ವಿಜಯಪುರ: ಪ್ರಾಥಮಿಕ ಹಾಗು ಪ್ರೌಢ ಹಂತದ ವಿದ್ಯಾಥಿ೯ಗಳಿಗೆ ಕನ್ನಡ ಕಡ್ಡಾಯಗೊಳಿಸಬೇಕು. ನಾಡಿನ ಎಲ್ಲ ವಿದ್ಯಾರ್ಥಿಗಳು ಕನ್ನಡ ಓದುವ, ಬರೆಯುವ ಹಾಗು ಮಾತನಾಡುವ ಸಾಮರ್ಥ್ಯವನ್ನು ಶಿಕ್ಷಕರು ಹಾಗು ಪಾಲಕರು ಬೆಳಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಮುದ್ದೇಬಿಹಾಳ ತಾಲೂಕಿನ ತಾರನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಹಾಸಿಂಪೀರ ವಾಲಿಕಾರ, ವಿದ್ಯಾರ್ಥಿಗಳು ಸಮಯ ವ್ಯರ್ಥಮಾಡದೆ ಅಭ್ಯಾಸದಲ್ಲಿ ನಿರತರಾಗಬೇಕು.ಮತ್ತು ಪಾಲಕರು ಕುಟುಂಬದಲ್ಲಿ ಕಲಿಕಾ ವಾತಾವರಣ ನಿರ್ಮಾಣಮಾಡಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತರಗತಿಗೆ ಅನುಗುಣವಾಗಿ ಸ್ಪರ್ಧಾತ್ಮಕ ಮನೋಭಾವ ಬೆಳಸಿಕೊಳ್ಳಬೇಕು ಎಂದರು.
ತಾರನಾಳ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ
ಬಸವರಾಜ ಬಿರಾದಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆಯ ಗುರುಮಾತೆ ಸುಮಲತಾ ಗಡಿಯಪ್ಪನವರು ಮೈಸೂರಿನ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಪ್ರಯಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಲ್ಲಿಯವರೆಗೆ ಬಂದು ಗೌರವಿಸಿದ್ದು ಶ್ಲಾಘನೀಯ ಎಂದರು.
ಗೌರವ ಸನ್ಮಾನ ಸ್ವೀಕರಿಸಿದ ಸುಮಲತಾ ಗಡಿಯಪ್ಪನವರ ಮಾತನಾಡಿ, ಜಿಲ್ಲಾ ಕಸಾಪ ಅನೇಕ ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸುವ ಮೂಲಕ ಸ್ಪೂರ್ತಿ
ನೀಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸೌಮ್ಯ ಚಿಂಚೊಳ್ಳಿ, ಸೃಷ್ಟಿ ತಾರನಾಳ, ರಸೂಲಸಾಬ ಡವಳಗಿ, ರಿಯಾನಾ ದೊಡ್ಡಮನಿ, ಸಾಗರ ಚಲವಾದಿ, ತೇಜಶ್ವಿನಿ ಚಿಂಚೊಳ್ಳಿ ಸಾಕ್ಷಿ ಚಲುವಾದಿ ಕವನ ವಾಚಿಸಿದರು.
ಮುಖ್ಯ ಅತಿಥಿಗಳಾಗಿ ಅಗಸಬಾಳ ಶಾಲೆ ಮುಖ್ಯ ಅಧ್ಯಾಪಕ ಶ್ರೀಶೈಲ ಸಜ್ಜನ. ಹಳ್ಳೂರ ಶಾಲೆ ಮುಖ್ಯ ಅಧ್ಯಾಪಕ ಶಿವಪುತ್ರಪ್ಪ ಸಜ್ಜನ ವೇದಿಕೆಯ ಮೇಲಿದ್ದರು.
ಶಿಕ್ಷಕರರಾದ ದುಂಡಪ್ಪಗೌಡ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಲಾಲಸಾಬ ನದಾಫ ನಿರೂಪಿಸಿದರು.
ವಿಶ್ವನಾಥ ಕುಲಕರ್ಣಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

