ಮುದ್ದೇಬಿಹಾಳ: ಹಾಲಿನಂತೆ ಹೆಣ್ಣುಮಗಳು ಬೇರೆಬೇರೆ ನಾಮಗಳಿಂದ ಗುರುತಿಸಿಕೊಂಡು, ಕೆಲಸ ನಿರ್ವಹಿಸುತ್ತಾಳೆಂದು ಶಿಕ್ಷಕಿ ಸರೋಜ ಕಿತ್ತೂರ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಮಾತೃಭಾರತಿ ಪರಿಷತ್ತಿನ ಅಡಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ತಯುಕ್ತ ಸಾಧಕ ಮಾತೋಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ತ್ರೀಯನ್ನು ದೇವತೆಯಂತೆ ಪೂಜಿಸುವ ನಾಡು ನಮ್ಮ ಭಾರತವಾಗಿದೆ. ಹೆಣ್ಣು ಹೆಣ್ಣಿಗೆ ಶತ್ರು ಆಗಬಾರದು. ಹೆಣ್ಣು ಸಹೋದರಿ, ಮಡದಿ, ತಾಯಿ ಇತ್ಯಾದಿಯಾಗಿ ತನ್ನ ಕೆಲಸವನ್ನು ನಿರ್ವಹಿಸುತ್ತಾಳೆ. ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಇವತ್ತಿನ ದಿನ ಮಹಿಳೆ ಸಾಧನೆ ಮಾಡಲು ಹೊರಟಿದ್ದಾಳೆ. ಮಹಿಳಾ ಸಬಲೀಕರಣಕ್ಕಾಗಿ ಹೋರಾಡಬೇಕಾಗಿದೆ. ನಾವೆಲ್ಲ ದೇಹ ಎನ್ನುವ ಭಾವನೆಗಿಂತ ದೇಹಿಯೆನ್ನುವ ಭಾವನೆಯನ್ನು ಅರಿತುಕೊಳ್ಳಬೇಕಾಗಿದೆ. ಆವಾಗಲೆ ನಮ್ಮ ಪ್ರಯತ್ನ ಯಶಸ್ಸನ್ನು ಕಾಣುತ್ತದೆ ಎಂದರು.
ಜಾನಪದ ಸಾಹಿತ್ಯದ ಮೂಲಕ ತಾಲೂಕಿನಾದ್ಯಂತ ಚಿರಪರಿಚಿತರಾದ ಶಿವಮ್ಮ ಬಿರಾದಾರ ಮತ್ತು ಲಕ್ಷ್ಮೀ ವಾಲಿಕಾರ ಈರ್ವರಿಗೆ ಸಾಧಕ ಮಾತೋಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಸ್ಥೆಯ ನಿರ್ದೇಶಕಿ ಲೀಲಾ ಭಟ್ಟ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಬಿ.ಪಿ.ಕುಲಕರ್ಣಿ, ಸಂಸ್ಥೆಯ ಕಾರ್ಯದರ್ಶಿ ಪ್ರಭು ಕಡಿ, ನಿರ್ದೇಕರಾದ ಪರಶುರಾಮ ಪವಾರ, ಬಸವರಾಜ ನಾಲತವಾಡ, ಮಾತೃ ಭಾರತಿ ಪರಿಷತ್ತಿನ ಅದ್ಯಕ್ಷರಾದ ಶ್ರೀದೇವಿ ಪತ್ತಾರ, ಉಪಾಧ್ಯಕ್ಷ ಅಕ್ಕಮಾಹಾದೇವಿ ಪೊಲೇಶಿ. ಕಾರ್ಯದರ್ಶಿ ರಶ್ಮಿ ತೇಲಂಗಿ, ಭಾರತಿ ಪಾಟೀಲ್, ಮಹಾದೇವಿ ಕಂಠಿ, ಸುನಂದಾ ಬೇವಿನಗಿಡ, ಗುರುಬಾಯಿ ತಂಗಡಗಿ, ಸರಸ್ವತಿ ಮಡಿವಾಳರ, ಜಿ.ಜೆ.ಪಾದಗಟ್ಟಿ, ಕಿರಣ ಕಡಿ, ರಮೇಶ ಮಡಿವಾಳರ್, ಬಿ.ಆರ್.ಬೆಳ್ಳಿಕಟ್ಟಿ, ಗೀತಾ ಇಲ್ಲೂರ, ರೂಪಾ ನಾಟಿಕರ್, ಮಂಜುಳಾ ದಶರಥ, ಭಾಗ್ಯ ಸಿದ್ದಾಪೂರ, ಗುಂಡು ಬಡಿಗೇ, ಶಾಹಿನ ನಾಲತವಾಡ, ಸುಮಾ ಬಳಗಾನೂರ, ಮೀನಾಕ್ಷಿ ಗಣಾಚಾರಿ ಸೇರಿದಂತೆ ಮತ್ತೀತರರು ಇದ್ದರು.
ಶಾರದಾ ಗಸ್ತಿಗಾರ ಪ್ರಾರ್ಥಿಸಿದರು. ಶಾಂತಾ ಭಟ್ಟ ಪ್ರಾಸ್ತವಿಕದೊಂದಿಗೆ ಸ್ವಾಗತಿಸಿದರು. ಮಂಜುನಾಥ ಪಡದಾಳಿ ಪ್ರಶಸ್ತಿ ಭಾಜನರನ್ನ ಪರಿಚಯಿಸಿದರು. ನಂದಿನಿ ಪಾಟೀಲ ನಿರೂಪಿಸಿದರು. ರಂಜಿತಾ ಭಟ್ಟ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

