ಮುದ್ದೇಬಿಹಾಳ: ಈಜಲು ಹೋದ ಯುವಕ ನೀರು ಪಾಲಾದ ಘಟನೆ ಪಟ್ಟಣದ ಕೆರೆಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ತಾಲೂಕಿನ ಶಿರೋಳ ಗ್ರಾಮದ ಶಿವನಗೌಡ ಬಿರಾದಾರ(೩೨) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಮಾ.೧೧ ರಂದೇ ಈಜಲು ಕೆರೆಗೆ ಇಳಿದಿದ್ದ ಎನ್ನಲಾಗಿದೆ.
ದಡದಲ್ಲಿ ಬಟ್ಟೆ ಮತ್ತು ಚಪ್ಪಲಿಗಳನ್ನು ಗುರುತಿಸಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಿ ಅಗ್ನಿಶಾಮಕ ಮತ್ತು ಪೊಲೀಸರಿಗೆ ಕೆಲ ಸಾರ್ವಜನಿಕರು ನೀಡಿದ ದೂರಿದ ಹಿನ್ನೆಲೆ ಅಗ್ನಿಶಾಮಕದ ಸಹಾಯಕ ಠಾಣಾಧಿಕಾರಿ ರಮೇಶ ಚಳ್ಳಣ್ಣವರ, ಸಿಬ್ಬಂದಿಗಳಾದ ನಾಗೇಶ ರಾಠೋಡ, ರಾಜೇಂದ್ರ ಪೋದಾರ, ಭೀಮರಾವ ನಾಟೇಕಾರ, ಶಿವಾನಂದ ವಾಲಿಕಾರ, ಸಿದ್ದಣ್ಣ ಪೊಲೇಶಿ, ಮಂಜು ಬಳೆಗಾರ, ಮಸ್ತಾನ್ ಮುಲ್ಲಾ, ತುಕಾರಾಮ ರಾಠೋಡ, ಶ್ರೀಶೈಲ್ ಪಾಟೀಲ, ನಿಂಗಗೌಡ ಬಿರಾದಾರ, ರಂಗನಗೌಡ ಬಿರಾದಾರ, ಪ್ರಕಾಶ ಸುಬ್ಬಣ್ಣಗೋಳ, ಸದು ಹೊಕ್ರಾಣಿ, ವಿರುಪಾಕ್ಷಿ ಪೂಜಾರಿ, ಎಸ್.ಎಂ.ಲಮಾಣಿ, ಶ್ರೀಶೈಲ್ ಪಾಟೀಲ, ಜಹಾಂಗೀರಭಾಷಾ ಅಕ್ತರ ಒಳಗೊಂಡ ತಂಡ ಸತತ ಮೂರು ದಿನಗಳ ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತನು ಶೆರೆ ಕುಡಿದ ನಶೆಯಲ್ಲಿ ಈಜಲು ಹೋಗಿದ್ದು ಘಟನೆ ಆಕಸ್ಮಿಕವಾಗಿದೆ. ಮೃತನ ಮರಣದಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೃತನ ಸಹೋದರ ಮುದ್ದೇಬಿಹಾಳ ಪೊಲೀಸರಿಗೆ ವರದಿ ನೀಡಿದ್ದಾನೆ.
Subscribe to Updates
Get the latest creative news from FooBar about art, design and business.
Related Posts
Add A Comment

