ವಿಜಯಪುರ: ರೋಗಿಗಳು ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಂಡರೆ ಕಿಡ್ನಿಗೆ ಆಗುವ ಹಾನಿಯನ್ನು ತಪ್ಪಿಸಬಹುದು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಮೂತ್ರಜನಕಾಂಗ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಎಸ್. ಬಿ. ಪಾಟೀಲ ಹೇಳಿದ್ದಾರೆ.
ಗುರುವಾರ ಆಸ್ಪತ್ರೆಯಲ್ಲಿ ಮೂತ್ರಜನಕಾಂಗ ರೋಗ ಹಾಗೂ ಮೂತ್ರಪಿಂಡ (ಕಿಡ್ನಿ) ಚಿಕಿತ್ಸಾ ವಿಭಾಗಗಳ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಕಿಡ್ನಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕಿಡ್ನಿ ಆರೋಗ್ಯ ಮುಖ್ಯವಾಗಿದೆ. ಹೀಗಾಗಿ ಸಾರ್ವಜನಿಕರು ವರ್ಷಕ್ಕೆ ಒಮ್ಮೆಯಾದರೂ ಕಿಡ್ನಿ ತಪಾಸಣೆ ಮಾಡಿಸಿಕೊಳ್ಳಬೇಕು. ಸಮಸ್ಯೆಗಳಿದ್ದರೆ ವೈದ್ಯರ ಸಲಹೆಯಂತೆ ಔಷಧಿ ಪಡೆದರೆ ಹಾನಿಯನ್ನು ತಪ್ಪಿಸಬಹುದು. ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಕರ್ನಾಟಕ ಸರಕಾರದ ಜೀವಸಾರ್ಥಕತೆ ಅಡಿಯಲ್ಲಿ ಕೆಡವರಿಕ್ ಕಿಡ್ನಿ ಟ್ರಾನ್ಸಪ್ಲ್ತಾಂಟ್ ಮಾಡಲು ಮಾನ್ಯತೆಯನ್ನು ಪಡೆದಿದೆ. ಕಿಡ್ನಿ ಕಸಿಗೆ ಒಳಗಾಗಬೇಕಿರುವ ರೋಗಿಗಳ ಹೆಸರು ನೋಂದಣಿ ಮಾಡಿಕೊಳ್ಳಲು ಆಸ್ಪತ್ರೆಯ ಸಂಪರ್ಕಾಧಿಕಾರಿಯನ್ನು ಭೇಟಿ ಮಾಡಿ ವೈದ್ಯಕೀಯ ದಾಖಲಾತಿಗಳನ್ನು ಒದಗಿಸಬೇಕು. ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿಯೂ ಕಿಡ್ನಿ ಕಸಿ ಮಾಡಲು ಆಸ್ಪತ್ರೆ ಮಾನ್ಯತೆ ಪಡೆದಿದೆ. ಈ ಯೋಜನೆಗಳ ಅಡಿಯಲ್ಲಿ ಕಿಡ್ನಿ ರೋಗಿಗಳಿಗೆ ಉಚಿತವಾಗಿ ಕಿಡ್ನಿ ಕಸಿ ಮಾಡಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ವಿಜಯಕುಮಾರ ಕಲ್ಯಾಣಪ್ಪಗೊಳ ಅವರು ಕಿಡ್ನಿಯ ಆರೈಕೆ ಮತ್ತು ಕಿಡ್ನಿ ಸುರಕ್ಷತೆಯ ಜಾಗೃತಿ ಅಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ. ವಿನಯ ಕುಂದರಗಿ, ಡಾ. ಸಂದೀಪ ಪಾಟೀಲ, ಡಾ. ಸಂತೋಷ ಪಾಟೀಲ, ಡಾ. ಮನೋಜ, ಡಾ. ವಿಕಾಸ, ಡಾ. ನವಾಜ, ಡಾ. ದ್ರುವ, ಡಾ. ಅನುಪಮ, ಡಾ. ಗುಲಶನ್, ಡಾ. ಸಿದ್ಧಾರ್ಥ, ಡಾ. ವೀರಪ್ಪ ಮುಂತಾದವರು ಉಪಸ್ಥಿತರಿದ್ದರು.
ಶಾಂತೇಶ ಸಲಗರೆ ವಂದಿಸಿದರು. ಚನ್ನಬಸವ ಕೊಟಗಿ ಮತ್ತು ದಶವಂತ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

