ಸಿಂದಗಿ: ಶರಣರ, ಸಂತರ ಮಹಾಂತರ ಜೀವನ ಚರಿತ್ರೆಗಳನ್ನು ಪಸರಿಸುವ ನಿಟ್ಟಿನಲ್ಲಿ ಪುರಾಣ ಪ್ರವಚನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.
ತಾಲೂಕಿನ ಚಟ್ಟರಕಿ ಗ್ರಾಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ನಿಮಿತ್ಯವಾಗಿ ಹಮ್ಮಿಕೊಂಡ ಯಲ್ಲಾಲಿಂಗ ಮಹಾರಾಜರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಸಂಸಾರ, ಸಂಪತ್ತಿನೆಡೆಗೆ ಹೆಚ್ಚಿನ ಗಮನಹರಿಸದೆ ಧರ್ಮ, ಸಂಸ್ಕಾರ, ಸಂಸ್ಕೃತಿ ಪಸರಿಸುವ ಮಠ-ಮಂದಿರಗಳಲ್ಲಿ ಹಮ್ಮಿಕೊಳ್ಳುವ ಪುರಾಣ ಪ್ರವಚನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮುಖೇನ ಬದುಕು ಸಾರ್ಥಕಗೊಳಿಸಿಕೊಳ್ಳಬೇಕು ಎಂದವರು ಹೇಳಿದರು.
ಈ ವೇಳೆ ಪುರಾಣಿಕರಾದ ಖಾಕಂಡಕಿಯ ಶಿವಾನಂದ ಶಾಸ್ತಿçಗಳು, ಪಂಪನಗೌಡ ಹಳಕೋಟೆ, ಮಲ್ಲಿಕಾರ್ಜುನ ಶಹಾಪೂರ, ಶಂಕ್ರಯ್ಯ ಹಿರೇಮಠ, ಅರ್ಜುನ ಮಾಲಗಾರ, ಪ್ರಭುಗೌಡ ಬಿರಾದಾರ, ಚಂದ್ರಶೇಖರ ಹರನಾಳ, ಮಲ್ಲನಗೌಡ, ಮಹಾಂತೇಶ ಮಣೂರ, ಗುರುಸ್ವಾಮಿ ಹಿರೇಮಠ ಸೇರಿದಂತೆ ಶ್ರೀಮಠದ ಭಕ್ತರು ಮತ್ತು ಹಿರಿಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

