ತಾಳಿಕೋಟಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಇದರ ವಿಸ್ತರಿಸಿದ ನೂತನ ಕಟ್ಟಡವನ್ನು ದೇವರ ಹಿಪ್ಪರಗಿ ಶಾಸಕರಾಜು ಗೌಡ ಪಾಟೀಲ ಹಾಗೂ ಮುದ್ದೇಬಿಹಾಳ ಶಾಸಕ. ಕರ್ನಾಟಕ ಸರ್ಕಾರದ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ. ಎಸ್. ನಾಡಗೌಡ (ಅಪ್ಪಾಜಿ) ಅವರು ಉದ್ಘಾಟಿಸಿದರು.
ಪಟ್ಟಣ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಮೊದಲು 30 ಹಾಸಿಗೆಗಳ ಸೌಲಭ್ಯವಿದ್ದು ಹೆಚ್ಚುತ್ತಿರುವ ಒಳ ರೋಗಿಗಳ ಸಂಖ್ಯೆಯಿಂದಾಗಿ ತೊಂದರೆಯಾಗುತ್ತಿತ್ತು ಇದನ್ನು ತಪ್ಪಿಸಲು ಸುಮಾರು ರೂ. 1.61 ಕೋಟಿ ವೆಚ್ಚದಲ್ಲಿ ವಿಸ್ತರಿಸಿದ 10 ಹಾಸಿಗೆಗಳ ನೂತನ ಕಟ್ಟಡವನ್ನು ನಿರ್ಮಾಣವಾಡಲಾಗಿತ್ತು. ಇದನ್ನು ಉಭಯ ಶಾಸಕರು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು. ಈ ನೂತನ ಕಟ್ಟಡದಲ್ಲಿ ಹೆರಿಗೆ ವಿಭಾಗವನ್ನು ಮಾತ್ರ
ನಡೆಸಲಾಗುವುದು ಎಂದು ಆರೋಗ್ಯ ಆಡಳಿತಾಧಿಕಾರಿ ಶ್ರೀಶೈಲ ಹುಕ್ಕೇರಿ ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ತಾಲೂಕಾ ಆರೊಗ್ಯಾಧಿಕಾರಿ ಸತೀಶ ತಿವಾರಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಕೆ. ಚೋರಗಸ್ತಿ. ಜಿಲ್ಲಾ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ್ ನಾವದಗಿ. ಮಡು ಸೌಕಾರ ಬಿರಾದಾರ. ಪ್ರಭುಗೌಡ ಮದರಕಲ್ಲ. ಸುರೇಶಧಣಿ ನಾಡಗೌಡ. ಶರಣುಧಣಿ ದೇಶಮುಖ. ಕಾಸೀಮಪಟೇಲ ಮೂಕಿಹಾಳ. ಇಬ್ರಾಹಿಂ ಮನ್ಸೂರ.ಸಿಕಂದರಸಾಬ ವಠಾರ. ಪುರಸಭೆ ಸದಸ್ಯರಾದ ಅಕ್ಕಮಹಾದೇವಿ ಕಟ್ಟಿಮನಿ. ಮಲ್ಲಿಕಾರ್ಜುನ ಪಟ್ಟಣಶೆಟ್ಟಿ. ಮುಸ್ತಫಾ ಚೌಧರಿ. ಪರಶುರಾಮ ತಂಗಡಗಿ ಹಾಗೂ ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

