ವಿಜಯಪುರ: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಕಾರ್ಯಕಾರಿ ಸಭೆಯಲ್ಲಿ ೧೯ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ ವ್ಹಿ ಡಿ ಐಹೊಳ್ಳಿ ಹಿರಿಯ ಸಾಹಿತಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅವರು ಮಾತನಾಡಿ, ಜಿಲ್ಲೆಯ ಹಿರಿಯ ಸಾಹಿತಿಗಳ ಆಯ್ಕೆ ಮುಕ್ತವಾಗಿ ಚರ್ಚಿಸಿ ಆಯ್ಕೆ ಮಾಡಿ ಎಂದು ಸಭೆಗೆ ವಿನಂತಿಸಿದರು.
ಸಭೆಯ ಅಧ್ಯಕ್ಷ ಸ್ಥಾನ ಕಸಾಪ ಗೌರವಾಧ್ಯಕ್ಷ ಭಾರತಿ ಪಾಟೀಲ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಕಸಾಪ ಕಾರ್ಯಕಾರಿ ಸದಸ್ಯರುಗಳು ಮತ್ತು ಎಲ್ಲ ತಾಲ್ಲೂಕಿನ ಅಧ್ಯಕ್ಷರು ಹಾಗೂ ಸದಸ್ಯರುಗಳು ಮುಕ್ತ ಚರ್ಚಿಸಿ ಹಿರಿಯ ಸಾಹಿತಿಗಳು ಆದ ನಿವೃತ್ತ ಜೆ ಎಸ್ ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ವ್ಹಿ ಡಿ ಐಹೊಳ್ಳಿ ಅವರನ್ನು ಅಂತಿಮಗೊಳಿಸಿದರು. ಇದಕ್ಕೆ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದರು.
ಸಭೆಯಲ್ಲಿ ಗೌರವ ಕೋಶಾಧ್ಯಕ್ಷ ಡಾ ಸಂಗಮೇಶ ಮೇತ್ರಿ, ಗೌರವ ಕಾರ್ಯದರ್ಶಿ ಸುಭಾಸಚಂದ್ರ ಕನ್ನೂರ, ಡಾ ಮಾಧವ ಗುಡಿ ಜಿಲ್ಲಾ ಪದಾಧಿಕಾರಿಗಳಾದ ಅಭಿಷೇಕ ಚಕ್ರವರ್ತಿ, ಮಹ್ಮದ್ ಗೌಸ್ ಹವಾಲ್ದಾರ್, ರಾಜಾಸಾಬ ಶಿವನಗುತ್ತಿ, ಸುಖದೇವಿ ಅಲಬಾಳಮಠ ತಾಲೂಕ ಘಟಕದ ಅಧ್ಯಕ್ಷರುಗಳಾದ ಡಾ ಆನಂದ ಕುಲಕರ್ಣಿ, ಸಿದ್ದರಾಮಯ್ಯ ಲಕ್ಕುಂಡಿಮಠ, ಜಿ ಪಿ ಬಿರಾದಾರ, ಶಿವಾನಂದ ಡೋಣುರ, ಶಿವಾನಂದ ಬಡಾನೂರ, ಅಶೋಕ ಆಸಂಗಿ, ರೇವಣಸಿದ್ದಪ್ಪ ಕೊಪ್ಪದ ಎಸ್ ಆಯ್ ಬಿರಾದಾರ, ದತ್ತಾತ್ರೇಯ ಮಳಖೇಡ, ರಾಘವೇಂದ್ರ ಕುಲಕರ್ಣಿ, ಸಿದ್ದಪ್ಪ ಮಾನೆ ಮುಂತಾದವರು ಉಪಸ್ಥಿತಿರಿದ್ದು ಸರ್ವಾನುಮತದಿಂದ ಒಪ್ಪಿಗೆ ನೀಡಿದರು.
ಸಭೆಯಲ್ಲಿ ಮಕ್ಬುಲ್ ಅಂಗಡಗೇರಿ, ಶಿವಪುತ್ರ ಅಂಕದ, ರೂಪಾ ರಜಪೂತ, ಸಾವಿತ್ರಿ ಮೊನಾಜೀ, ಗಂಗಮ್ಮಾ ರಡ್ಡಿ, ಲತಾ ಗುಂಡಿ, ಬಸವರಾಜ ಮೇಟಿ,ಜಯಶ್ರೀ ಹಿರೇಮಠ ಮಹಾದೇವಿ ತೆಲಗಿ, ಬಸವರಾಜ್ ಕೋನರೆಡ್ಡಿ, ಗೀತಾ ಕುಲಕರ್ಣಿ, ಶಿಲ್ಪ ಬಸ್ಮೆ, ಕಮಲ ಮೂರಾಳ, ಯುವರಾಜ ಚೋಳಕೆ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ ವ್ಹಿ.ಡಿ.ಐಹೊಳ್ಳಿ ಆಯ್ಕೆ
Related Posts
Add A Comment

