅಭಿವೃದ್ಧಿಯಾಗಿದೆ ಎಂದುಸಾಮಾಜಿಕ ಅರಣ್ಯ ವಿಭಾಗ ವಿಜಯಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ವನಿತಾ ಹೇಳಿದರು.ಸಾಮಾಜಿಕ ಅರಣ್ಯ ವಲಯ ವತಿಯಿಂದ ತಾಲೂಕಿನ ಬಬಲಾದ ನರ್ಸರಿಯಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಕೃಷಿ ಅರಣ್ಯದ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿದರು.ಯುವ ಜನತೆಗೆ ದುಡಿಯುವ ಕೈಗಳಿಗೆ ಉತ್ತಮ ಬೆಳವಣೆಗೆಗೆ ಹಾಗೂ ಅದರಲ್ಲೂ ಸಮಾಜದ ಅಂಚಿನಲ್ಲಿರುವ ಗುಂಪುಗಳ ಅಂತರ್ಗತ ಬೆಳವಣೆಗೆಯನ್ನು ವೃದ್ಧಿಸಲು ಎಲ್ಲ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಒಂದೇ ಸೂರನಡಿ ಸೃಜಿಸಲಾಗಿರುತ್ತದೆ ಎಂದರು.ಇಂಡಿ ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ಮಂಜುನಾಥ ಧುಳೆ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ರೇಷ್ಮೆ ಇಲಾಖೆಯ ತೇಲಿ, ಉಪ ವಲಯ ಅರಣ್ಯಾಧಿಕಾರಿ ಲಕ್ಷ್ಮಣ ನಾದ, ರಾಜೇಂದ್ರ ಹುನ್ನೂರ ಮಾತನಾಡಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಪ್ರವೀಣ್ ಹಾಗೂ ದಾಂಡೇಲಿ ಪೇಪರ್ ಮಿಲ್ಸ ಅಧಿಕಾರಿ ಇಮ್ರಾನ್ ರವರು ಭಾಗವಹಿಸಿದ್ದರು.ಈ ಕಾರ್ಯಾರದಲ್ಲಿ ಬಬಲಾದ,…

Read More

ಇಂಡಿ: ಬಿಜೆಪಿ ಪಕ್ಷದ ಪ್ರಧಾನಿಯ ಗುರಿ, ಇಚ್ಛೆ, ಕನಸು ನನಸು ಮಾಡಿರುವ ಕರ್ನಾಟಕದ ಒಬ್ಬ ಸಂಸದ ಎಂದರೇ ತಪ್ಪೇನಿಲ್ಲ. ಅಂತಹ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವ ಬಗ್ಗೆ ಅನುಮಾನಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.ಪತ್ರಿಕಾ ಮಾದ್ಯಮದ ಮೂಲಕ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡಲು ಸಂಘದ ಪದಾಧಿಕಾರಿಗಳು ಬುಧವಾರ ಆಗ್ರಹಿಸಿದರು.ಸುಮಾರು ವರ್ಷಗಳ ಪ.ಪಂ ಮೀಸಲಾತಿಗಾಗಿ ಅನೇಕ ರೀತಿಯಲ್ಲಿ ತಳವಾರ & ಪರಿವಾರ ಸಮುದಾಯ ಹೋರಾಟ, ಪ್ರತಿಭಟನೆ ಮಾಡಿದ್ರೂ ಯಾರೂ ನ್ಯಾಯ ಕೊಡಿಸುವ ಪ್ರಯತ್ನ ಮಾಡಿರಲಿಲ್ಲ. ಆದರೆ ಸಂಸದ ಪ್ರತಾಪ್ ಸಿಂಹ ನುಡಿದಂತೆ ನಡೆದು ಈ ಸಮುದಾಯಕ್ಕೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಶೋಷಿತ ಸಮುದಾಯ ಬಗ್ಗೆ ಇರುವ ಕಾಳಜಿ ಅರ್ಥವಾಗುತ್ತೆ. ಬೆಂಗಳೂರು ಮತ್ತು ಮೈಸೂರು ದಶಪಥ ಹೆದ್ದಾರಿ, ಐತಿಹಾಸಿಕ ಮೈಸೂರು ಜಿಲ್ಲೆಗೆ 13 ರೈಲುಗಳು ಪ್ರಯಾಣ ಬೆಳೆಸುವಂತೆ ಮಾಡಿರುವ…

Read More

ಮುದ್ದೇಬಿಹಾಳ: ಹಾಲಿನಂತೆ ಹೆಣ್ಣುಮಗಳು ಬೇರೆಬೇರೆ ನಾಮಗಳಿಂದ ಗುರುತಿಸಿಕೊಂಡು, ಕೆಲಸ ನಿರ್ವಹಿಸುತ್ತಾಳೆಂದು ಶಿಕ್ಷಕಿ ಸರೋಜ ಕಿತ್ತೂರ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಮಾತೃಭಾರತಿ ಪರಿಷತ್ತಿನ ಅಡಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ತಯುಕ್ತ ಸಾಧಕ ಮಾತೋಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸ್ತ್ರೀಯನ್ನು ದೇವತೆಯಂತೆ ಪೂಜಿಸುವ ನಾಡು ನಮ್ಮ ಭಾರತವಾಗಿದೆ. ಹೆಣ್ಣು ಹೆಣ್ಣಿಗೆ ಶತ್ರು ಆಗಬಾರದು. ಹೆಣ್ಣು ಸಹೋದರಿ, ಮಡದಿ, ತಾಯಿ ಇತ್ಯಾದಿಯಾಗಿ ತನ್ನ ಕೆಲಸವನ್ನು ನಿರ್ವಹಿಸುತ್ತಾಳೆ. ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಇವತ್ತಿನ ದಿನ ಮಹಿಳೆ ಸಾಧನೆ ಮಾಡಲು ಹೊರಟಿದ್ದಾಳೆ. ಮಹಿಳಾ ಸಬಲೀಕರಣಕ್ಕಾಗಿ ಹೋರಾಡಬೇಕಾಗಿದೆ. ನಾವೆಲ್ಲ ದೇಹ ಎನ್ನುವ ಭಾವನೆಗಿಂತ ದೇಹಿಯೆನ್ನುವ ಭಾವನೆಯನ್ನು ಅರಿತುಕೊಳ್ಳಬೇಕಾಗಿದೆ. ಆವಾಗಲೆ ನಮ್ಮ ಪ್ರಯತ್ನ ಯಶಸ್ಸನ್ನು ಕಾಣುತ್ತದೆ ಎಂದರು.ಜಾನಪದ ಸಾಹಿತ್ಯದ ಮೂಲಕ ತಾಲೂಕಿನಾದ್ಯಂತ ಚಿರಪರಿಚಿತರಾದ ಶಿವಮ್ಮ ಬಿರಾದಾರ ಮತ್ತು ಲಕ್ಷ್ಮೀ ವಾಲಿಕಾರ ಈರ್ವರಿಗೆ ಸಾಧಕ ಮಾತೋಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಂಸ್ಥೆಯ ನಿರ್ದೇಶಕಿ ಲೀಲಾ ಭಟ್ಟ ಅಧ್ಯಕ್ಷೀಯ ನುಡಿಗಳನ್ನಾಡಿದರು.ಈ ವೇಳೆ ಸಂಸ್ಥೆಯ ಅಧ್ಯಕ್ಷ ಬಿ.ಪಿ.ಕುಲಕರ್ಣಿ, ಸಂಸ್ಥೆಯ ಕಾರ್ಯದರ್ಶಿ ಪ್ರಭು ಕಡಿ,…

Read More

ವಿಜಯಪುರ: ಇಂಡಿ ವಿಭಾಗದ ತಡವಲಗಾ ೩೩/೧೧ ಕೆವ್ಹಿ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ತುರ್ತು ಕಾಮಗಾರಿ ಕೈಗೊಂಡಿರುವುದರಿAದ ಸದರಿ ೩೩/೧೧ ಕೆವ್ಹಿ ಮೇಲೆ ಸರಬರಾಜಾಗುವ ಎಲ್ಲ ೧೧ಕೆವ್ಹಿ ಮಾರ್ಗಗಳಿಗೆ ಮಾ.೧೪ ಹಾಗೂ ೧೫ ರಂದು ಮತ್ತು ಇಂಡಿ ವಿಭಾಗದ ತಾಂಬಾ ೩೩/೧೧ ಕೆವ್ಹಿ ಮಾರ್ಗಗಳಿಗೆ ಮಾ.೧೪ ರಂದು ಅನಿಯಮಿತ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಇಂಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎ.ಬಿರಾದಾರ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Read More