Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ಪ್ರತಿಯೊಬ್ಬರೂ ಒಂದಿಲ್ಲೊಂದು ಸಂದರ್ಭದಲ್ಲಿ ಗ್ರಾಹಕರು ಆಗುತ್ತಾರೆ. ಕೆಲ ಸಂದರ್ಭದಲ್ಲಿ ಗ್ರಾಹಕರಿಗೆ ಅನ್ಯಾಯವಾಗುತ್ತಿರುವದು ಕಂಡುಬರುತ್ತಿದೆ. ಗ್ರಾಹಕರು ವ್ಯವಹರಿಸುವಾಗ ಜಾಗೃತಿ ವಹಿಸುವ ಜೊತೆಗೆ ಗ್ರಾಹಕರ ಹಕ್ಕುಗಳ ಬಗ್ಗೆ ಅರಿತುಕೊಳ್ಳುವುದು ತುಂಬಾ ಮುಖ್ಯವಾಗಿದೆ ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೋಡೆ ಹೇಳಿದರು.ಪಟ್ಟಣದ ಅಸ್ಕಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವಿಶ್ವಗ್ರಾಹಕರ ಹಕ್ಕುಗಳ ದಿನಾಚರಣೆಯಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಯಾವುದೇ ಒಂದು ವಸ್ತು ಖರೀದಿಸಲು ಹೋದ ಸಂದರ್ಭದಲ್ಲಿ ದಲ್ಲಾಳಿಗಳಿಂದ ಮೋಸ ಹೋಗಬಾರದೆಂದರೆ ನಾವು ನಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ತಾಲೂಕು ಕಾನೂನು ಸೇವಾ ಸಮಿತಿಯಿಂದ ಮಹಿಳೆಯರು, ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ, ವಿಕಲಚೇತನರು ಹಾಗೂ ರೂ. ೩ ಲಕ್ಷ ಆದಾಯವಿದ್ದವರು ಉಚಿತ ಕಾನೂನು ಸಲಹೆ ಪಡೆದುಕೊಳ್ಳಬಹುದು. ರಾಷ್ಟ್ರೀಯ ಲೋಕಅದಾಲತನಲ್ಲಿ ಅನೇಕ ಪ್ರಕರಣಗಳನ್ನು ರಾಜೀ ಸಂಧಾನ ಮೂಲಕ ಬಗೆಹರಿಸಿಕೊಳ್ಳಬಹುದು. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ನಾವದಗಿ ಗ್ರಾಮದಲ್ಲಿ ಮೌನಾನುಷ್ಠಾನ ಮಂಗಲೋತ್ಸವ ಹಾಗೂ ಧರ್ಮಸಭೆ ತಾಳಿಕೋಟಿ: ಮನುಷ್ಯ ಜೀವನದಲ್ಲಿ ಭೋಗಗಳ ದಾಸನಾಗಬಾರದು ಧರ್ಮವಂತನಾಗಿ ದಾನ-ದಾಸೋಹ ದಂಥಹ ಉದಾತ್ತ ಗುಣಗಳನ್ನು ಬೆಳೆಸಿ ಕೊಳ್ಳಬೇಕು. ಸತ್ಕರ್ಮಗಳನ್ನು ಮಾಡುವ ಅವಕಾಶ ಸಿಕ್ಕಾಗ ಅದನ್ನು ಕಳೆದು ಕೊಳ್ಳಬಾರದು ಸತ್ಕರ್ಮಗಳಿಂದಲೇ ಸ್ವರ್ಗ ಪ್ರಾಪ್ತವಾಗುತ್ತದೆ ಎಂದು ರಾಷ್ಟ್ರೀಯ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರು ಹಾಗೂ ಜ್ಯೋತಿಷ್ಯ ರತ್ನ ಶ್ರೀರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ನಾವದಗಿ ಗ್ರಾಮದ ರಾಜಗುರು ಶ್ರೀ ಪರ್ವತೇಶ್ವರ ಸಂಸ್ಥಾನ ಬೃಹನ್ ಮಠದ ಶ್ರೀ ಷ.ಬ್ರ. ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರ 11ದಿನಗಳ ಮೌನಾನುಸ್ಟಾನ ಮಂಗಲೋತ್ಸವ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯ ಸಮ್ಮುಖವನ್ನು ವಹಿಸಿ ಅವರು ಆಶೀರ್ವಚನ ನೀಡಿದರು. ಪ್ರಸ್ತಾವಿಕವಾಗಿ ಮಾತನಾಡಿದ ಢವಳಗಿ ಘನಮಟೇಶ್ವರ ಮಠದ ಶ್ರೀಗಳು ಮೌನಾನುಷ್ಠಾನ ಅಂದರೆ ತನ್ನನ್ನು ತಾನು ಶುದ್ಧೀಕರಿಸುವುದು ಆತ್ಮ ಉದ್ಧಾರ ಮಾಡಿಕೊಳ್ಳುವುದು ಎಂದಾಗಿದೆ ಇದೊಂದು ವಿಶಿಷ್ಟ ಸಾಧನೆಯ ಹೆಸರು ಇದರಿಂದ ಗುರು ಆದವರಿಗೆ ವಿಶೇಷ ಸಾಮರ್ಥ್ಯ ಸಿಗುತ್ತದೆ ಇದು ಭಕ್ತರನ್ನು ಸಂಸ್ಕರಿಸಲು ಅತ್ಯಗತ್ಯವಾಗಿದೆ. ಇದನ್ನು ನಿರಂತರವಾಗಿ ಮಾಡಲೇಬೇಕಾಗುತ್ತದೆ. ಗುರು ಪಟ್ಟಾಧಿಕಾರದ…
B***ಸತ್ಕರ್ಮಗಳಿಂದ ಪುಣ್ಯಪ್ರಾಪ್ತಿ :ರಾಮಲಿಂಗಯ್ಯ ಶ್ರೀ ತಾಳಿಕೋಟಿ: ಮನುಷ್ಯ ಜೀವನದಲ್ಲಿ ಭೋಗಗಳ ದಾಸನಾಗಬಾರದು ಧರ್ಮವಂತನಾಗಿ ದಾನ-ದಾಸೋಹ ದಂಥಹ ಉದಾತ್ತ ಗುಣಗಳನ್ನು ಬೆಳೆಸಿ ಕೊಳ್ಳಬೇಕು. ಸತ್ಕರ್ಮಗಳನ್ನು ಮಾಡುವ ಅವಕಾಶ ಸಿಕ್ಕಾಗ ಅದನ್ನು ಕಳೆದು ಕೊಳ್ಳಬಾರದು ಸತ್ಕರ್ಮಗಳಿಂದಲೇ ಸ್ವರ್ಗ ಪ್ರಾಪ್ತವಾಗುತ್ತದೆ ಎಂದು ರಾಷ್ಟ್ರೀಯ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರು ಹಾಗೂ ಜ್ಯೋತಿಷ್ಯ ರತ್ನ ಶ್ರೀರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ನಾವದಗಿ ಗ್ರಾಮದ ರಾಜಗುರು ಶ್ರೀ ಪರ್ವತೇಶ್ವರ ಸಂಸ್ಥಾನ ಬೃಹನ್ ಮಠದ ಶ್ರೀ ಷ.ಬ್ರ. ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರ 11ದಿನಗಳ ಮೌನಾನುಸ್ಟಾನ ಮಂಗಲೋತ್ಸವ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯ ಸಮ್ಮುಖವನ್ನು ವಹಿಸಿ ಅವರು ಆಶೀರ್ವಚನ ನೀಡಿದರು. ಪ್ರಸ್ತಾವಿಕವಾಗಿ ಮಾತನಾಡಿದ ಢವಳಗಿ ಘನಮಟೇಶ್ವರ ಮಠದ ಶ್ರೀಗಳು ಮೌನಾನುಷ್ಠಾನ ಅಂದರೆ ತನ್ನನ್ನು ತಾನು ಶುದ್ಧೀಕರಿಸುವುದು ಆತ್ಮ ಉದ್ಧಾರ ಮಾಡಿಕೊಳ್ಳುವುದು ಎಂದಾಗಿದೆ ಇದೊಂದು ವಿಶಿಷ್ಟ ಸಾಧನೆಯ ಹೆಸರು ಇದರಿಂದ ಗುರು ಆದವರಿಗೆ ವಿಶೇಷ ಸಾಮರ್ಥ್ಯ ಸಿಗುತ್ತದೆ ಇದು ಭಕ್ತರನ್ನು ಸಂಸ್ಕರಿಸಲು ಅತ್ಯಗತ್ಯವಾಗಿದೆ. ಇದನ್ನು ನಿರಂತರವಾಗಿ ಮಾಡಲೇಬೇಕಾಗುತ್ತದೆ. ಗುರು ಪಟ್ಟಾಧಿಕಾರದ ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ…
ತಾಳಿಕೋಟಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಇದರ ವಿಸ್ತರಿಸಿದ ನೂತನ ಕಟ್ಟಡವನ್ನು ದೇವರ ಹಿಪ್ಪರಗಿ ಶಾಸಕರಾಜು ಗೌಡ ಪಾಟೀಲ ಹಾಗೂ ಮುದ್ದೇಬಿಹಾಳ ಶಾಸಕ. ಕರ್ನಾಟಕ ಸರ್ಕಾರದ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ. ಎಸ್. ನಾಡಗೌಡ (ಅಪ್ಪಾಜಿ) ಅವರು ಉದ್ಘಾಟಿಸಿದರು.ಪಟ್ಟಣ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಮೊದಲು 30 ಹಾಸಿಗೆಗಳ ಸೌಲಭ್ಯವಿದ್ದು ಹೆಚ್ಚುತ್ತಿರುವ ಒಳ ರೋಗಿಗಳ ಸಂಖ್ಯೆಯಿಂದಾಗಿ ತೊಂದರೆಯಾಗುತ್ತಿತ್ತು ಇದನ್ನು ತಪ್ಪಿಸಲು ಸುಮಾರು ರೂ. 1.61 ಕೋಟಿ ವೆಚ್ಚದಲ್ಲಿ ವಿಸ್ತರಿಸಿದ 10 ಹಾಸಿಗೆಗಳ ನೂತನ ಕಟ್ಟಡವನ್ನು ನಿರ್ಮಾಣವಾಡಲಾಗಿತ್ತು. ಇದನ್ನು ಉಭಯ ಶಾಸಕರು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು. ಈ ನೂತನ ಕಟ್ಟಡದಲ್ಲಿ ಹೆರಿಗೆ ವಿಭಾಗವನ್ನು ಮಾತ್ರನಡೆಸಲಾಗುವುದು ಎಂದು ಆರೋಗ್ಯ ಆಡಳಿತಾಧಿಕಾರಿ ಶ್ರೀಶೈಲ ಹುಕ್ಕೇರಿ ತಿಳಿಸಿದರು.ಉದ್ಘಾಟನಾ ಸಮಾರಂಭದಲ್ಲಿ ತಾಲೂಕಾ ಆರೊಗ್ಯಾಧಿಕಾರಿ ಸತೀಶ ತಿವಾರಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಕೆ. ಚೋರಗಸ್ತಿ. ಜಿಲ್ಲಾ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ್ ನಾವದಗಿ. ಮಡು ಸೌಕಾರ ಬಿರಾದಾರ. ಪ್ರಭುಗೌಡ ಮದರಕಲ್ಲ. ಸುರೇಶಧಣಿ ನಾಡಗೌಡ. ಶರಣುಧಣಿ ದೇಶಮುಖ. ಕಾಸೀಮಪಟೇಲ ಮೂಕಿಹಾಳ.…
ವಿಜಯಪುರ: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಕಾರ್ಯಕಾರಿ ಸಭೆಯಲ್ಲಿ ೧೯ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ ವ್ಹಿ ಡಿ ಐಹೊಳ್ಳಿ ಹಿರಿಯ ಸಾಹಿತಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅವರು ಮಾತನಾಡಿ, ಜಿಲ್ಲೆಯ ಹಿರಿಯ ಸಾಹಿತಿಗಳ ಆಯ್ಕೆ ಮುಕ್ತವಾಗಿ ಚರ್ಚಿಸಿ ಆಯ್ಕೆ ಮಾಡಿ ಎಂದು ಸಭೆಗೆ ವಿನಂತಿಸಿದರು.ಸಭೆಯ ಅಧ್ಯಕ್ಷ ಸ್ಥಾನ ಕಸಾಪ ಗೌರವಾಧ್ಯಕ್ಷ ಭಾರತಿ ಪಾಟೀಲ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಕಸಾಪ ಕಾರ್ಯಕಾರಿ ಸದಸ್ಯರುಗಳು ಮತ್ತು ಎಲ್ಲ ತಾಲ್ಲೂಕಿನ ಅಧ್ಯಕ್ಷರು ಹಾಗೂ ಸದಸ್ಯರುಗಳು ಮುಕ್ತ ಚರ್ಚಿಸಿ ಹಿರಿಯ ಸಾಹಿತಿಗಳು ಆದ ನಿವೃತ್ತ ಜೆ ಎಸ್ ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ವ್ಹಿ ಡಿ ಐಹೊಳ್ಳಿ ಅವರನ್ನು ಅಂತಿಮಗೊಳಿಸಿದರು. ಇದಕ್ಕೆ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದರು.ಸಭೆಯಲ್ಲಿ ಗೌರವ ಕೋಶಾಧ್ಯಕ್ಷ ಡಾ ಸಂಗಮೇಶ ಮೇತ್ರಿ, ಗೌರವ ಕಾರ್ಯದರ್ಶಿ ಸುಭಾಸಚಂದ್ರ ಕನ್ನೂರ, ಡಾ ಮಾಧವ…
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ಬೆಂಗಳೂರಿನ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಇವರ ಸಹಯೋಗದಲ್ಲಿ ‘ರಾಜಮಾತಾ ಜೀಜಾವುಮಾಸಾಹೇಬ್ ಅವರ ಜೀವನ ಮತ್ತು ಆದರ್ಶಗಳು’ ಎಂಬ ವಿಷಯದ ಕುರಿತು ಇದೇ ದಿ.೧೫ ರಂದು ಬೆಳಗ್ಗೆ ೧೧:೦೦ ಗಂಟೆಗೆ ವಿವಿಯ ಜ್ಞಾನಶಕ್ತಿ ಆವರಣದಲ್ಲಿ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮವನ್ನು ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ ತುಳಸಿಮಾಲ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕರ್ನಾಟಕ ರಾಜ್ಯ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶ ಪಾಗೋಜಿ ಭಾಗವಹಿಸಲಿದ್ದಾರೆ. ವಿಶೇಷ ಆಮಂತ್ರಿತರಾಗಿ ನಗರದ ಹಿರಿಯ ನ್ಯಾಯವಾದಿ ತುಳಸಿರಾಮ ಸೂರ್ಯವಂಶಿ, ಉದ್ಯಮಿ ವಿಜಯಕುಮಾರ ಚವ್ಹಾಣ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ಬಿ.ಶೇವಳಕರ ಹಾಗೂ ಮಹಾನಗರ ಪಾಲಿಕೆ ಸದಸ್ಯ ರಾಹುಲ ಜಾಧವ ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ವಹಿಸಲಿದ್ದಾರೆ.ತಾಂತ್ರಿಕ ಗೋಷ್ಠಿಗಳು:ಮೊದಲನೆಯ ತಾಂತ್ರಿಕ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ…
ವಿಜಯಪುರ: ಕೋವಿಡ್ -೧೯ ಅವಧಿಯಲ್ಲಿ ಸ್ಥಗಿತವಾಗಿದ್ದ ಇಬ್ರಾಹಿಂಪುರ ರೈಲು ನಿಲ್ದಾಣದ ರಿಜರ್ವಶನ್ ಕೌಂಟರ್ ನ್ನು ಪುನಃ ಪ್ರಾರಂಭಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹುಬ್ಬಳ್ಳಿ ಯ ಸೌತ್ ವೆಸ್ಟರ್ನ್ ರೈಲ್ವೆ ಇಲಾಖೆಯ ಜನರಲ್ ಮ್ಯಾನೇಜರ್ಗೆ ಪತ್ರವನ್ನು ಬರೆದಿದ್ದಾರೆ.
ವಿಜಯಪುರ: ಈ ಕಾಮರ್ಸ್ ನಲ್ಲಿ ವ್ಯಾಪಾರ ವಹಿವಾಟು ಮಾಡುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಅಪರಿಚಿತ ವ್ಯಕ್ತಿಗಳು ಅವರ ಹಣವನ್ನು ಮೋಸದಿಂದ ಸೆಳೆಯುವ ಸಾಧ್ಯತೆ ಇದ್ದು ಗ್ರಾಹಕರು ತಮ್ಮ ವಹಿವಾಟಿನ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ಕಳುಹಿಸಿದ ಸಂದೇಶಗಳನ್ನೂ ನಂಬಿ ಲಿಂಕ್ ಕ್ಲಿಕ್ ಅಥವಾ ವ್ಯಯಕ್ತಿಕ ಮಾಹಿತಿಗಳನ್ನು ನೀಡದೇ ಗ್ರಾಹಕರು ಜಾಗರೂಕತೆಯಿಂದ ವ್ಯವಹರಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಕುಂದರ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಆಹಾರ ಸುರಕ್ಷತಾ ಇಲಾಖೆ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ನ್ಯೂ ಸಂಸ್ಥೆ ಇವರ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಪ್ರಯುಕ್ತ ಗ್ರಾಹಕರಿಗೆ ನ್ಯಾಯಯುತ ಮತ್ತು ಜವಾಬ್ದಾರಿಯುತ ಕೃತಕ ಬುದ್ಧಿವಂತಿಕೆ ಕಾರ್ಯಕ್ರಮ ಉದ್ಘಾಟಿಸಿ…
ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ ಇಬ್ಬರು ವೈದ್ಯರು ಹಾಗೂ ಓರ್ವ ಎಂಜಿನೀಯರ್ ನಡೆಸಿದ ಸಂಶೋಧನೆಗೆ ಕೇಂದ್ರ ಸರಕಾರದಿಂದ ಪೇಟೆಂಟ್ ದೊರೆತಿದೆ.ಆಸ್ಪತ್ರೆಯ ಜಿಲ್ಲಾ ವಿಕಲಚೇತನ ಮತ್ತು ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಮತ್ತು ಅಂಗರಚನಾ ಶಾಸ್ತ್ರ ವಿಭಾಗದ ಡಾ. ಈಶ್ವರ ಬ. ಬಾಗೋಜಿ, ಎಂಜಿನೀಯರ್ ಕೆ. ಸಿ. ಮೊಹಂತಿ ಹಾಗೂ ಎಲಬು ಮತ್ತು ಕೀಲು ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಗಿರೀಶ ಖೋದ್ನಾಪೂರ ಅವರು ಜಂಟಿಯಾಗಿ ನಡೆಸಿ ಸಂಶೋಧನೆಗೆ ಪೇಟೆಂಟ್ ಲಭಿಸಿದೆ.ಎ ನೊವೆಲ್ ಫೋಲ್ಡೆಬಲ್ ಆರ್ಟಿಫಿಸಿಯಲ್ ಲೆಗ್(A Novel Foldable Artificial Leg) ಸಂಶೋಧನೆ ನಡೆಸಿದ್ದರು. 2020 ರಲ್ಲಿ ನಡೆಸಿದ ಈ ಸಂಶೋಧನೆ ಕೃತಕ ಅಂಗಾಂಗ ವಿಭಾಗದಲ್ಲಿ ಲಾಕಿಂಗ್ ಮತ್ತು ಅನ್‌ಲಾಕಿಂಗ್ ತಂತ್ರಜ್ಞಾನದಡಿ ಕರ್ನಾಟಕ ರಾಜ್ಯದಲ್ಲಿ ನಡೆಸಲಾದ ಪ್ರಥಮ ಸಂಶೋಧನೆ ಎಂಬ ಖ್ಯಾತಿಗೆ ಪಾತ್ರವಾಗಿದೆ.ವೈದ್ಯರು ಮತ್ತು ಎಂಜಿನೀಯರ್ ಪಡೆದಿರುವ ಪೇಟೆಂಟ್‌ಗೆ ವಿಶ್ವವಿದ್ಯಾಲಯದ ಕುಲಾಧಿಪತಿಯು ಆಗಿರುವ ಸಚಿವ ಎಂ. ಬಿ.…
ವಿಜಯಪುರ: ರೋಗಿಗಳು ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಂಡರೆ ಕಿಡ್ನಿಗೆ ಆಗುವ ಹಾನಿಯನ್ನು ತಪ್ಪಿಸಬಹುದು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಮೂತ್ರಜನಕಾಂಗ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಎಸ್. ಬಿ. ಪಾಟೀಲ ಹೇಳಿದ್ದಾರೆ.ಗುರುವಾರ ಆಸ್ಪತ್ರೆಯಲ್ಲಿ ಮೂತ್ರಜನಕಾಂಗ ರೋಗ ಹಾಗೂ ಮೂತ್ರಪಿಂಡ (ಕಿಡ್ನಿ) ಚಿಕಿತ್ಸಾ ವಿಭಾಗಗಳ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಕಿಡ್ನಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.ಕಿಡ್ನಿ ಆರೋಗ್ಯ ಮುಖ್ಯವಾಗಿದೆ. ಹೀಗಾಗಿ ಸಾರ್ವಜನಿಕರು ವರ್ಷಕ್ಕೆ ಒಮ್ಮೆಯಾದರೂ ಕಿಡ್ನಿ ತಪಾಸಣೆ ಮಾಡಿಸಿಕೊಳ್ಳಬೇಕು. ಸಮಸ್ಯೆಗಳಿದ್ದರೆ ವೈದ್ಯರ ಸಲಹೆಯಂತೆ ಔಷಧಿ ಪಡೆದರೆ ಹಾನಿಯನ್ನು ತಪ್ಪಿಸಬಹುದು. ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಕರ್ನಾಟಕ ಸರಕಾರದ ಜೀವಸಾರ್ಥಕತೆ ಅಡಿಯಲ್ಲಿ ಕೆಡವರಿಕ್ ಕಿಡ್ನಿ ಟ್ರಾನ್ಸಪ್ಲ್ತಾಂಟ್ ಮಾಡಲು ಮಾನ್ಯತೆಯನ್ನು ಪಡೆದಿದೆ. ಕಿಡ್ನಿ ಕಸಿಗೆ ಒಳಗಾಗಬೇಕಿರುವ ರೋಗಿಗಳ ಹೆಸರು ನೋಂದಣಿ ಮಾಡಿಕೊಳ್ಳಲು ಆಸ್ಪತ್ರೆಯ ಸಂಪರ್ಕಾಧಿಕಾರಿಯನ್ನು ಭೇಟಿ ಮಾಡಿ ವೈದ್ಯಕೀಯ ದಾಖಲಾತಿಗಳನ್ನು ಒದಗಿಸಬೇಕು. ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿಯೂ ಕಿಡ್ನಿ ಕಸಿ…
